ಹಾವೇರಿ: ಪ್ರಗತಿಪರ ರೈತರು, ಸಮಾಜ ಸೇವಕ ಮಲ್ಲೇಶಪ್ಪ ಅಂಗಡಿ ಅವರ ಕುರಿತಾದ ಪರೋಪಕಾರಿ ಅಂಗಡಿ ಮಲ್ಲೇಶಪ್ಪನವರ ವ್ಯಕ್ತಿತ್ವ ದರ್ಶನ ಪುಸ್ತಕ ಬಿಡುಗಡೆ ಸಮಾರಂಭವನ್ನು ಜೂ. 15ರಂದು ಬೆಳಗ್ಗೆ 10.30ಕ್ಕೆ ತಾಲೂಕಿನ ಕೆಸರಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತಿ ಸಿ.ಎಸ್. ಮರಳಿಹಳ್ಳಿ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಹೊಸರಿತ್ತಿ ಗುದ್ದಲೀಸ್ವಾಮಿಮಠದ ಗುದ್ದಲೀಶ್ವರ ಸ್ವಾಮೀಜಿ, ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ವರ್ತಕರಾದ ನಿರಂಜನಪ್ಪ ಪಾವಲಿ, ವಿಶ್ರಾಂತ ಜಿಲ್ಲಾ ಮುಖ್ಯ ನ್ಯಾಯಾಧೀಶ ಸಿ.ಎಸ್. ಮರಗೂರ ಅವರ ಘನ ಉಪಸ್ಥಿತಿಯಲ್ಲಿ, ವೈದ್ಯರಾದ ಡಾ. ಮೃತ್ಯುಂಜಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ರಾಜ್ಯ ಅರಣ್ಯ ನಿಗಮದ ಅಧ್ಯಕ್ಷ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಅಂಗಡಿ ಮಲ್ಲೇಶಪ್ಪ ಅವರ ಪುತ್ರ ದಾನಪ್ಪ ಅಂಗಡಿ, ಬಾಬಣ್ಣ ಮಾಮಲೇದೇಸಾಯಿ ಇದ್ದರು.18ರಂದು ಬೆಂಗಳೂರಿನಲ್ಲಿ ವಜ್ರಮಹೋತ್ಸವ ಸಂಭ್ರಮ
ನೌಕರರ ಸಂಘ 60 ಸಂವತ್ಸರಗಳನ್ನು ಪೂರೈಸಿರುವ ಸವಿನೆನಪಿಗಾಗಿ ಜೂ. 18ರಂದು ಬೆಂಗಳೂರಿನಲ್ಲಿ ವಜ್ರಮಹೋತ್ಸವ ಸಂಭ್ರಮ ಸಮಾರಂಭ ಆಯೋಜಿಸಿದೆ. ಇದಕ್ಕಾಗಿ ಹೆಸ್ಕಾಂ ನೌಕರರಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದ್ದು, ಎಲ್ಲರೂ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋಪಾಲ ಲಮಾಣಿ ಮಾತನಾಡಿದರು. ಕೇಂದ್ರ ಸಮಿತಿ ಸದಸ್ಯ ಎಂ.ಬಿ. ಸಣ್ಣಿಂಗಮ್ಮನವರ ಅಧ್ಯಕ್ಷತೆ ವಹಿಸಿದ್ದರು.ವಿಭಾಗೀಯ ಲೆಕ್ಕಾಧಿಕಾರಿ ರಾಜು, ಲೆಕ್ಕಾಧಿಕಾರಿ ಪುಷ್ಪಾವತಿ, ಕಲ್ಯಾಣ ಸಮಿತಿ ಸದಸ್ಯ ಎಸ್.ಬಿ. ಹೊಳಿಯಣ್ಣನವರ, ಸ್ಥಳೀಯ ಸಮಿತಿ ಅಧ್ಯಕ್ಷ ಮಂಜು ಬಾರ್ಕಿ, ಬೀರಪ್ಪ ತಿಪ್ಪಣ್ಣನವರ, ಉಪಾಧ್ಯಕ್ಷ ತಿಪ್ಪೇಶ ನಾಯ್ಕ್, ಉಮೇಶ ಹನುಮನಹಳ್ಳಿ, ಕೆ. ನದಾಫ್ ಹಾಗೂ ಸ್ಥಳೀಯ ಸಮಿತಿ, ಕಲ್ಯಾಣ ಸಮಿತಿ ಎಲ್ಲ ಪದಾಧಿಕಾರಿಗಳು, ವಿಭಾಗ ವ್ಯಾಪ್ತಿಯ ಎಲ್ಲ ಅಧಿಕಾರಿಗಳು, ನೌಕರರು, ನಿವೃತ್ತ ನೌಕರರು ಇದ್ದರು.