ಇಂದಿನಿಂದ ಅನಿಮೇಷನ್- ಮಲ್ಟಿಮೀಡಿಯಾ ಸಮೂಹ ಕಲಾ ಪ್ರದರ್ಶನ

KannadaprabhaNewsNetwork |  
Published : Apr 15, 2024, 01:32 AM IST
13ಕೆಡಿವಿಜಿ2-ದಾವಣಗೆರೆಯಲ್ಲಿ ಶನಿವಾರ ದಾವಿವಿ ದೃಶ್ಯಕಲಾ ಮಹಾ ವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯ ಘಟಕದ ಕಾಲೇಜಾದ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಅನಿಮೇಷನ್‌ ಮತ್ತು ಮಲ್ಟಿಮೀಡಿಯಾ ವಿಭಾಗದಿಂದ ಏ.15ರಿಂದ 30ರವರೆಗೆ ಪ್ರೆಗ್ಮೆಂಟ್ಸ್‌ ಆಫ್ ಇಲ್ಯೂಷನ್ ಶೀರ್ಷಿಕೆಯ ಪ್ರದರ್ಶನವನ್ನು ದಾವಿವಿ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

- ಏ.30ರವರೆಗೆ ಬೆಳಗ್ಗೆ 10.30ರಿಂದ ಸಂಜೆ 7.30 ರವರೆಗೆ ಪ್ರದರ್ಶನ: ದತ್ತಾತ್ರೇಯ ಭಟ್‌

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾನಿಲಯ ಘಟಕದ ಕಾಲೇಜಾದ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಅನಿಮೇಷನ್‌ ಮತ್ತು ಮಲ್ಟಿಮೀಡಿಯಾ ವಿಭಾಗದಿಂದ ಏ.15ರಿಂದ 30ರವರೆಗೆ ಪ್ರೆಗ್ಮೆಂಟ್ಸ್‌ ಆಫ್ ಇಲ್ಯೂಷನ್ ಶೀರ್ಷಿಕೆಯ ಪ್ರದರ್ಶನವನ್ನು ದಾವಿವಿ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್‌, ಏ.15ರ ಬೆಳಗ್ಗೆ 11 ಗಂಟೆಗೆ ದಾವಿವಿ ಕುಲ ಸಚಿವ (ಆಡಳಿತ) ಡಾ. ಯು.ಎಸ್. ಮಹಾಬಲೇಶ್ವರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಹಿರಿಯ ರಂಗಕರ್ಮಿ, ಪತ್ರಕರ್ತ ಬಾ.ಮ. ಬಸವರಾಜಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.

ಕಾಲೇಜು ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಆಶಯ ನುಡಿಗಳನ್ನಾಡುವರು. ಸಹಾಯಕ ಪ್ರಾಧ್ಯಾಪಕ ಡಾ.ಸತೀಶಕುಮಾರ ಪಿ. ವಲ್ಲೇಪುರೆ, ಅನಿಮೇಷನ್ ಮತ್ತು ಮಲ್ಟಿ ಮೀಡಿಯಾ ವಿಭಾಗದ ಬೋಧನಾ ಸಹಾಯಕ ರಂಗನಾಥ ಕುಲಕರ್ಣಿ ಭಾಗವಹಿಸುವರು. ಏ.15ರಿಂದ ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 7.30 ಗಂಟೆವರೆಗೆ ಪ್ರದರ್ಶನ ಇರಲಿದೆ. ಸಾರ್ವಜನಿಕರು, ಕಲಾ ಪ್ರೋತ್ಸಾಹಕರು, ವಿದ್ಯಾರ್ಥಿ, ಯುವಜನರು ಸದುಪಯೋಗ ಪಡೆಯಬೇಕು ಎಂದು ಕೋರಿದರು.

ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕರಾದ ರಂಗನಾಥ ಕುಲಕರ್ಣಿ ಪ್ರಮುಖ ಮಾರ್ಗದರ್ಶನ ಹಾಗೂ ಆರ್. ಅರುಣ ಸಹಕಾರದಲ್ಲಿ ಅನಿಮೇಷನ್ ಮತ್ತು ಮಲ್ಟಿಮೀಡಿಯಾ ವಿಭಾಗದ ವಿದ್ಯಾರ್ಥಿಗಳಾದ ಸುಷ್ಮಿತಾ, ಲೇಖಕ್, ಪವನ ಲಾಲ್, ಅಬೂಬಕರ್, ಮನೋಜ, ಹರೀಶ, ಕೃತಿಕಾ, ಕೀರ್ತಿ ಸಂಗೂರ, ವೃಷಭ್ ರಾಜ, ದರ್ಶನ್, ಮೇಘಾ ಎಸ್ ರಾಯ್ಕರ್, ಫಿರ್ದೋಸ್‌ ನಲ್‌ಬಂದ್, ಆದಿತ್ಯ, ಮಹ್ಮದ್ ನಯಾಜ್, ಮೊನಿಕಾ ಮತ್ತು ರಚನಾ ಶೆಟ್ಟರ್ ರಚಿಸಿದ ಅನಿಮೇಶನ್ ಪ್ರಸ್ತುತಿಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನದ ಮೂಲಕ ರಚಿಸಿದ 3ಡಿ ಮಾಡೆಲಿಂಗ್, ಸ್ಟೋರಿ ಬೋರ್ಡ್, ಪೇಂಟಿಂಗ್, ಇಲ್‌ಸ್ಟೇಶನ್, ಮೋಶನ್ ಗ್ರಾಫಿಕ್, ಕಾನ್ಸೆಫ್ಟ್ ಆರ್ಟ್ ಮೊದಲಾದ ಪ್ರಕಾರದ ಅಭಿವ್ಯಕ್ತಿಗಳು ಇರಲಿವೆ. ಕೆಲ ವಿಡಿಯೋ ಪ್ರಸ್ತುತಿಗಳೂ ಇರುವುದು ವಿಶೇಷ. ವಿಶ್ವ ದೃಶ್ಯಕಲಾ ದಿನಾಚರಣೆ ಪ್ರಯುಕ್ತ ಏ.16ರಂದು ಬೆಳಗ್ಗೆ 11 ಗಂಟೆಗೆ ಮತದಾನ ಜಾಗೃತಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ''''''''ಸದೃಢ ಪ್ರಜಾಪ್ರಭುತ್ವಕ್ಕೆ ನಿರ್ಭಯ ಮತದಾನ'''''''' ವಿಷಯ ಕುರಿತು ಸ್ಥಳದಲ್ಲೇ ಚಿತ್ರ ರಚನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾಲೇಜಿನ ಶಿವಶಂಕರ್ ಸುತಾರ್, ರಂಗನಾಥ್ ಕುಲಕರ್ಣಿ ಎಸ್.ಎಚ್. ಹರೀಶ್ ಉಪಸ್ಥಿತರಿದ್ದರು.

- - -

-13ಕೆಡಿವಿಜಿ2:

ದಾವಣಗೆರೆಯಲ್ಲಿ ಶನಿವಾರ ದಾವಿವಿ ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ