ಬಡ ಮೀನುಗಾರರಿಗೆ ಪಟ್ಟಾ ನೀಡಲು ಪ್ರ‍್ರಾಮಾಣಿಕ ಪ್ರಯತ್ನ: ದಿನಕರ ಶೆಟ್ಟಿ

KannadaprabhaNewsNetwork |  
Published : Mar 31, 2026, 02:45 AM IST
ಕಾರ್ಯಕ್ರಮ ಉದ್ಘಾಟಿಸುತ್ತಿರುವುದು  | Kannada Prabha

ಸಾರಾಂಶ

ಇಲ್ಲಿನ ಮುಖ್ಯ ಕಡಲತೀರದ ಬಳಿ ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿರುವ ಬಡ ಮೀನುಗಾರರಿಗೆ ಪಟ್ಟಾ ನೀಡಲು ಪ್ರ‍್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ದಂಡೆಭಾಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಳ್ಳಿ ಹಬ್ಬದಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಗೋಕರ್ಣ

ಇಲ್ಲಿನ ಮುಖ್ಯ ಕಡಲತೀರದ ಬಳಿ ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿರುವ ಬಡ ಮೀನುಗಾರರಿಗೆ ಪಟ್ಟಾ ನೀಡಲು ಪ್ರ‍್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಇಲ್ಲಿನ ದಂಡೆಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ಮೀನುಗಾರರೇ ಹೆಚ್ಚು ವಾಸವಿರುವ ಈ ಪ್ರದೇಶದಲ್ಲಿ ಈ ಸಮಾಜದವರ ಶೈಕ್ಷಣಿಕ ಪ್ರಗತಿಗೆ ಇಲ್ಲಿರುವ ಸರ್ಕಾರಿ ಶಾಲೆ ಉತ್ತಮ ಶಿಕ್ಷಣ ನೀಡುತ್ತಾ ೨೫ ವರ್ಷ ಪೂರೈಸಿರುವುದು ಸಂತಸ ತಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ದಿಯಾಗಲಿ ಎಂದು ಆಶಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಯಲ್ಲಿ ಎಲ್ಲ ರೀತಿ ಸೌಲಭ್ಯ ಒದಗಿಸಿದ್ದು, ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುವಂತೆ ಪಾಲಕರಿಗೆ ಕರೆ ನೀಡಿದರು.ತಾಪಂ ಇಒ ರಾಜೇಂದ್ರ ಭಟ್, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ನ್ಯಾಯವಾದಿ ಮಂಗಲಮೂರ್ತಿ ಸಭಾಹಿತ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ,ಉದ್ಯಮಿ ಕುಮಾರ ದೀವಟಗಿ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ಮಾತನಾಡಿದರು.ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷೆ ಸುಜಾತಾ ಅಂಬಿಗ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಆಡಳಿತ)ಲತಾ ನಾಯಕ ಹಸ್ತಪ್ರತಿ ಬಿಡುಗಡೆ ಮಾಡಿದರು. ಕುಮಟಾದ ಡಯಟ್ ಪ್ರಾಚಾರ್ಯ ಹಾಗೂ ಉಪನಿರ್ದೇಶಕರು (ಅಭಿವೃದ್ದಿ) ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಬಿ.ಆರ್.ಸಿ. ವಿಜಯಲಕ್ಷ್ಮೀ ಹೆಗಡೆ, ಗ್ರಾಪಂ ಮಾಜಿ ಸದಸ್ಯ ಉಮೇಶ ಅಂಬಿಗ, ಸತೀಶ ದೇಶಭಂಡಾರಿ, ಪಾರ್ವತಿ ಶೆಟ್ಟಿ, ಮಹೇಶ ಅಂಬಿಗ, ಮಲ್ಲಿಕಾರ್ಜುನ ಹೊನ್ನಾವರಕರ, ಗಿರೀಶ ದೇಶಭಂಡಾರಿ, ಶಿಕ್ಷಣ ಸಂಯೋಜಕಿ ದೀಪಾ ಕಾಮತ್, ಸಿ.ಆರ್.ಪಿ. ಮೋಹಿನಿ ಗೌಡ, ಭದ್ರಕಾಳಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ, ಪತ್ರಕರ್ತ ಗಜಾನನ ನಾಯಕ ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕ ಜಿ.ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಎಂ.ಎನ್. ನಾಯ್ಕ, ಎಂ.ಎಂ. ನಾಯ್ಕ ನಿರ್ವಹಿಸಿದರು. ಸಿ.ಆರ್.ಪಿ. ಮೋಹಿನಿ ಗೌಡ ವಂದಿಸಿದರು. ಇದೇ ವೇಳೆ ಶಾಲೆ ಅಭಿವೃದ್ದಿಗೆ ಸಹಕಾರ ನೀಡಿದ ಮಹನೀಯರು,ಈ ಶಾಲೆಯಲ್ಲಿ ಕರ್ತವ್ಯನಿರ್ವಹಿಸಿದ ಶಿಕ್ಷಕರು, ಭಾಗವಹಿಸಿದ ಗಣ್ಯರು ಹಾಗೂ ಸಹಕರಿಸಿದ ಪ್ರಮುಖರನ್ನ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯಕ್ಷಗಾನ ಪಾತ್ರಧಾರಿಗಳಾಗಿ ಯಕ್ಷಗಾನ ಪದ್ಯದ ಮೂಲಕ ವಿದ್ಯಾರ್ಥಿಗಳಿಂದ ಗಣ್ಯರ ಸ್ವಾಗತಿಸಿದ್ದು ವಿಶೇಷವಾಗಿತ್ತು. ಮಲ್ಲಿಕಾರ್ಜುನ ಹೊನ್ನಾವರಕರ್ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನಕ್ಕೆ ಶಕ್ತಿ, ಪ್ರೋತ್ಸಾಹ ನೀಡುವ ನಾಟಕ
ಬದುಕಿನ ಪಾವಿತ್ರ್ಯ ಕಾಪಾಡಲು ಅಧ್ಯಾತ್ಮ ಅವಶ್ಯ: ಡಾ. ಕರಿಬಸವ ರಾಜೇಂದ್ರ ಶ್ರೀಗಳು