ಗದಗ: ಪುರಾತನರು ಮರ್ತ್ಯ ಲೋಕದಲ್ಲಿ ಭಕ್ತಿಯ ಮನೆ ಕಟ್ಟಿಕೊಂಡಿದ್ದರು, ಅವರು ಭಕ್ತಿ ಮಾಡಿ ಸ್ವರ್ಗಕ್ಕೆ ಹೋದರು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿ ಹೇಳಿದರು.
ಭಕ್ತಿಯ ವ್ಯವಹಾರ ಮಾಡಿದರು. ಸಾಮಿಪ್ಯ, ಸಾರುಪ್ಯ, ಸಾಲುಕ್ಯ, ಸಾಯುಜ್ಯ ಎಂಬ ನಾಲ್ಕು ವಿಧ ಪದವಿಗೊಳಗಾದರು. ಈ ಪದವಿಗಳಿಂದಾಚೆ ನಿಜದ ನಿಲುವುಳ್ಳ ನಿಜ ಭಕ್ತಿಯ ನಿಲುವು ಗುರುತಿಸಲಿಲ್ಲ. ನಿಜ ಭಕ್ತಿಯ ಮಹಾಮನೆ ಕಟ್ಟಲಿಲ್ಲ. ಪದವಿಗಳು ಸ್ಥಿರವಲ್ಲ ಗಮನಾಗಮಕ್ಕೆ ಕರೆದುಕೊಂಡು ಹೋಗುವಂತವು.
12ನೇ ಶತಮಾನದ ಬಸವಾದಿ ಶಿವಶರಣರು ಮರ್ತ್ಯದಲ್ಲಿ ಬಂದು ಕಲ್ಯಾಣದಲ್ಲಿ ಭಕ್ತಿಯ ಮಹಾಮನೆ ಕಟ್ಟಿದರೆ, ಮರ್ತ್ಯ ಲೋಕವೆಲ್ಲವೂ ಭಕ್ತಿಯ ಸಾಮ್ರಾಜ್ಯವಾಗಿತ್ತು. ಆ ಮನೆಗೆ ತೆಲೆಬಾಗಿ, ಕೈಮುಗಿದು ಹೋದವರೆಲ್ಲರೂ ನಿಜಲಿಂಗ ಪದವಿ ಪಡೆದರು. ಗಮನಾಗಮದ ರಹಿತ ನಿಜದ ನಿಲುವಿನಲ್ಲಿ ನಿಜಮುಕ್ತಿಂ ಪಡೆದವರು ಶಿವಶರಣರು ಎಂದು ತಿಳಿಸಿದರು.11ನೇ ಶತಮಾನದ ಪುರಾತನರ ಭಕ್ತಿಗೂ 12ನೇ ಶತಮಾನದ ಶರಣರ ಭಕ್ತಿಗೂ ಅನ್ಯ ಭಕ್ತಿ, ಅನನ್ಯ ಭಕ್ತಿಯ ದೃಷ್ಠಾಂತ ಕೊಟ್ಟು ವಿವರಿಸಿದರು.
ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿದರು. ತಬಲಾ ವಾದಕ ಹೇಮೇಂದ್ರಕುಮಾರ ಹಿರೇಮಠ ನಡೆಸಿದರು. ಪ್ರಸಾದ ಸೇವೆ ಪ್ರಭುಗೌಡ ಕುಬೇರ ಗೌಡ ಚಿನ್ನಪ್ಪಗೌಡರು ಹಾಗೂ ಕುಟುಂಬದವರು ಸೇವೆ ವಹಿಸಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಸದಸ್ಯ ಕೊಟ್ರಪ್ಪ ಕಮತರ, ಎಂ.ಎಂ. ಹಿರೇಮಠ, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರುಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ್, ಸುಭಾಸ ಹವಳೆ, ವಿರುಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಸುರೇಶ ನಿಲುಗಲ್ಲ, ಅಶೋಕ ತಮೃಳ್ಳಿ, ಬಸವರಾಜ ಮೊರಬದ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಶೈಲಾ ಮಾನ್ವಿ ಇದ್ದರು.