
ಕನ್ನಡಪ್ರಭ ವಾರ್ತೆ, ತುಮಕೂರು
ಅವರು ತುಮಕೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ತುಮಕೂರು ಸಂಶೋಧಕರ ತಂಡ ತುಮಕೂರು, ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಇತಿಹಾಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಮತ್ತು ಇತಿಹಾಸ ದಿವಸ, ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ನಡೆಯುವ ಹತ್ತು ಕಾರ‍್ಯಕ್ರಮಗಳ ಉದ್ಘಾಟನಾ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ಪರಂಪರೆ ಸಂಸ್ಕೃತಿಯನ್ನು ಕೊಂಡುಕೊಳ್ಳಲಾಗದ ವಸ್ತುವಾಗಿದೆ. ಅದನ್ನು ಜೋಪಾನ ಮಾಡಬೇಕು. ಅಭಿವೃದ್ಧಿಯನ್ನು ಹಣದ ಮೂಲಕ ಅಳೆಯಬಾರದು. ಅದನ್ನು ನಾವು ಸಾಮಾಜಿಕ, ಐತಿಹಾಸಿಕ ದೃಷ್ಟಿಯಿಂದ ನೋಡಲು ಇತಿಹಾಸ ನಮಗೆ ಪಾಠ ಕಲಿಸುತ್ತದೆ. ನಮ್ಮ ಸಮಾಜ ಹಿಂದೆ ಹೇಗಿತ್ತು, ಈಗ ಹೇಗಿದೆ ಮುಂದೆ ಹೇಗಿರಬೇಕು ಎಂದು ನಮಗೆ ಇತಿಹಾಸ ತಿಳಿಸುತ್ತದೆ. ಚರಿತ್ರೆ ಮಾನವೀಯ ಮೌಲ್ಯ, ನೈತಿಕ ಮೌಲ್ಯಗಳನ್ನು ತಿಳಿಸುತ್ತದೆ, ಮನುಷ್ಯತ್ವದ ಮಾನವೀಯದ ಕೊಂಡಿಯಾಗಿರುವ ಚರಿತ್ರೆಯನ್ನು ಇಂದಿನ ಪೀಳಿಗೆ ತಿಳಿದು ಮುಂದಿನ ಪೀಳಿಗೆಗೆ ಪಸರಿಸುವ ಕಾರ‍್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.ಸಂಪನ್ಮೂಲ ವಿದ್ವಾಂಸರಾಗಿ ಮಾತನಾಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಪ್ರೊ. ದೇವರಕೊಂಡಾರೆಡ್ಡಿ ಅವರು ಕರ್ನಾಟಕ ಇತಿಹಾಸ ಅಕಾಡೆಮಿಯು ಕಳೆದ 40 ವರ್ಷಗಳಿಂದ ಕರ್ನಾಟಕದ ಇತಿಹಾಸ ಪರಂಪರೆಯ ಕುರಿತು ಅಧ್ಯಯನ, ಜಾಗೃತಿ ಮೂಡಿಸುತ್ತಾ ಬಂದಿದೆ. ತುಮಕೂರಿನ ಇತಿಹಾಸವು ಸಾವಿರಾರು ವರ್ಷಕ್ಕೂ ಹಳೆಯದಿದೆ. ತಾಲೂಕಿನ ಹಿರೇಗುಂಡಗಲ್ಲಿನಲ್ಲಿ ವೀರಗಲ್ಲು, ಶಾಸನಗಳನ್ನು ಸಂರಕ್ಷಣೆ ಮಾಡಿದ್ದಾರೆ ಈ ರೀತಿಯ ಕಾರ‍್ಯ ಕರ್ನಾಟಕದ ಮೂಲೆಮೂಲೆಗಳಲ್ಲಿ ಆಗಬೇಕು ಎಂದರು. ಶಾಸನಗಳು, ವೀರಗಲ್ಲು, ದೇವಾಲಯದ ಅಡಿಯಲ್ಲಿ ಯಾವುದೇ ನಿಧಿ ಇರುವುದಿಲ್ಲ ಇಂತಹ ಅಮೂಲ್ಯ ಇತಿಹಾಸವೇ ನಿಧಿ ಇದ್ದಂತೆ ಅದನ್ನು ಹಾಳುಮಾಡುವ ಅನೇಕ ದುರಂತ ಕೆಲಸ ಆಗುತ್ತಿದೆ ಇದು ನಡೆಯದಂತೆ ತಡೆಯಬೇಕು ಎಂದರು. ತುಮಕೂರು ವಿಶ್ವವಿದ್ಯಾಲಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಎಂ ಕೊಟ್ರೇಶ್ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಈ ಪರಂಪರೆ ಜಾಗೃತಿ ಕಾರ‍್ಯಕ್ರಮದ ಉದ್ದೇಶ, ಭೌತಿಕ, ಅಭೌತಿಕ ಪರಂಪರೆ, ಜಲ ಪರಂಪರೆ, ಸಂಸ್ಕೃತಿ ಉಳಿಯಲು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಇದರ ಭಾಗವಾಗಿ ನಮ್ಮ ತುಮಕೂರು ಸಂಶೋಧಕರ ತಂಡದ ಇಪ್ಪತ್ತು ಜನ ಸದಸ್ಯರು ಈ ಇತಿಹಾಸ ಪರಂಪರೆ ಸಂರಕ್ಷಿಸುವ ಕಾರ‍್ಯ ಮಾಡುತ್ತಿದ್ದಾರೆ ಎಂದರು.