ಕೊಪ್ಪಳ: ಕೊಪ್ಪಳದ ಅನಿಕೇತ ರಾಜೇಶ ಬಳ್ಳಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಿಂದ ನೀಡಲಾಗುವ ೨೦೨೩-೨೪ನೇ ಸಾಲಿನ ಪ್ರತಿಷ್ಠಿತ ಬಾಲವಿಕಾಸ ಅಕಾಡೆಮಿಯ ಬಾಲಗೌರವ ಪ್ರಶಸ್ತಿ ಬೆಳಗಾವಿಯ ಸುವರ್ಣಸೌಧದ ಸಭಾಂಗಣದ ಭವ್ಯ ವೇದಿಕೆಯಲ್ಲಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ೭ನೇ ತರಗತಿ ಓದುತ್ತಿರುವ ಅನಿಕೇತ ಬಳ್ಳಾರಿ ನಮ್ಮಭಾಷೆ - ನಮ್ಮ ಕನ್ನಡ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದಾನೆ. ಉತ್ತಮ ಈಜುಪಟು ಮತ್ತು ನೃತ್ಯ ಪಟುವಾಗಿದ್ದಾನೆ. ಅನೀಕೇತ ಬಳ್ಳಾರಿಯ ಬಹುಮುಖ ಪ್ರತಿಭೆ ಗುರುತಿಸಿ ಕ್ರೀಡಾ ಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.