ಈಶಾ ನಾಗಮಂಟಪಕ್ಕೆ ಹರಿದುಬಂದ ಭಕ್ತಸಾಗರ

KannadaprabhaNewsNetwork |  
Published : Jul 30, 2025, 12:45 AM IST
ಸಿಕೆಬಿ-6 ನಾಗಪಂಚಮಿ ಪ್ರಯುಕ್ತ ಸ್ಥಳೀಯ ಮಹಿಳೆಯರು ತುಂಬಿದ ಹಾಲಿನ ಪೂರ್ಣ ಕುಂಭಗಳನ್ನು ಹೊತ್ತು ಆದಿಯೋಗಿಯ ಕಡೆ ಹೋಗುತ್ತಿರುವುದು        ಸಿಕೆಬಿ-7 ನಾಗಪಂಚಮಿ ಪ್ರಯುಕ್ತ ಸ್ಥಳೀಯ ಮಹಿಳೆಯರು  ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಹಾಲನ್ನು ಸಮರ್ಪಿಸಿ ಅಭಿಷೇಕ ಮಾಡಿದರು | Kannada Prabha

ಸಾರಾಂಶ

ನಾಗರ ಪಂಚಮಿಯಂದು ನಾಗನಿಗೆ ಹಾಲು ಸರ್ಮಪಿಸುವ ಈ ಸಂಪ್ರದಾಯ ಆಚರಣೆಯಲ್ಲಿದ್ದು, ಭಕ್ತರಿಗೆ ನಾಗ ಮಂಟಪದಲ್ಲಿ ಅನನ್ಯ ಬೆಣ್ಣೆ ಸೇವೆ, ಅನನ್ಯ ಸರ್ಪ ಸೇವೆ ಮತ್ತು ಮಹಾ ಆರತಿ ಸೇರಿದಂತೆ ಶಕ್ತಿಯುತ ಆಚರಣೆಗಳನ್ನು ವೀಕ್ಷಿಸುವ ಅವಕಾಶ ನೀಡಲಾಗಿತ್ತು. ಭಕ್ತರು ನಾಗ ದೋಷ ನಿವಾರಣ ಪ್ರಕ್ರಿಯೆಯಂತಹ ಪವಿತ್ರ ಅರ್ಪಣೆಗಳಲ್ಲಿ ಭಾಗವಹಿಸಿದ್ದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶಾದ 112 ಅಡಿ ಎತ್ತರದ ಆದಿಯೋಗಿ ವಿಗ್ರಹವಿರುವ ಸದ್ಗುರು ಸನ್ನಿಧಿಯಲ್ಲಿ ಶಕ್ತಿಯುತವಾಗಿ ಪ್ರಾಣಪ್ರತಿಷ್ಠೆ ಮಾಡಲಾದ ನಾಗ ಮಂಟಪದಲ್ಲಿ ಆಚರಣೆಗಳು ಮತ್ತು ಅರ್ಪಣೆಗಳೊಂದಿಗೆ ನಾಗರ ಪಂಚಮಿ ಪ್ರಯುಕ್ತ ಮಂಗಳವಾರ ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳ ನೂರಾರು ಭಕ್ತರು ಸದ್ಗುರುಗಳಿಂದ ಪ್ರತಿಷ್ಠಿತಗೊಂಡ ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಹಾಲನ್ನು ಸಮರ್ಪಿಸಿ ಅಭಿಷೇಕ ಮಾಡಿದರು.

ನಾಗಪಂಚಮಿ ಅಂಗವಾಗಿ ಸದ್ಗುರುವಿನಿಂದ ಸ್ಥಾಪಿಸಲ್ಪರುವ ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಕ್ಷೀರಾಬಿಷೇಕ ಮಾಡಿದರು. ತುಂಬಿದ ಹಾಲಿನ ಪೂರ್ಣ ಕುಂಭಗಳನ್ನು ಮಕ್ಕಳಿಂದ ಹಿರಿಯವರವರೆಗೆ ತಮ್ಮ ಹಳ್ಳಿಗಳಿಂದ ಶೋಭಾಯಾತ್ರೆಯ ಮೂಲಕ ತಂದು, ಅದನ್ನು ನಾಗ ಹಾಗೂ ಯೋಗೇಶ್ವರ ಲಿಂಗದ ಸನ್ನಿಧಿಗೆ ಸಮರ್ಪಿಸಿದರು.

ನಾಗರ ಪಂಚಮಿಯಂದು ನಾಗನಿಗೆ ಹಾಲು ಸರ್ಮಪಿಸುವ ಈ ಸಂಪ್ರದಾಯ ಆಚರಣೆಯಲ್ಲಿದ್ದು, ಭಕ್ತರಿಗೆ ನಾಗ ಮಂಟಪದಲ್ಲಿ ಅನನ್ಯ ಬೆಣ್ಣೆ ಸೇವೆ, ಅನನ್ಯ ಸರ್ಪ ಸೇವೆ ಮತ್ತು ಮಹಾ ಆರತಿ ಸೇರಿದಂತೆ ಶಕ್ತಿಯುತ ಆಚರಣೆಗಳನ್ನು ವೀಕ್ಷಿಸುವ ಅವಕಾಶ ನೀಡಲಾಗಿತ್ತು. ಭಕ್ತರು ನಾಗ ದೋಷ ನಿವಾರಣ ಪ್ರಕ್ರಿಯೆಯಂತಹ ಪವಿತ್ರ ಅರ್ಪಣೆಗಳಲ್ಲಿ ಭಾಗವಹಿಸಿದ್ದರು.

ಸಂಜೆ ಆರಂಭವಾದ ಸಂಜೆಯ ಸಂಭ್ರಮಾಚರಣೆಗಳು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿದ್ದವು. ಸದ್ಗುರು ಗುರುಕುಲಮ್ ಸಂಸ್ಕೃತಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ. ಈಶಾದ ಸ್ವಂತ ಸಂಗೀತ ತಂಡವಾದ "ಸೌಂಡ್ಸ್ ಆಫ್ ಈಶ "ದಿಂದ ಆಹ್ಲಾದಕರ ಸಂಗೀತ ರಸದೌತನ ಬಡಿಸಿದರೆ, ತಲ್ಲೀನಗೊಳಿಸುವ ರೂಪದಲ್ಲಿ ಆದಿಯೋಗಿಯ ಮೂಲ ಮತ್ತು ಯೋಗ ವಿಜ್ಞಾನದ ಅಪೂರ್ವ ದೃಶ್ಯ ನಿರೂಪಣೆಯ ಪ್ರಸ್ತುತಿಯಲ್ಲಿ ಆದಿಯೋಗಿ ದಿವ್ಯ ದರ್ಶನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ