ರಾಮನಗರ ಸರಕಾರಿ ಶಾಲೆಯನ್ನು ಪುರಸಭೆ ಅನುದಾನದಿಂದ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರ ಸರಕಾರಿ ಶಾಲೆಯನ್ನು ಪುರಸಭೆ ಅನುದಾನದಿಂದ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ ತಿಳಿಸಿದರು.ಪಟ್ಟಣದ ರಾಮನಗರ ಸ.ಹಿ.ಮಾ. ಶಾಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನ ನೂತನ ಗ್ರಂಥಾಲಯ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಶಾಲೆ ಆವರಣದಲ್ಲಿ ಒಟ್ಟು ₹10ಲಕ್ಷ ಅಂದಾಜು ಮೊತ್ತದಲ್ಲಿ ನೆಲಹಾಸು ಹಾಕಲಾಗುವುದು. ಸುತ್ತುಗೋಡೆ ನಿರ್ಮಾಣಕ್ಕೆ ₹6ಲಕ್ಷ ಅಂದಾಜು ಮೊತ್ತದ ಅನುದಾನ ಒದಗಿಸಿದೆ. ಪ್ರಮುಖವಾಗಿ ಶಾಲೆ ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಪೂರಕವಾಗಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ ಸ್ಥಾಪಿಸಲಾಗಿದೆ. ಗ್ರಂಥಾಲಯಕ್ಕೆ ಒಟ್ಟು 300ಕ್ಕೂ ಹೆಚ್ಚು ಪುಸ್ತಕ ಒದಗಿಸಲಾಗಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಸಮಾಜ ಸುಧಾರಣೆಯ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂತರವಾಗಿ ಗ್ರಂಥಾಲಯದ ಲಾಭವನ್ನು ಪಡೆದುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಾಲೆಯ ಅಭಿವೃದ್ಧಿಗೆ ಶಿಕ್ಷಕರು, ಎಸ್‌ಡಿಎಂಸಿಯವರು ಸಹಕಾರ ನೀಡುವುದರಿಂದ ಸಾಕಷ್ಟು ಅಭಿವೃಧ್ದಿ ಕೆಲಸಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಗ್ಯಾರಂಟಿ ಜಿಲ್ಲಾ ಪ್ರಾಧಿಕಾರದ ಎಚ್. ಪರಶುರಾಮ, ಗ್ರಾಪಂ ಮಾಜಿ ಅಧ್ಯಕ್ಷ ಜಿ. ಹನುಮಂತಪ್ಪ, ಮುಖಂಡರಾದ ಸಿಖಂದರ್ ಖಾನ್, ಎಂ. ಪ್ರಕಾಶ್, ಬಿಆರ್‌ಪಿ ಡಾ. ಪರಮೇಶ್ವರಯ್ಯ ಸೊಪ್ಪಿಮಠ, ಎಸ್‌ಡಿಎಂಸಿ ಅಧ್ಯಕ್ಷೆ ಗಂಗಮ್ಮ, ನಿಕಟಪೂರ್ವ ಅಧ್ಯಕ್ಷ ಶಾಬುದ್ದೀನ್, ಸದಸ್ಯರಾದ ಹನುಮಂತಮ್ಮ, ಮೈಲಮ್ಮ, ಮುಖ್ಯಶಿಕ್ಷಕರಾದ ರಾಮಪ್ಪ, ಕೃಷ್ಣನಾಯ್ಕ, ಶಿಕ್ಷಕರಾದ ದೇವಿರಮ್ಮ, ಮುರುಘರಾಜೇಂದ್ರ ಸೊನ್ನದ, ಟಿ.ಮೂಗಪ್ಪ, ದೇವಿರಮ್ಮ, ಗೀತಾ, ರೇಖಾ ಇತರರಿದ್ದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಸ.ಮಾ.ಹಿ.ಪ್ರಾ. ಶಾಲೆಯ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನ ನೂತನ ಗ್ರಂಥಾಲಯಕ್ಕೆ ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.