ಶೋಷಿತ ಸಮುದಾಯಗಳ ಬೆಳಕಿನ ಸೂರ್ಯ ಅಂಬೇಡ್ಕರ್‌

KannadaprabhaNewsNetwork |  
Published : Apr 21, 2026, 01:30 AM IST
20ಎಚ್ಎಸ್ಎನ್11 :  | Kannada Prabha

ಸಾರಾಂಶ

ಕತ್ತಲೆಯ ಬದುಕಿನಲ್ಲಿ ಪ್ರಾಣಿಪಕ್ಷಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ಜನಾಂಗವನ್ನು ಮಾನವ ಘನತೆ ಎಂಬ ಬೆಳಕಿನೆಡೆಗೆ ನಡೆಸಿದ ಜ್ಞಾನ ಸೂರ್ಯ ಮನಸ್ಮೃತಿ ಸಿದ್ಧಾಂತದ ಪರಿಣಾಮ ವಿದ್ಯೆ ಆಸ್ತಿ ಅಧಿಕಾರ ನಿರಾಕರಿಸಿ ಈ ದೇಶದ ಮೂಲ ನಿವಾಸಿಗಳಾದ ಶೂದ್ರ ಮತ್ತು ಅತಿ ಶೂದ್ರರನ್ನು ಅಂಧಕಾರದ ಬದುಕಿನಲ್ಲಿ ಇಟ್ಟಿದ್ದು ಈ ದೇಶಕ್ಕೆ ಮಾಡಿದ ದೊಡ್ಡ ದ್ರೋಹದ ಚರಿತ್ರೆಯಾಗಿದೆ. ಇಂತಹ ಮನುವಾದಿ ಶ್ರೇಣಿಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿಯನ್ನು ೧೯೨೭ರಲ್ಲಿ ಸಾರ್ವಜನಿಕವಾಗಿ ಸುಟ್ಟು ಹಾಕುವ ಮೂಲಕ ಸಂವಿಧಾನವನ್ನ ರಚಿಸಿ ಕೊಟ್ಟಂತಹ ಮಹಾನ್ ಮೇಧಾವಿ ನಿಜವಾದ ದೇಶ ಪ್ರೇಮಿ ಬಾಬಾ ಸಾಹೇಬ್ ಅಂಬೇಡ್ಕರ್.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕತ್ತಲಿನ ಬದುಕಿನಲ್ಲಿದ್ದ ಜನಾಂಗಕ್ಕೆ ಬೆಳಕಿನ ದಾರಿ ತೋರಿದ ಜ್ಞಾನ ಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಂ ಜೆ ರತ್ನಾಕರ್ ಅಭಿಪ್ರಾಯಪಟ್ಟರು.

ತಾಲೂಕು ಬಾಗೂರು ಹೋಬಳಿ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಬಾಗೂರು ಶಾಖೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೫ ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಮನುವಾದಿ ಶ್ರೇಣಿಕೃತ ಅಸಮಾನ ವ್ಯವಸ್ಥೆಯಿಂದಾಗಿ ಸಾವಿರಾರು ವರ್ಷಗಳ ಕಾಲ ಕತ್ತಲೆಯ ಬದುಕಿನಲ್ಲಿ ಪ್ರಾಣಿಪಕ್ಷಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ಜನಾಂಗವನ್ನು ಮಾನವ ಘನತೆ ಎಂಬ ಬೆಳಕಿನೆಡೆಗೆ ನಡೆಸಿದ ಜ್ಞಾನ ಸೂರ್ಯ ಮನಸ್ಮೃತಿ ಸಿದ್ಧಾಂತದ ಪರಿಣಾಮ ವಿದ್ಯೆ ಆಸ್ತಿ ಅಧಿಕಾರ ನಿರಾಕರಿಸಿ ಈ ದೇಶದ ಮೂಲ ನಿವಾಸಿಗಳಾದ ಶೂದ್ರ ಮತ್ತು ಅತಿ ಶೂದ್ರರನ್ನು ಅಂಧಕಾರದ ಬದುಕಿನಲ್ಲಿ ಇಟ್ಟಿದ್ದು ಈ ದೇಶಕ್ಕೆ ಮಾಡಿದ ದೊಡ್ಡ ದ್ರೋಹದ ಚರಿತ್ರೆಯಾಗಿದೆ. ಇಂತಹ ಮನುವಾದಿ ಶ್ರೇಣಿಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿಯನ್ನು ೧೯೨೭ರಲ್ಲಿ ಸಾರ್ವಜನಿಕವಾಗಿ ಸುಟ್ಟು ಹಾಕುವ ಮೂಲಕ ಸಮ ಸಮಾಜ ನಿರ್ಮಾಣದ ಮಾನವೀಯತೆಯ ಪ್ರತೀಕದಂತಿರುವ ಶ್ರೇ? ಸಂವಿಧಾನವನ್ನ ರಚಿಸಿ ಕೊಟ್ಟಂತಹ ಮಹಾನ್ ಮೇಧಾವಿ ನಿಜವಾದ ದೇಶ ಪ್ರೇಮಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗಾಗಿ ಅವರು ಭಾರತಾಂಬೆಯನ್ನು ಜಾತಿಯತೆಯ ಸಂಕೋಲಿಯಿಂದ ಬಿಡುಗಡೆಗೊಳಿಸಲು ಹೋರಾಡಿದಂತಹ ನಿಜವಾದ ದೇಶಪ್ರೇಮಿಯಾಗಿದ್ದರು. ಒಂದು ದೇಶದ ಪ್ರಗತಿಯನ್ನು ಆ ದೇಶದ ಮಹಿಳೆಯರು ಗಳಿಸಿರುವ ಸ್ವಾತಂತ್ರ್ಯ ಹಾಗೂ ಪ್ರಗತಿ ಹೊಂದಿರುವ ಮಾನದಂಡದ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಪ್ರತಿಪಾದಿಸುತ್ತಿದ್ದರು. ಆ ನಿಟ್ಟಿನಲ್ಲಿ ಅವರು ಮಹಿಳೆಯರ ಗೋಸ್ಕರ ಸಂವಿಧಾನಾತ್ಮಕ ಮಾರ್ಗದಲ್ಲಿ ಹಿಂದೂ ಕೋಡ್ ಬಿಲ್ ಅಸ್ತ್ರದ ಮೂಲಕ ಹೋರಾಟ ಮಾಡಿದ ಹಾಗೂ ಅವರ ಹಕ್ಕುಗಳನ್ನು ಕಾನೂನಾತ್ಮಕವಾಗಿ ಸಂವಿಧಾನದಲ್ಲಿ ಅಡಕಗೊಳಿಸಿದಂತಹ ಮಹಿಳಾಪರ ಹೋರಾಟಗಾರರು ಕೂಡ ಆಗಿದ್ದರು ಈ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳಲು ಬೇಕಾದಂತಹ ಭಾರತದ ರುಪಾಯಿ ಸಮಸ್ಯೆ ಮತ್ತು ಅದರ ಪರಿಹಾರ ಕುರಿತಂತೆ ಪಿಎಚ್‌ಡಿ ಗ್ರಂಥವನ್ನು ಬರೆದು ದೇಶದಲ್ಲಿ ರಿಸರ್ವ್‌ ಬ್ಯಾಂಕ್ ಸ್ಥಾಪನೆಗೊಳ್ಳಲು ಭದ್ರಬುನಾದಿ ಹಾಕಿದ್ದಂತವರು. ಅವರು ಜಾತಿ ವ್ಯವಸ್ಥೆ ನೋವನ್ನು ಅಸ್ಪೃಶ್ಯರಾಗಿ ಹುಟ್ಟಿ ಅನುಭವಿಸದಿದ್ದರೆ ಈ ಜಗತ್ ಕಂಡ ಶ್ರೇಷ್ಟ ಆರ್ಥಿಕ ತಜ್ಞ ರಾಗಿ ಹೊರಹೊಮ್ಮುತ್ತಿದ್ದರಲ್ಲಿ ಸಂಶಯವಿಲ್ಲ.ಇಲ್ಲಿನ ಅಸ್ಪೃಶ್ಯತೆಯ ನೋವನ್ನ ಸ್ವತಃ ಅನುಭವಿಸಿ. ನನ್ನ ಮುಂದಿನ ಪೀಳಿಗೆ ನಾನು ಅನುಭವಿಸಿದಂತಹ ಅಸ್ಪೃಶ್ಯತೆ ನೋವನ್ನು ಅನುಭವಿಸಬಾರದು ಎಂಬ ದೂರದೃಷ್ಟಿಯಿಂದ ತನ್ನ ಅಪಾರಜ್ಞಾನ ಹಾಗೂ ವಿದ್ವತ್ ಮೂಲಕ ಸ್ವತಂತ್ರ ಭಾರತದಲ್ಲಿ ಸಂವಿಧಾನವನ್ನು ಬರೆಯುವ ಅವಕಾಶವನ್ನು ಗಳಿಸಿ ಅಸ್ಪೃಶ್ಯತೆಯನ್ನ ನಿಷೇಧ ಮಾಡುವ ಹಾಗೂ ಈ ದೇಶದ ಶೋಷಣೆಗೆ ಒಳಗಾದಂತಹ ಅಸ್ಪೃಶ್ಯರನ್ನು ಒಳಗೊಂಡಂತೆ ಹಿಂದುಳಿದ ವರ್ಗಗಳ ಏಳಿಗೆಗಾಗಿ ಮೀಸಲಾತಿ ಎಂಬ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಳವಡಿಸಿ ಭ್ರಾತತ್ವ ಭಾವನೆಯಿಂದ ಸಮಸಮಾಜದ ನಿರ್ಮಾಣವನ್ನು ಮಾಡಬೇಕೆಂದು ತಮ್ಮ ಬರಹಗಳಲ್ಲಿ ಪ್ರತಿಪಾದಿಸಿದ್ದಾರೆ ಆದರೆ ಸಂವಿಧಾನ ಜಾರಿಗೊಂಡು ೭೫ ವ?ಗಳು ಕಳೆದರೂ ಇಂದಿಗೂ ಕೂಡ ಮೀಸಲಾತಿಯ ಸಮರ್ಪಕ ಅನುಷ್ಟಾನ ಗೊಳ್ಳದೇ ಇರುವುದು ಹಾಗೂ ಜಾತಿಯತೆ ಎನ್ನುವುದು ಬೂದಿ ಮುಚ್ಚಿದ ಕೆಂಡದಂತೆ ಅಗೋ ಚರ ಸ್ಥಿತಿಯಲ್ಲಿ ಜೀವಂತವಾಗಿರುವುದು.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಜಾರಿಗೆ ತರುವಂತಹ ಆಯಕಟ್ಟಿನ ಸ್ಥಳಗಳಲ್ಲಿ ಅವಕಾಶ ಪಡೆದು ಅಧಿಕಾರ ಚಲಾಯಿಸಿದಾಗ ಮಾತ್ರ ಈ ದೇಶದಲ್ಲಿ ಅಂಬೇಡ್ಕರ್ ಕಂಡಂತಹ ಕನಸು ನನಸಾಗುತ್ತದೆ ಹಾಗಾಗಿ ಒಳ ಮೀಸಲಾತಿ ಎಂಬ ಮನುವಾದಿ ಕುತಂತ್ರಕ್ಕೆ ಬಲಿಯಾಗದೆ ಒಗ್ಗಟ್ಟಿನಿಂದ ಸಂಘಟಿತರಾದಾಗ ಮಾತ್ರ ಶೋ?ಣೆಯಿಂದ ಮುಕ್ತಿಗೊಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಕಾಂತರಾಜಪುರ ಕೆ.ಎನ್. ನಾಗೇಶ್ ಉದ್ಘಾಟಿಸಿದರು. ಕಾರ್ಯಕ್ರಮದ ಕುರಿತು ಉಪನ್ಯಾಸಕರಾದ ಬಾಗೂರು ಪ್ರಸನ್ನ ಹಾಗೂ ಬಹುಜನ ಚಳವಳಿಯ ಮುಖಂಡರಾದ ಕುಂದೂರು ರಾಜು ಮಾಸ್ಟರ್ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಮಚಂದ್ರ, ಕೆಎಸ್‌ಆರ್‌ಟಿಸಿ ನೌಕರರಾದ ರಾಮು, ದಲಿತ ಸಂಘ? ಸಮಿತಿಯ ತಾಲೂಕು ಸಂಚಾಲಕರಾದ ಮಾದಿಹಳ್ಳಿ ಮಂಜು, ಐಟಿಐ ಕಾಲೇಜಿನ ಉಪನ್ಯಾಸಕರಾದ ಸಂತೋ?, ಬಾಗೂರು ದಲಿತ ಸಂಘ? ಸಮಿತಿಯ ಅಧ್ಯಕ್ಷರಾದ ಬಾಗೂರು ಉಮೇಶ್, ಪದಾಧಿಕಾರಿಗಳಾದ ಬಾಗೂರು ಕುಮಾರ್, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಂಕರ್, ಮತ್ತಿತರರು ಹಾಜರಿದ್ದರು.ಕಾರ್ಯಕ್ರಮದ ಪೂರ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ವಿವಿಧ ಸಂಘ-ಸಂಸ್ಥೆಯ ತ್ರಿಶಕ್ತಿ ಸಂಘದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಾಗುರಿನ ಪ್ರಮುಖ ಬೀದಿಗಳಲ್ಲಿ ನೀಲಿ ವರ್ಣದ ಬಾವುಟಗಳು ರಾರಾಜಿಸುತ್ತಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನವರ ವಚನಗಳು ವಿಶ್ವದ ಸಮಸ್ಯೆಗಳಿಗೆ ಪರಿಹಾರ: ಡಾ.ಕುಮಾರ
ಬಸವಣ್ಣನವರ ತತ್ವಗಳು ಸಮಾನತೆಗೆ ದಾರಿದೀಪ