ಸರ್ವರಿಗೂ ಸಮಾನತೆ ನೀಡಿದ ಮಹಾನ್‌ ವ್ಯಕ್ತಿ ಅಂಬೇಡ್ಕರ್-ಶಾಸಕ ಪಠಾಣ

KannadaprabhaNewsNetwork |  
Published : Dec 10, 2025, 01:45 AM IST
ಪೊಟೋಪೈಲ್ ನೇಮ್ ೮ಎಸ್‌ಜಿವಿ೩  ತಾಲೂಕಿನ ಕುನ್ನೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಹಣ ದಿನದ ಅಂಗವಾಗಿ ಏರ್ಪಡಿಸಿದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಯನ್ನು ಶಾಸಕ ಯಾಶೀರ್ ಅಹಮದ್ ಖಾನ ಪಠಾನ್ ನೇರವೇರಿಸಿದರು.೮ಎಸ್‌ಜಿವಿ೩-೧ ತಾಲೂಕಿನ ಕುನ್ನೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಹಣ ದಿನದ ಅಂಗವಾಗಿ ಏರ್ಪಡಿಸಿದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಸ್ಪರ್ದಿಗಳು, ಡಾ,ಬಿ.ಆರ್ ಅಂಬೇಡ್ಕರ್ ಅವರಿಗೆ ಮೇಣದ ಬತ್ತಿ ಬೇಳಗಿಸಿದರು. | Kannada Prabha

ಸಾರಾಂಶ

ಬಸವಣ್ಣನವರು ೧೨ನೇ ಶತಮಾನದಲ್ಲಿ ಹೇಳಿದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಹತ್ತೊಂಬತ್ತನೆ ಶತಮಾನದಲ್ಲಿ ಸಂವಿಧಾನ ರಚಿಸುವ ಮೂಲಕ ಸರ್ವರಿಗೂ ಸಮಾನತೆ ಜಾರಿಗೆ ತಂದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ಶಾಸಕ ಯಾಶೀರ್ ಅಹಮದ್ ಖಾನ ಪಠಾಣ್ ಹೇಳಿದರು.

ಶಿಗ್ಗಾಂವಿ:ಬಸವಣ್ಣನವರು ೧೨ನೇ ಶತಮಾನದಲ್ಲಿ ಹೇಳಿದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಹತ್ತೊಂಬತ್ತನೆ ಶತಮಾನದಲ್ಲಿ ಸಂವಿಧಾನ ರಚಿಸುವ ಮೂಲಕ ಸರ್ವರಿಗೂ ಸಮಾನತೆ ಜಾರಿಗೆ ತಂದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ಶಾಸಕ ಯಾಶೀರ್ ಅಹಮದ್ ಖಾನ ಪಠಾಣ್ ಹೇಳಿದರು.

ತಾಲೂಕಿನ ಕುನ್ನೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಿದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಜನಿಸದೆ ಹೋಗಿದ್ರೆ, ಸಂವಿಧಾನ ರಚಿಸದೆ ಹೋಗಿದ್ರೆ ಶೋಷಿತರು ದೀನ ದಲಿತರು ಹಾಗೂ ಹಿಂದುಳಿದವರು ಇಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿದ್ದಿಲ್ಲ ನನ್ನಂತ ಒಬ್ಬ ಗ್ರಾಮೀಣ ಸಾಮಾನ್ಯ ಕುಟುಂಬದಿಂದ ಬಂದವರು ಶಾಸಕರಾಗುತ್ತೇವೆ ಎಂದರೆ ಅದಕ್ಕೆ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಕಾರಣ. ಹಾಗಾಗಿ ಇಂದು ಅಂತಹ ಮಹಾತ್ಮಾರ ಪರಿನಿರ್ವಾಣ ದಿನದಂದು ಗ್ರಾಮೀಣ ಕ್ರೀಡೆ ಆದ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಮಹಾತ್ಮರನ್ನು ಸ್ಮರಿಸುವ ಕಾರ್ಯ ಮಾಡುತ್ತಿರುವದು ನಿಜಕ್ಕೂ ಸಂತೋಷದ ವಿಷಯ. ಇಂತಹ ಕಾರ್ಯಗಳಿಗೆ ನಾನು ಯಾವತ್ತೂ ನಿಮ್ಮ ಜೊತೆ ಇರುತ್ತೇನೆ ಎಂದರು.

ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ ಅವರು ಮಾತನಾಡಿ, ಇಂದು ಅನೇಕ ಗ್ರಾಮೀಣ ಕ್ರೀಡೆಗಳು ಕಲೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಕಲೆ ಕ್ರೀಡೆಗಳನ್ನು ಇವತ್ತಿನ ಸಂದರ್ಭದಲ್ಲಿ ಉಳಿಸುವ ಅವಶ್ಯಕತೆ ಇದೆ. ಎಂದರು.

ಸಾನಿಧ್ಯವನ್ನು ಸೋಮಯ್ಯನವರ ಹಿರೇಮಠ ವಹಿಸಿದ್ದರು. ಕೆಎಂಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ, ಲಕ್ಷ್ಮಣ್ಣಾ ಬೇಂಡಲಗಟ್ಟಿ, ಸೇರಿದಂತೆ ಹಲವಾರು ಮುಖಂಡರುಗಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಕಾಂಗ್ರೆಸ್ ಮುಖಂಡ ಆನಂದ ಲಮಾಣಿ, ಕೆಎಂಎಫ್ ನಾಮ ನಿರ್ದೇಶಕ ಶಂಕರಗೌಡ್ರ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಮಂಜುನಾಥ ತಿಮ್ಮಾಪೂರ, ಮಲ್ಲಿಕಾರ್ಜುನಗೌಡ ಪಾಟೀಲ, ಶಿದ್ದಪ್ಪ ಮಾದರ, ನಿಂಗಪ್ಪ ಮಾದರ, ಮರ್ತ್ಯೆಮಪ್ಪ ಮತ್ತಿಗಟ್ಟಿ, ಶಂಕರಗೌಡ (ಮುತ್ತು) ಬ.ಪಾಟೀಲ, ಗ್ರಾ.ಪಂ. ಸದಸ್ಯ ಬಸನಗೌಡ ಬ್ಯಾಹಟ್ಟಿ, ಮೈಲಾರೆಪ್ಪ ಇಂದೂರ, ಮಲೇವ್ವ ಮಮದಾಪೂರ, ಮೈಲಾರೆಪ್ಪ ಮಮದಾಪೂರ, ಮಹಾದೇವ ಬಸರೀಕಟ್ಟಿ, ಶಿದ್ದಪ್ಪ ಮಮದಾಪೂರ, ಅಬ್ಬಸಲಿ ಮತ್ತೇಖಾನ, ಡಾ,ಬಿ.ಆರ್.ಅಂಬೇಡ್ಕರ್ ಯುವಕ ಮಂಡಳದ ಪದಾಧಿಕಾರಿಗಳು, ನಾಗರಾಜ ನಡಗೇರಿ ಕಾರ್ಯಕ್ರಮ ನಿರುಪಿಸಿದರು. ರಬ್ಬಾನಿ ಕುರಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ