ಮಾಹೆ ಸಂಶೋಧಕರ ಹೆಸರಿಗೆ ಕಳಂಕ ಹಚ್ಚುವ ಪ್ರಯತ್ನ!

KannadaprabhaNewsNetwork |  
Published : Sep 12, 2026, 03:00 AM IST
ಮಾಹೆ | Kannada Prabha

ಸಾರಾಂಶ

ಮಾಹೆಯ ಹಿರಿಯ ಸಂಶೋಧನಾ ನಿರ್ದೇಶಕರ ಬಗ್ಗೆ ತಪ್ಪು ಮಾಹಿತಿ ರವಾನಿಸಿ, ಅವರ ವೃತ್ತಿ ಜೀವನಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ : ಮಾಹೆಯ ಹಿರಿಯ ಸಂಶೋಧನಾ ನಿರ್ದೇಶಕರ ಬಗ್ಗೆ ತಪ್ಪು ಮಾಹಿತಿ ರವಾನಿಸಿ, ಅವರ ವೃತ್ತಿ ಜೀವನಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಾ. ನವೀನ್ ಸಾಲಿನ್ಸ್ ಅವರು ಮಾಹೆಯ ಸಂಶೋಧನಾ ನಿರ್ದೇಶನಾಲಯದಲ್ಲಿ ಸಂಶೋಧನಾ ನಿರ್ದೇಶಕರು, ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಕ್ಯಾನ್ಸ‌ರ್ ಸೇರಿದಂತೆ ಗಂಭೀರ ಹಾಗೂ ಅಂತಿಮ ಹಂತದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.ಸೆ.1ರಂದು ಅಪರಿಚಿತರು ‘Phytophthora X’ ಎಂಬ ನಕಲಿ ಐಡಿಯಿಂದ Jay,Pereira@protonmail.com ಎಂಬ ಇ-ಮೇಲ್ ಖಾತೆಯಿಂದ ಅಂತಾರಾಷ್ಟ್ರೀಯ ಜರ್ನಲ್‌ಗಳ ಸಂಪಾದಕರು ಹಾಗೂ ಪ್ರಕಾಶಕರಿಗೆ ಡಾ. ಸಾಲಿನ್ಸ್‌ ವಿರುದ್ಧ ಇ-ಮೇಲ್ ಕಳುಹಿಸಿದ್ದಾರೆ. ಈ ಕಿಡಿಗೇಡಿಯು ತಮ್ಮ ಸಂಶೋಧನೆಗಳ ಕುರಿತು ಅಂತಾರಾಷ್ಟ್ರೀಯ ಜರ್ನಲ್‌ಗಳ ಸಂಪಾದಕ - ಪ್ರಕಾಶರಿಗೆ ಸುಳ್ಳು ಮಾಹಿತಿ ನೀಡಿ, ತಮ್ಮ ಸಂಶೋಧನೆಯ ವಿಶ್ವಾಸಾರ್ಹತೆಗೆ ಧಕ್ಕೆ, ತಮ್ಮ ಹೆಸರಿಗೆ ಕಳಂಕ ತಂದಿದ್ದಾರೆ, ಈ ಜರ್ನಲ್‌ಗಳಲ್ಲಿ ತಾನು ಬರೆದ ಸಂಶೋಧನಾ ಲೇಖನಗಳನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ, ಇದರಿಂದ ತನ್ನ ವೃತ್ತಿಜೀವನದ ಪ್ರಗತಿಗೆ ಅಡ್ಡಿಯಾಗುವ ಹಾಗೂ ಪ್ರಸ್ತುತ ಉದ್ಯೋಗಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದವರು ದೂರಿನಲ್ಲಿ ಹೇಳಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಪೀಡಿತ ತಾಲೂಕು ಘೋಷಣೆ ಶೇ.200 ಖಚಿತ: ನಾಡಗೌಡ
ನನಸಾಗದ ಡಾ.ಅಂಬೇಡ್ಕರ್ ಭವನ ಕನಸು।