ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
23ರಂದು ದೇವಿಯ ಪ್ರಾಣ ಪ್ರತಿಸ್ಠಾಪನೆ ಗೋಪರಕ್ಕೆ ಕಳಶ ಪ್ರತಿಸ್ಠಾಪನೆಗಳು ಜರುಗಿದವು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ, ಹಾಸನ, ಕೊಡಗು ಶಾಖಾಮಠದ ಶ್ರೀ ಶ್ರೀ ಶಂಭುನಾಥ ಸ್ವಾಮಿಗಳು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಗಳು ಮಾನವನಿಗೆ ನೆಮ್ಮದಿಯನ್ನು ನೀಡುತ್ತವೆ. ದೇವಸ್ಥಾನಗಳಿಂದ ಧಾರ್ಮಿಕ ಭಾವನೆ ಬೆಳೆಯಲು ಸಹಕಾರಿಯಾಗಿದೆ. ಆನೆಕನ್ನಬಾಂಡಿಯಮ್ಮ ಎಲ್ಲರಿಗೂ ಮಂಗಳವನ್ನು ಉಂಟುಮಾಡಲ ಎಂದು ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ ಮಂಜು ಹಾಜರಿದ್ದರು. ಅಲ್ಲದೆ ಪೂಜಾದಿ ಕೈಂಕರ್ಯದಲ್ಲಿ ಹೊಳೆನರಸೀಪುರ ಕ್ಷೇತ್ರದ ಶಾಸಕರಾದದೆಹೆಚ್ ಡಿ ರೇವಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ, ಭಾಗವಹಿಸಿದರು. ಆಗಮಿಸಿದ್ದ ಭಕ್ತರಿಗೆ ೩ ದಿನಗಳ ಕಾಲ ದಾಸೋಹ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ಬಸವನಹಳ್ಳಿ ಕೊಪ್ಪಲು ಗ್ರಾಮಸ್ಥರು ಭಕ್ತಾದಿಗಳು ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು. ಶಿಕ್ಷಕರಾದ ರಮೇಶ್ ಸ್ವಾಗತಿಸಿದರು. ಪ್ರಕಾಶ್ ನಿರೂಪಿಸಿದರು. ಗುರು ಹಿರಿಯರನ್ನು ದಾನಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.