ಮಹಿಳೆಗೆ ನೈಜಸ್ವಾತಂತ್ರ‍್ಯ ನೀಡಿದ ಅಂಬೇಡ್ಕರ್: ಡಾ.ಪ್ರಭಾ

KannadaprabhaNewsNetwork |  
Published : Apr 15, 2024, 01:19 AM IST
ಕ್ಯಾಪ್ಷನಃ14ಕೆಡಿವಿಜಿ37ಃದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್  ಜಯಂತಿ ಕಾರ್ಯಕ್ರಮದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಹಿಳೆಯರಿಗೂ ಸಂವಿಧಾನದಲ್ಲಿ ಪ್ರಾತಿನಿಧ್ಯ ನೀಡಿರುವ ಡಾ.ಅಂಬೇಡ್ಕರ್ ಅವರು ಎಂದಿಗೂ ಚಿರಸ್ಮರಣೀಯರು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್‌ ಜನ್ಮದಿನಾಚರಣೆ- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಮಹಿಳೆಯರಿಗೂ ಸಂವಿಧಾನದಲ್ಲಿ ಪ್ರಾತಿನಿಧ್ಯ ನೀಡಿರುವ ಡಾ.ಅಂಬೇಡ್ಕರ್ ಅವರು ಎಂದಿಗೂ ಚಿರಸ್ಮರಣೀಯರು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವತಂತ್ರ ಭಾರತಕ್ಕೆ ಶ್ರೇಷ್ಠತೆಯ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಈ ದೇಶದ ಎಲ್ಲ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿರುವುದು ಸೌಭಾಗ್ಯವಾಗಿದೆ. ನಮ್ಮ ಸಂವಿಧಾನ ಇತರೇ ರಾಷ್ಟ್ರಗಳಿಗೆ ಪ್ರೇರಣೆ ಆಗುವಂತೆ ನೀಡಿರುವುದು ಈ ದೇಶದ ಹೆಮ್ಮೆಯ ಪ್ರತೀಕ. ಎಲ್ಲ ರೀತಿಯಲ್ಲೂ ವೈವಿಧ್ಯತೆ ಮತ್ತು ಸಮಾನತೆ ಅಳವಡಿಸಿಕೊಳ್ಳುವ, ರಾಷ್ಟ್ರ ನಿರ್ಮಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್‌ ದೂರದೃಷ್ಟಿ ಗೌರವಿಸೋಣ ಎಂದರು.

ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ನಾವೆಲ್ಲರೂ ನಡೆದುಕೊಳ್ಳೊಣ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಎಸ್.ಮಲ್ಲಿಕಾರ್ಜುನ್, ಎ.ನಾಗರಾಜ್, ಗೋಪಿ ನಾಯ್ಕ, ಎಚ್.ಜಯಣ್ಣ, ಎಲ್‌ಎಂಎಚ್ ಸಾಗರ್, ಟಿ.ರಮೇಶ್, ಪ್ರವೀಣ್, ರಾಕೇಶ್, ಅನಿಷ್ ಪಾಷ, ಪರಮೇಶ್, ದಾಕ್ಷಾಯಣಮ್ಮ, ರಾಜೇಶ್ವರಿ, ಶುಭಮಂಗಳ, ಮಂಜಮ್ಮ, ಡೋಲಿ ಚಂದ್ರು, ಕಣ್ಣಾಳ್ ಅಂಜಿನಪ್ಪ, ಆದಾಪುರ ನಾಗರಾಜ್, ಮಾನಸ ತಿಪ್ಪೇಸ್ವಾಮಿ, ಮುಜಾಹಿದ್ ಇತರರು ಇದ್ದರು.

- - - -14ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂವಿಧಾನಶಿಲ್ಪಿ ಭಾವಚಿತ್ರಕ್ಕೆ ಪುಷ್ಪಗಳ ಅರ್ಪಿಸಿ, ಗೌರವ ಸಲ್ಲಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ