ಅಂಬೇಡ್ಕರ್‌ ಭೇಟಿಯಿಂದಾಗಿ ಕೋರೆಗಾಂವ್‌ ಇತಿಹಾಸ ಬಯಲಿಗೆ

KannadaprabhaNewsNetwork |  
Published : Jan 02, 2025, 12:30 AM IST
ಕ್ಯಾಪ್ಷನ1ಕೆಡಿವಿಜಿ38 ದಾವಣಗೆರೆಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ವಿಜಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಇತಿಹಾಸದ ಪುಟಗಳಲ್ಲಿ ಶೋಷಿತ ಸಮುದಾಯದ ಹೋರಾಟವು ಅಡಗಿಹೋಗಿವೆ. ಅದರಲ್ಲಿ 1818ರಲ್ಲಿ ಮಹರ್ ಸೈನಿಕರು ಮತ್ತು ಮಹಾರಾಷ್ಟ್ರದ ಪೇಶ್ವೆಗಳ ನಡುವೆ ನಡೆದ ಭೀಮಾ ಕೋರೆಗಾಂವ್ ಯುದ್ದವು ಪ್ರಮುಖವಾಗಿದೆ ಎಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯ ಮುಖಂಡ ಸತೀಶ ಅರವಿಂದ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಭೀಮಾ ಕೋರೆಗಾಂವ್‌ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸತೀಶ ಅರವಿಂದ ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇತಿಹಾಸದ ಪುಟಗಳಲ್ಲಿ ಶೋಷಿತ ಸಮುದಾಯದ ಹೋರಾಟವು ಅಡಗಿಹೋಗಿವೆ. ಅದರಲ್ಲಿ 1818ರಲ್ಲಿ ಮಹರ್ ಸೈನಿಕರು ಮತ್ತು ಮಹಾರಾಷ್ಟ್ರದ ಪೇಶ್ವೆಗಳ ನಡುವೆ ನಡೆದ ಭೀಮಾ ಕೋರೆಗಾಂವ್ ಯುದ್ದವು ಪ್ರಮುಖವಾಗಿದೆ ಎಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯ ಮುಖಂಡ ಸತೀಶ ಅರವಿಂದ ಹೇಳಿದರು.

ನಗರದ ಬೂದಾಳು ರಸ್ತೆಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ ಶೋಷಣೆ ಮತ್ತು ಗುಲಾಮಗಿರಿಯ ವಿರುದ್ಧ ಎರಡನೇ ಭಾಜಿರಾವ್‌ನ 28000 ಪೇಶ್ವೆ ಸೈನಿಕರನ್ನು 500 ಸ್ವಾಭಿಮಾನಿಗಳಾದ ಮಹರ್ ಸೈನಿಕರು ಹಗಲು- ರಾತ್ರಿ ಯುದ್ದ ಮಾಡಿ ವಿಜಯಶಾಲಿಯಾಗಿರುವುದು ಅವಿಸ್ಮರಣೀಯ ಎಂದರೆ ತಪ್ಪಾಗಲಾರದು ಎಂದರು.

ಪುಣೆಯ ಭೀಮಾ ನದಿ ದಡದಲ್ಲಿ ನಡೆದ ಯುದ್ಧದ ನೆನಪಿಗಾಗಿ ವಿಜಯ ಸ್ತಂಭವನ್ನು ನಿರ್ಮಿಸಲಾಗಿದೆ. ಈ ಬಗ್ಗೆ ಭಾರತದಲ್ಲಿ ಎಲ್ಲೂ ಅದರ ಕುರುಹು ಇರಲಿಲ್ಲ. ಅಂಬೇಡ್ಕರ್‌ ಅವರು ಲಂಡನ್‌ನಲ್ಲಿ ಓದುತ್ತಿದ್ದಾಗ ಕೆಲವೊಂದು ದಾಖಲಾತಿಗಳಲ್ಲಿ ಕೋರೆಗಾಂವ್‌ನ ಕುರುಹು ಕುರಿತು ಮಾಹಿತಿ ಲಭ್ಯವಾಗುತ್ತದೆ. 1927ರಲ್ಲಿ ಅಂಬೇಡ್ಕರ್ ಅವರು ವಿಜಯ ಸ್ತಂಭಕ್ಕೆ ಭೇಟಿ ನೀಡುತ್ತಾರೆ. ಅಲ್ಲಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ತಂಭದ ಸಾಹಸಗಾಥೆ ದೇಶದ್ಯಾಂತ ಪಸರಿಸುತ್ತದೆ ಮತ್ತು ಆ ವಿಜಯವನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಆದಿಲ್ ಖಾನ್ ಕರ್ನಾಟಕ ಜನಶಕ್ತಿ ಅಧ್ಯಕ್ಷರು, ಪವಿತ್ರ ಕರ್ನಾಟಕ ಜನಶಕ್ತಿ ಕಾರ್ಯದರ್ಶಿ, ಯಲ್ಲಪ್ಪ, ಆಂಜಿನಪ್ಪ, ರವೀಂದ್ರ, ಸುರೇಶ್, ಅಶ್ಫಾಕ್, ಹನುಮಂತಪ್ಪ ಕರೂರು, ಹನುಮಂತಪ್ಪ, ಯಮಾನೂರಿ, ಬಸವರಾಜ್ ಹಾಗೂ ದಲಿತ, ದಮನಿತರು. ಅಂಬೇಡ್ಕರ್ ಅಭಿಮಾನಿಗಳು ಮತ್ತು ಪ್ರಗತಿಪರರು ಭಾಗಿಯಾಗಿದ್ದರು.

- - - -1ಕೆಡಿವಿಜಿ38:

ದಾವಣಗೆರೆಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ವಿಜಯೋತ್ಸವ ಆಚರಿಸಲಾಯಿತು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?