ಅಂಬೇಡ್ಕರ್‌ ಸಂವಿಧಾನ ವಿಶ್ವಕ್ಕೆ ಮಾದರಿ

KannadaprabhaNewsNetwork |  
Published : Oct 15, 2026, 02:15 AM IST
ಸಸಸಸ | Kannada Prabha

ಸಾರಾಂಶ

ಯುವಕರು ಮುಂದಿನ ದೇಶದ ಉತ್ತಮ ಪ್ರಜೆಗಳು ದೇಶ ನಮಗೇನು ಮಾಡಿದೆ ಎನ್ನುವ ಬದಲು ದೇಶಕ್ಕಾಗಿ ನಾವೇನು ಮಾಡಬೇಕು

ಕೂಡ್ಲಿಗಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇಂದಿನ ಯುವ ನೇತಾರರು ಮುಂದಿನ ದೇಶದ ಶ್ರಯೋಭಿವೃದ್ಧಿಗೆ ಶ್ರಮಿಸಿ ಸಂವಿಧಾನಿಕ ಹಕ್ಕು ಪರಿಪಾಲಿಸುವಂತೆ ಯುವಕರಿಗೆ ಕೂಡ್ಲಿಗಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಡಿ.ಶಿಲ್ಪಾ ಯುವಕರಿಗೆ ಕಿವಿಮಾತು ಹೇಳಿದರು.

ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕೂಡ್ಲಿಗಿ ತಾಲೂಕಾಡಳಿತ, ತಾಪಂ, ಪಪಂ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕೂಡ್ಲಿಗಿ ಸಹಭಾಗೀತ್ವದಲ್ಲಿ ಆಯೋಜಿಸಿದ ಯುವ ಸಂಸತ್ ಸಭೆ ಕುರಿತಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವಕರು ಮುಂದಿನ ದೇಶದ ಉತ್ತಮ ಪ್ರಜೆಗಳು ದೇಶ ನಮಗೇನು ಮಾಡಿದೆ ಎನ್ನುವ ಬದಲು ದೇಶಕ್ಕಾಗಿ ನಾವೇನು ಮಾಡಬೇಕು ಎಂದು ಅರಿತು ದೇಶದ ಸಂವಿಧಾನ ಬದ್ದವಾದ ಕಾನೂನು ನಿಯಮ ಪಾಲಿಸಿಕೊಂಡು ದೇಶದ ಪ್ರತಿಯೊಬ್ಬ ಯುವಕರು ದೇಶದ ಪ್ರಗತಿಗೆ ಮುನ್ನಡೆಯಬೇಕು ಎಂದು ತಿಳಿಸಿದರು.

ಕೂಡ್ಲಿಗಿ ಇಓ ನರಸಪ್ಪ ಮಾತನಾಡಿ, ಇಂದು ನಮ್ಮ ಹಕ್ಕು, ಮಹಿಳಾ ಮೀಸಲಾತಿಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ರಚನೆಯ ಸಂವಿಧಾನವೇ ಸಾಕ್ಷಿಯಾಗಿದೆ. ಸಂವಿಧಾನಕ್ಕೆ ಯಾವುದೇ ಚ್ಯುತಿ ಬರದಂತೆ ನಡೆದುಕೊಂಡು ಸಂವಿಧಾನದ ಸಾಧಕ ಭಾಧಕ ಬಗ್ಗೆ ತಿಳಿದುಕೊಂಡು ಯುವಕರು ಸಾಗಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ನೇತ್ರಾವತಿ, ವಕೀಲರ ಸಂಘದ ಅಧ್ಯಕ್ಷ ಜಿ ಹೊನ್ನೂರಪ್ಪ ಸೇರಿದಂತೆ ಇತರರು ಮಾತನಾಡಿದರು. ನಂತರ ಕೂಡ್ಲಿಗಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಯುವ ಸಂಸತ್ ಸಭೆ ನಡೆಸಿಕೊಟ್ಟರು. ಅಲ್ಲದೆ ನೈಜ ಸಂಸತ್ ಸಭೆ ನಾಚಿಸುವಂತೆ ಯುವ ಸಂಸತ್ ಸಭೆಯಲ್ಲಿ ಜನರ ಗುಳೇ, ಉತ್ತರ ಕರ್ನಾಟಕದ ನಿರ್ಲಕ್ಷ್ಯ, ಗ್ಯಾರಂಟಿ ಯೋಜನೆಗಳಿಂದ ಶಕ್ತಿ ಇಲ್ಲದೆ ಡೀಸೆಲ್ ಗೂ ಹಣದ ಕೊರತೆಯಾಗುತ್ತಿರುವ ಸನ್ನಿವೇಶ ಸೇರಿದಂತೆ ಬಾಲ್ಯವಿವಾಹ, ಕಳಪೆ ಶೂ ವಿತರಣೆ, ಕುಡಿಯುವ ನೀರು, ಉದ್ಯೋಗ, ಸಾಲ ಸೌಲಭ್ಯ ಕುರಿತಾದ ಪ್ರಶ್ನೆಗಳ ಕೂಗು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಗದ್ದಲ, ಸಭಾಪತಿಯ ನಡೆ ಕುರಿತಾದ ಸಭೆ ಸ್ವಲ್ಪ ಹೊತ್ತು ನೈಜ ಸಂಸತ್ ಸಭೆಯನ್ನೇ ನಾಚಿಸುವಂತೆ ಮಕ್ಕಳ ರಾಜಕೀಯದ ಅಣುಕು ಪ್ರದರ್ಶನಕ್ಕೆ ಅಲ್ಲಿ ನೆರೆದವರ ಚಪ್ಪಾಳೆ ಗಿಟ್ಟಿಸಿತು. ಕಾರ್ಯಕ್ರಮಕ್ಕೂ ಮೊದಲು ನಾಡಗೀತೆ, ಸಂವಿಧಾನಿಕ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಹಿರಿಯ ಶ್ರೇಣಿ ನ್ಯಾಯಧೀಶೆ ಡಿ ಶಿಲ್ಪಾ ಚಾಲನೆ ನೀಡಿದರು. ಸಮಾಜ ಕಲ್ಯಾಣ ತಾಲೂಕು ಅಧಿಕಾರಿ ಜಗದೀಶ್ ದಿಡಗೂರು, ಬಿಇಓ ಮೈಲೇಶ ಬೇವೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ, ಕೂಡ್ಲಿಗಿ ಸಿಪಿಐ ಪ್ರಲ್ಹಾದ್ ಆರ್ ಚನ್ನಗಿರಿ, ಎಸ್ ಎವಿಟಿ ಕಾಲೇಜಿನ ಪ್ರಾಚಾರ್ಯ ಡಾ.ಷಣ್ಮುಖಗೌಡ, ವಕೀಲ ದುರುಗೇಶ ಡಿ.ಎಚ್ ಸೇರಿದಂತೆ ಇತರೆ ವಕೀಲರು, ಶಿಕ್ಷಕರು, ಮಕ್ಕಳು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜನಾದ್ರಿ ದೇಗುಲದಿಂದ ಸಿಬ್ಬಂದಿ ಹೊರಗೆ ಹಾಕಿದ ವಿದ್ಯಾದಾಸ ಬಾಬಾ
ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ