ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಿಪ್ಪಾಣಿ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದ ಅವರು, ಚಿಕ್ಕೋಡಿಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರಿಂದ ಆ ನ್ಯಾಯಾಲಯಕ್ಕೆ ₹38 ಕೋಟಿ ಅನುದಾನ ಅನುಮೋದನೆಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ಅದು ಉದ್ಘಾಟನೆಗೊಳ್ಳಲಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾಂಗ್ರೆಸ್ ಹುನ್ನಾರದಿಂದಾಗಿ ಸೋಲನುಭವಿಸಿದರು. ಅವರು ಚುನಾಯಿತರಾಗುತ್ತಿದ್ದಲ್ಲಿ ದೇಶ ಅಭಿವೃದ್ಧಿಯ ವೇಗ ಆಗಲೇ ಬೆಳೆಯುತ್ತಿತ್ತು. ಕಾಂಗ್ರೆಸ್ ಪಕ್ಷವು ಅನೇಕ ದಶಕಗಳವರೆಗೆ ಆಡಳಿತ ನಡೆಯಿಸಿತರಾದರೂ ಅವರಿಗೆ ಯಾವುದೇ ಗೌರವ ಸಲ್ಲಿಸದೇ ಸ್ಥಾನಮಾನ ನೀಡದೆ ವಂಚಿಸಿತು. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರವು ಅವರನ್ನು ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರ ಕಾರ್ಯಕ್ಕೆ ಗೌರವಿಸಿತು ಎಂದು ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾನಾವಿಧಗಳಲ್ಲಿ ಗೌರವ ಸಲ್ಲಿಸಿತು. ಕೋಟ್ಯಂತರ ರುಪಾಯಿಗಳ ಅನುದಾನದಲ್ಲಿ ಅವರ ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಿ ಅಲ್ಲಿ ಸ್ಮಾರಕ ಸ್ಥಾಪಿಸಲಾಯಿತು. ಲಂಡನ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವಾಗ ಡಾ.ಅಂಬೇಡ್ಕರ್ ಅವರು ವಾಸಿಸುತ್ತಿರುವ ಸ್ಥಳವನ್ನು ಭಾರತ ಸರ್ಕಾರ ಖರೀದಿಸಿ ಅದನ್ನು ಪ್ರಧಾನಿ ಮೋದಿಯವರು ಶಿಕ್ಷಣಭೂಮಿಯಾಗಿ ಪರಿವರ್ತಿಸಿದರು. ಅಲ್ಲದೆ ಬೌದ್ಧಧರ್ಮವನ್ನು ದೀಕ್ಷೆ ಪಡೆದ ನಾಗಪುರದ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿ ದೀಕ್ಷಾ ಸ್ಥಳ ಎಂದು ಹೆಸರಿಸಿ ಅಭಿವೃದ್ಧಿಪಡಿಸಿದರು. ದೆಹಲಿಯಲ್ಲಿಯ ಅವರ ಮಹಾನಿರ್ವಾಣ ಸ್ಥಳವನ್ನು ಕೋಟ್ಯಂತರ ರುಪಾಯಿಗಳ ಅನುದಾನದಲ್ಲಿ ಸ್ಮಾರಕವನ್ನಾಗಿ ಪರಿವರ್ತಿಸಿದರು ಎಂದರು.