ಅಂಬೇಡ್ಕರ್‌ ಜಗತ್ತಿನ ಅಪ್ರತಿಮ ಜ್ಞಾನಿಯಾಗಿದ್ದರು- ಸಿದ್ದರಾಮ ಸ್ವಾಮೀಜಿ

KannadaprabhaNewsNetwork | Published : Apr 23, 2025 12:35 AM

ಸಾರಾಂಶ

ಹಲವು ಸಂವಿಧಾನಗಳ ತಿರುಳನ್ನು ಅಧ್ಯಯನ ಮಾಡಿ ದೇಶದ ಸಂವಿಧಾನ ಶಿಲ್ಪಿಯಾಗಿರುವ ಡಾ.ಬಿ.ಆರ್ಳ.ಅಂಬೇಡ್ಕರ್ ಅವರು ಜಗತ್ತಿನ ಅಪ್ರತಿಮ ಜ್ಞಾನಿಯಾಗಿದ್ದರು. ಜಗತ್ತಿನ ವಿವಿಧ ದೇಶಗಳು ಅವರ ಜ್ಞಾನವನ್ನು ಎರವಲು ಪಡೆದು ಅಭಿವೃದ್ಧಿ ಹೊಂದುತ್ತಿದ್ದು, ಅವರು ನಮ್ಮ ದೇಶದ ಹೆಮ್ಮೆಯಾಗಿದ್ದಾರೆ ಎಂದು ಡಂಬಳ ಗದುಗಿನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಡಂಬಳ: ಹಲವು ಸಂವಿಧಾನಗಳ ತಿರುಳನ್ನು ಅಧ್ಯಯನ ಮಾಡಿ ದೇಶದ ಸಂವಿಧಾನ ಶಿಲ್ಪಿಯಾಗಿರುವ ಡಾ.ಬಿ.ಆ‌ರ್.ಅಂಬೇಡ್ಕರ್ ಅವರು ಜಗತ್ತಿನ ಅಪ್ರತಿಮ ಜ್ಞಾನಿಯಾಗಿದ್ದರು. ಜಗತ್ತಿನ ವಿವಿಧ ದೇಶಗಳು ಅವರ ಜ್ಞಾನವನ್ನು ಎರವಲು ಪಡೆದು ಅಭಿವೃದ್ಧಿ ಹೊಂದುತ್ತಿದ್ದು, ಅವರು ನಮ್ಮ ದೇಶದ ಹೆಮ್ಮೆಯಾಗಿದ್ದಾರೆ ಎಂದು ಡಂಬಳ ಗದುಗಿನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಡಂಬಳ ಹೋಬಳಿಯ ಡೋಣಿ ಗ್ರಾಮದಲ್ಲಿ ದುರ್ಗಾದೇವಿ ಟ್ರಸ್ಟ್ ಕಮಿಟಿ ಹಾಗೂ ಭಗತ್‌ಸಿಂಗ್ ಅಭಿಮಾನಿ ಬಳಗಗಳ‌ ಸಮಿತಿ ಸದಸ್ಯರು ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ಜಾಗೃತಿ ವಹಿಸಬೇಕು. ಮಕ್ಕಳಿಗೆ ಓದಿನ ಹಸಿವು ಇರಬೇಕು. ಎಲ್ಲರು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು. ಸಂಘಟಿತರಾಗಿ

ಸಮಾಜ ಸುಧಾರಣೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಅವರು ವಿಚಾರಗಳು ವಿಶ್ವವ್ಯಾಪಿಯಾಗಿದ್ದು ಅವುಗಳ ಅನುಷ್ಠಾನದಿಂದ ನಮ್ಮ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದ್ದರಿಂದ ನಾವೆಲ್ಲ ಅವರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಮಾದಿಗ ಮಹಾಸಭಾ ಉಪಾಧ್ಯಕ್ಷ ಮೋಹನ ಅಲಮೇಲ್ಕರ ಮಾತನಾಡಿ, ಡಾ.ಬಿ.ಆ‌ರ್. ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂ ನಮ್ಮ ಸಮಾಜದ ಎರಡು ಕಣ್ಣುಗಳಿದ್ದಂತೆ. ವಿದೇಶಗಳಿಂದ ಆಹಾರ ಧಾನ್ಯಗಳನ್ನು ರಫ್ತು ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟುಹಾಕಿ ದೇಶದ ಹಸಿವನ್ನು ನೀಗಿದ ಕೀರ್ತಿ ಬಾಬು ಜಗಜೀವರಾಂ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಅಂಬೇಡ್ಕರ್ ಅವರ ಮತ್ತು ಜಗಜೀವನರಾಂ ಅವರ ಜೀವನ ಚರಿತ್ರೆ ನಮಗೆ ದಾರಿದೀಪವಾಗಿವೆ. ಯುವಕರಿಗೆ ಓದಿನ ಹಸಿವು ಇರಬೇಕು. ಮಹಾನ್ ನಾಯಕರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ವಿಚಾರಗಳು ಹಾಗೂ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಹಾಲಸೋಮೇಶ್ವರ ಸ್ವಾಮೀಜಿ, ನಿವೃತ್ತ ಉಪನ್ಯಾಸಕ ಸತೀಶ ಪಾಸಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್.ಡಿ. ಪೂಜಾರ, ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷೆ ಮಂಜವ್ವ ಮಾದರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆವ್ವ ಅಳವಂಡಿ, ಉಪಾಧ್ಯಕ್ಷೆ ರತ್ನವ್ವ ವಡ್ಡರ, ಮರಿಯಪ್ಪ ಸಿದ್ದಣ್ಣವರ, ಶಂಕರಗೌಡ ಜಾಯನಗೌಡರ, ಬಿ.ಎಸ್‌. ಕೇರಿ, ನಂದೇಶ ಹೊಳಗುಂದಿ, ಬಸಪ್ಪ ಕಟ್ಟಿಮನಿ, ಪರಸಪ್ಪ ಶಿರುಂದ, ನಾಗಪ್ಪ ಕಟ್ಟಿಮನಿ, ಶರಣಪ್ಪ ಆಲೂರ, ಶರಣಪ್ಪ ಕಟ್ಟಿಮನಿ ವಿನಾಯಕ ಬೆಳ್ಳಿ ಕಾರ್ಯಕ್ರಮ ನಿರೂಪಿಸಿದರು.

Share this article