ಕನ್ನಡಪ್ರಭ ವಾರ್ತೆ ಅಥಣಿ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ₹1486.41 ಕೋಟಿಯ ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಮತ್ತು ಆರ್ಥಿಕ ಇಲಾಖೆಗಳ ಅನುಮೋದನೆ ಸಿಕ್ಕಿದೆ. ಅಲ್ಲದೆ ನೀರಾವರಿ ಇಲಾಖೆ ಸಹ ತಾಂತ್ರಿಕ ಬಿಡ್ ಮಾಡಿದೆ. ಈ ಎಲ್ಲ ವಿಷಯ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಗೊತ್ತಿದ್ದರೂ ತಮ್ಮ ರಾಜಕೀಯ ಲಾಭಕ್ಕೆ ಮತ್ತೊಮ್ಮೆ ಅಡಿಗಲ್ಲು ಸಮಾರಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆ ಬಿಜೆಪಿ ಕೊಡುಗೆ. ಮಾಜಿ ಸಚಿವ ರಮೇಶ ಜಾರಕಿಹೊಳಿಯ ಸತತ ಪ್ರಯತ್ನದಿಂದ ಬಿಜೆಪಿ ಅಧಿಕಾರಾವಧಿಯಲ್ಲಿ ಮಂಜೂರು ಮಾಡಿದ್ದಾರೆ. ಇದರ ಕಾಮಗಾರಿ ಕಳೆದ 7 ತಿಂಗಳ ಹಿಂದೆ ಆರಂಭವಾಗಬೇಕಿತ್ತು. ಆದರೆ, ಇದುವರೆಗೆ ಏಕೆ ಪ್ರಾರಂಭಿಸಲಿಲ್ಲ? ಅದರ ಬದಲು ಮತ್ತೊಮ್ಮೆ ಅಡಿಗಲ್ಲು ಸಮಾರಂಭ ಮಾಡುವ ಅವಶ್ಯಕತೆ ಏನಿದೆ? ಅಡಿಗಲ್ಲು ಸಮಾರಂಭ ಮಾಡುವ ಹಕ್ಕು ಇವರಿಗೆ ಇದೆಯಾ ಎಂದು ಪ್ರಶ್ನಿಸಿದರು.ಈ ಯೋಜನೆ ಮೇಲೆ ರಾಜಕೀಯ ಮಾಡುವ ಉದ್ದೇಶ ನನಗಿಲ್ಲ. ಈ ಯೋಜನೆಗೆ ನೀಲ ನಕ್ಷೆ ನಾನೇ ಸಿದ್ಧ ಮಾಡಿದ್ದೇನೆ. ನಾನು ಶಾಸಕನಾದ ಮೇಲೆ ಯೋಜನೆ ಮಂಜೂರಾತಿಗಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಡಾ.ರವಿ ಸಂಕ, ಉಮೇಶ ಬೋಟಂಡಕರ, ಸಿದ್ದಣ್ಣ ಮುದಕಣ್ಣವರ, ಗಿರೀಶ್ ಭುಟಾಳೆ, ಉತ್ತಮ ಸಂಕ, ಮಲ್ಲಪ್ಪ ಹಂಚಿನಾಳ, ಶಿವು ಸಿಂಧೂರ, ವಿನಯ ಪಾಟೀಲ, ಅಪ್ಪಾಸಾಹೇಬ ಅವತಾಡೆ ಮುಂತಾದವರು ಇದ್ದರು.