ಕೂಡ್ಲಿಗಿ: ತಳಮಟ್ಟದಿಂದ ಬಂದ ಶರಣರ ಜೀವನ ಮೌಲ್ಯಗಳ ಬಗ್ಗೆ ಇಂದು ಬೆಳಕು ಚೆಲ್ಲಬೇಕಾಗಿದೆ, ಅಂಬಿಗರ ಚೌಡಯ್ಯ ಅವರು ತಳ ವರ್ಗಗಳ, ಶೋಷಣೆಯ ಗಟ್ಟಿಧ್ವನಿಯಾಗಿದ್ದಾರೆ ಎಂದು ಗಜಾಪುರ ಗಂಗಾಮತಸ್ಥರ ಸಂಘದ ಅಧ್ಯಕ್ಷ ಜಯಮ್ಮನವರ ಬಾರಿಕರ ಮಂಜುನಾಥ ತಿಳಿಸಿದರು.
ಅಂಬಿಗರ ಚೌಡಯ್ಯ ಮಡಿವಂತಿಕೆ ಸಮಾಜದ ವಿರುದ್ಧ ಗಟ್ಟಿ ಧ್ವನಿ ಎತ್ತುವ ಮೂಲಕ ಜನತೆಯನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿರು. ಜೀವನವೆಂಬ ಸಾಗರದಲ್ಲಿ ಅಂಬಿಗರ ಚೌಡಯ್ಯ ಬದುಕಿನ ಭವದ ಕಡಲನ್ನು ದಾಟಿಸುವ ಕೆಲಸ ಮಾಡಿದ್ದಾರೆ. ಇಂತಹ ನಿಜಶರಣನ ಜಯಂತಿ ಆಚರಣೆಗೆ ಸಮಾಜ ಬಾಂಧವರು ಉತ್ಸಾಹದಿಂದ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಅಂಬಿಗರ ಚೌಡಯ್ಯನ ವಚನಗಳಲ್ಲಿ ಶೋಷಿತರ ಬಗ್ಗೆ ಅವರಿಗಿರುವ ಕಳಕಳಿ ಸಮಾಜದಲ್ಲಿಯ ಮೌಢ್ಯಗಳನ್ನು ಕಿತ್ತೊಗೆದು ವೈಚಾರಿಕತೆ ಬಿತ್ತುವಲ್ಲಿ ಮಹತ್ವದ ಪಾತ್ರ ವಹಿಸಿದ ಅಂಬಿಗರ ಚೌಡಯ್ಯ ಅಂಬಿಗರಿಗೆ ಮಾತ್ರವಲ್ಲದೇ ಇಂದಿನ ಸಮಾಜಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಾರಿಕರ ಗಂಗಪ್ಪ, ಬಾರಿಕರ ಕೊಟ್ರೇಶ್, ಗಾಳೆಪ್ಪನವರ ಭೀಮಪ್ಪ, ಬಾರಿಕರ ಮಂಜುನಾಥ, ಬಿ. ಶಿವರಾಜ, ನಿಡುಗುರ್ತಿ ಬಿ. ರಾಜ, ಸಿದ್ದಾಪುರ ಮಂಜು, ಬಿ. ಪಾಂಡುರಂಗ, ಬಾರಿಕರ ಬಸವರಾಜ, ಕೆ. ಮಂಜುನಾಥ, ಬಾರಿಕರ ಮಾರುತಿ, ಬಿ. ನಂದೀಶ, ಬಾರಿಕರ ಗುಂಡಪ್ಪ, ಬಾರಿಕರ ಭರಮಪ್ಪ, ಬಾರಿಕರ ಸುಬ್ರಹ್ಮಣ್ಯ, ನೀರಗಂಟಿ ಪವನ್, ಶ್ಯಾಮನೂರು ಸುರೇಶ್, ಮೋಹನ್, ಕುಪ್ಪಿನಕೆರೆ ವಿಷ್ಣು, ಬಾರಿಕರ ಗಂಗಾಧರ, ಬಾರಿಕರ ಸಿದ್ದಾರ್ಥ, ಕೊಟ್ರೇಶ್, ಮುಂತಾದವರು ಇದ್ದರು.