ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಕನ್ನಡಪ್ರಭ ವಾರ್ತೆ ಯಲಬುರ್ಗಾಡಾ. ಬಿ.ಆರ್. ಅಂಬೇಡ್ಕರ್ ಭಾರತಕ್ಕೆ ಅತ್ಯಂತ ಸರ್ವ ಶ್ರೇಷ್ಠ ಸಂವಿಧಾನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹೇಳಿದರು.ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ತಾಲೂಕು ಛಲವಾದಿ ಮಹಾಸಭಾದಿಂದ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಸರ್ವ ಜನಾಂಗಕ್ಕೂ ಸಂವಿಧಾನದ ಮೂಲಕ ಸಮಾನತೆ ಕಲ್ಪಿಸಿಕೊಟ್ಟ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.ಛಲವಾದಿ ಮಹಾಸಭಾದ ತಾಲೂಕಾಧ್ಯಕ್ಷ ಅಂದಪ್ಪ ಹಾಳಕೇರಿ, ಡಿ.ಕೆ. ಪರುಶುರಾಮ ಹಾಗೂ ಸಿದ್ದಪ್ಪ ಕಟ್ಟಿಮನಿ ಮಾತನಾಡಿ, ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಹಾಕಿಕೊಟ್ಟಿರುವ ಮಾರ್ಗದರ್ಶನವನ್ನು ಪ್ರತಿಯೊಬ್ಬರು ಪಾಲಿಸಬೇಕು. ಶಿಕ್ಷಣದಿಂದ ಮಾತ್ರ ಜಗತ್ತನ್ನು ಗೆಲ್ಲಬಹುದೆನ್ನುವುದಕ್ಕೆ ಅಂಬೇಡ್ಕರ್ ಅವರೇ ಸಾಕ್ಷಿಯಾಗಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಡಾ. ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.ದಲಿತ ಮುಖಂಡರಾದ ಯಮನೂರಪ್ಪ ನಡುವಲಮನಿ ಹಾಗೂ ಛತ್ರೆಪ್ಪ ಛಲವಾದಿ ಮಾತನಾಡಿ, ಗದ್ದೆಪ್ಪ ಕುಡಗುಂಟಿ ಮತ್ತು ಶಶಿಧರ ಹೊಸ್ಮನಿ ಮಾತನಾಡಿದರು.
ಈ ಸಂದರ್ಭ ಪಪಂ ಸದಸ್ಯರಾದ ಹನುಮಂತ ಭಜೇತ್ರಿ, ರಮೇಶ ಛಲವಾದಿ, ಎಂ.ಎಫ್. ನದಾಫ್, ವಿಜಯ ಜಕ್ಕಲಿ, ಬಸಪ್ಪ ಬಿನ್ನಾಳ, ಯಲ್ಲಪ್ಪ ಹಂದ್ರಾಳ, ಕನಕೇಶ ಪೇಂಟರ್, ಯಲ್ಲಪ್ಪ ಲಮಾಣಿ, ಸಿದ್ದಯ್ಯ ಹಿತ್ತಲಮನಿ, ಶರಣಪ್ಪ ಬಿನ್ನಾಳ, ಸುರೇಶ ಚಲವಾದಿ, ಶಾಮೀದ್ ಆನೆಗುಂದಿ, ಖಾಜಾವಲಿ ಗಡಾದ, ಪಪಂ ಸಿಬ್ಬಂದಿ ನಾರಾಯಣ ಗಂಗಾಖೇಡ, ರಮೇಶ ಬೇಲೇರಿ, ಶಿವಕುಮಾರ ಗಣಾಚಾರ, ರವಿ ಯಕ್ಲಾಸಪೂರ, ಯಂಕಣ್ಣ ಜೋಷಿ ಮತ್ತಿತರರು ಇದ್ದರು.