ತುಳು ಅಧ್ಯಯನಕ್ಕೆ ವಿಫುಲ ಅವಕಾಶ: ಧನಂಜಯ ಮೂಡುಬಿದಿರೆ

KannadaprabhaNewsNetwork |  
Published : Feb 14, 2025, 12:33 AM IST
ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ತುಳು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿ ಸಿಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತುಳುವಿನ ಬಗ್ಗೆ ಹಿಂಜರಿಕೆಯ ಕಾಲವೊಂದಿತ್ತು. ಇಂದು ತುಳುವಿನ ಬಗ್ಗೆ ಗೌರವ ಪ್ರಾಪ್ತವಾದ ಕಾಲವಾಗಿದ್ದು ಅಪೂರ್ವ ದಾಖಲೀಕರಣಕ್ಕೆ ಸೂಕ್ಷ್ಮ ಅಧ್ಯಯನಕ್ಕೆ ವಿಪುಲ ಅವಕಾಶವಿದೆ ಎಂದು ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅಭಿಪ್ರಾಯಪಟ್ಟಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ತುಳು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತುಳುವಿನಲ್ಲಿ ಬಹು ಭಾಷಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಕುತೂಹಲ ಮತ್ತು ಗೌರವದಿಂದ ನೋಡುವ ಮನೋಭಾವ ಲೇಖಕನಿಗೆ ಅಗತ್ಯ ಎಂದವರು ಹೇಳಿದರು.

‘ನಿನಗೇನು ಭಾಷೆ ಇಲ್ಲವಾ?’ ಎಂಬ ಮಾತಿನಲ್ಲೇ ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಹಾಸುಹೊಕ್ಕಾದ ವಿಷಯಗಳು ಎಂಬುದು ಸ್ಪಷ್ಟ ಎಂದವರು ಹೇಳಿದರು

ಸಂಯೋಜಕ ಡಾ. ಯೋಗೀಶ ಕೈರೋಡಿ ಪ್ರಸ್ತಾವನೆಗೈದರು.

ವಿದ್ಯಾರ್ಥಿಗಳಾದ ಹೃಷಿಕೇಶ್ (ನಾಗ ಬನ),ತೇಜಸ್ ಡಿ. ಪೂಜಾರಿ.(ಅಜಿಲ ಸೀಮೆ) ಅರ್ಚನಾ ಜೆ. ಪೂಜಾರಿ ( ಕೊರಗ ತನಿಯ) ಸಂಚನಾ (ಆರಾಧನಾ ಸಂಸ್ಕೃತಿ),ಶ್ರೇಯಸ್ ಶೆಟ್ಟಿ ( ಕೋಟಿ ಚೆನ್ನಯ) ಪ್ರಿಥ್ವಿಜಾ (ಅವಳಿ ಆರಾಧನೆ),

ಅನೂಷ (ತುಳುನಾಡ ಆಚರಣೆ) ತುಳುವಿನಲ್ಲಿ ವಿವಿಧ ವಿಚಾರಗಳನ್ನು ಮಂಡಿಸಿದರು.

ಪ್ರಾಂಶುಪಾಲ ಡಾ. ಕುರಿಯನ್, ಉಪನ್ಯಾಸಕರಾದ ಡಾ.ಜ್ಯೋತಿ ರೈ, ಹರೀಶ್ ಟಿ‌.ಜಿ ಉಪಸ್ಥಿತರಿಸ್ದರು. ಶ್ರೇಯಾಂಕ ಸ್ವಾಗತಿಸಿ, ಕೌಶಿಕ್ ವಂದಿಸಿದರು. ಪ್ರಣಮ್ಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನ ನೀಡುವ ಕಾಯಕ ಯೋಗಿ ಬದುಕು ಹಸನಾಗಿಸಿ: ವಿ.ಸಿ.ಉಮಾಶಂಕರ್
ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ, ದೌರ್ಜನ್ಯ ಖಂಡಿಸಿ ಪ್ರತಿಭಟನೆ