-ಕೊಡೇಕಲ್ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಪಧಾಧಿಕಾರಿಗಳ ನೇಮಕ
ಕನ್ನಡಪ್ರಭ ವಾರ್ತೆ ಕೊಡೇಕಲ್
ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಕೇವಲ ಒಂದು ಸಂಘಟನೆಯಾಗಿರದೇ ಅನ್ಯಾಯಕ್ಕೊಳಗಾದವರ ಧ್ವನಿಯಾಗಿದೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಕಾಶಿನಾಥ್ ನಾಟೇಕಾರ್ ಹೇಳಿದರು.ಗ್ರಾಮದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಬಳಿ ಘಟಕದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಪಧಾಧಿಕಾರಿಗಳ ನೇಮಕಗೊಳಿಸಿ ಅವರು ಮಾತನಾಡಿ, ಸಂಘಟನೆಯ ಪ್ರತಿಯೊಬ್ಬರೂ ಸಮಾನತೆಯ ದೃಷ್ಟಿಯಿಂದ ಎಲ್ಲಾ ಜಾತಿ, ಜನಾಂಗಗಳ ಏಳಿಗಾಗಿ ಶ್ರಮಿಸಬೇಕು ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಜುಮ್ಮಣ್ಣ ಗುಡಿಮನಿ, ಬಸವರಾಜ್ ಹೊಸಮನಿ, ಮಲ್ಲಿಕಾರ್ಜುನ ಕುಮನೂರ್, ಸಾಯಬಣ್ಣ ಯಡ್ದೆಳ್ಳಿ, ವಿರೂಪಾಕ್ಷ ಕಚಕನೂರ, ಮೌನೇಶ್ ನಾಟೇಕಾರ್, ಹಣಮಂತ ನಾಯಕ, ಪರಶುರಾಮ್ ಗೆದ್ದಲಮರಿ, ಸೋಮು ಹಳ್ಳೂರ, ಪರಶುರಾಮ್ ಬೋನಾಳ, ಶಿವಬಸಪ್ಪ ದೇವತಕಲ್, ಬಸವರಾಜ್ ಯಡಿಯಾಪೂರ, ಸಿದ್ದಪ್ಪ ಮಾಳಳ್ಳಿ, ಬಸವರಾಜ್ ತಮದೊಡ್ಡಿ ಇದ್ದರು.
-----ಫೋಟೊ: ಕೊಡೇಕಲ್ ಹೋಬಳಿ ಘಟಕದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
13ವೈಡಿಆರ್4