ಬೆಳೆ ನಿಗದಿಗೆ ಕಾಯ್ದೆ ರೂಪಿಸಬೇಕು

KannadaprabhaNewsNetwork |  
Published : Dec 24, 2024, 12:49 AM IST
ಶಿರ್ಷಿಕೆ-೨೩ಕೆ.ಎಂ.ಎಲ್‌.ಅರ್‌.೨- ಮಾಲೂರು ಪಟ್ಟಣದ ಕೃಷಿಕ ಸಮಾಜದ ಸಭಾಂಗಣದಲ್ಲಿ ಕೃಷಿಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ  ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರಗಳು ರೈತರು ಬೆಳೆಯುವ ಬೆಳೆಗಳಿಗೆ ಕಾಯ್ದೆ ರೂಪಿಸಿ ಎಷ್ಟು ಎಕರೆ ರೈತರು ಬೆಳೆ ಬೆಳೆಯಬೇಕು ಎಂಬುದನ್ನು ನಿಗದಿಪಡಿಸಬೇಕು ಜೊತೆಗೆ ಬೆಳೆ ಪರಿಹಾರವನ್ನು ಸಹ ಒದಗಿಸಬೇಕು ಸಾಲ ಸೋಲ ಮಾಡಿ ಬೆಳೆ ಹಾಕಿದ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದೆ ನಷ್ಟವನ್ನು ಅನುಭವಿಸಿದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆಯಾಗಿಸಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಹಸಿರು ಕ್ರಾಂತಿಯನ್ನು ಸೃಷ್ಟಿಸಿದ್ದ ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರ ಜನ್ಮದಿನವನ್ನು ಪ್ರತಿವರ್ಷ ರೈತರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು. ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ಕೃಷಿ ಸಮಾಜ ಮತ್ತು ಕೃಷಿಇಲಾಖೆ ತೋಟಗಾರಿಕೆ ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳೆಗಳಿಗೆ ಕಾಯ್ದೆ ರೂಪಿಸಿ

ಸರ್ಕಾರಗಳು ರೈತರು ಬೆಳೆಯುವ ಬೆಳೆಗಳಿಗೆ ಕಾಯ್ದೆ ರೂಪಿಸಿ ಎಷ್ಟು ಎಕರೆ ರೈತರು ಬೆಳೆ ಬೆಳೆಯಬೇಕು ಎಂಬುದನ್ನು ನಿಗದಿಪಡಿಸಬೇಕು ಜೊತೆಗೆ ಬೆಳೆ ಪರಿಹಾರವನ್ನು ಸಹ ಒದಗಿಸಬೇಕು ಸಾಲ ಸೋಲ ಮಾಡಿ ಬೆಳೆ ಹಾಕಿದ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದೆ ನಷ್ಟವನ್ನು ಅನುಭವಿಸಿದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆಯಾಗಿಸಬೇಕು ಎಂದರು.ನಕಲಿ ಬೀಜ, ಔಷಧ ಮಾರಾಟ

ರಸಗೊಬ್ಬರ ಔಷಧಿ ಬಿತ್ತನೆ ಬೀಜ ಮಾರಾಟದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮುಲಾಜಿ ಇಲ್ಲದೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ರೈತರು ತೊಂದರೆ ಅನುಭವಿಸಬೇಕಾಗುತ್ತದೆ, ಮಾದರಿಯಾಗಿ ಕೃಷಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಿ ರೈತರಿಗೆ ಸಮರ್ಪಕವಾದ ಮಾಹಿತಿ ಒದಗಿಸಬೇಕು ಎಂದರು.ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ ರಮೇಶ್, ಮೈರಾಡ ಸಂಸ್ಥೆಯ ನಿರ್ದೇಶಕರಾದ ಶಿವಶಂಕರ್, ರಾಘವೇಂದ್ರ ಸೂಡಿ, ಮುಖಂಡರಾದ ಚನ್ನರಾಯಪ್ಪ, ವೀರಭದ್ರಪ್ಪ, ಚಂದ್ರೇಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ರೈತ ಮುಖಂಡರಾದ ನಿಧರಮಂಗಲ ನಾಗಪ್ಪ, ವೆಂಕಟೇಶ್, ವಿನೋದ್, ಸಂಪಂಗಿರಾಮಯ್ಯ, ನೀಲಕಂಠ ಇನ್ನಿತರವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ