ಕನ್ನಡಪ್ರಭ ವಾರ್ತೆ ಮಂಡ್ಯ
ಇಂಫಾಕ್ಟ್ ಟುಮಾರೋ ಆಗ್ರೊ ವೆಂಟ್ಚರ್ಸ್‌ನಿಂದ ನೂತನವಾಗಿ ಆರೋಗ್ಯಕರ, ಶುದ್ಧ ಪಶು ಆಹಾರ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಪಶು ಆಹಾರ ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮ ಜು.೧೭ರಂದು ಬೆಳಿಗ್ಗೆ ೧೦.೩೦ಕ್ಕೆ ಹನಕೆರೆ ಗ್ರಾಮದ ರತ್ನಜ ಕಾಂಪ್ಲೆಕ್ಸ್‌ನ ಜರ್ಮಿನೋ ಪೀಢ್ಸ್ ಯೂನಿಟ್-೧ರಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ರತ್ನಜ (ಎಚ್.ಪ್ರಕಾಶ್) ತಿಳಿಸಿದರು.ಪಶುಗಳಿಗೆ ನೈಸರ್ಗಿಕ ಉತ್ತಮ, ಆರೋಗ್ಯಕ ಆಹಾರ ಒದಗಿಸುವ ಸಲುವಾಗಿ ಈ ಸಂಬಂಧ ಶಿಕ್ಷಣ ಪಡೆದು, ಗುಣಮಟ್ಟದ ಆಹಾರ ತಯಾರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಹಾರೋತ್ಪನ್ನಗಳನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬಿಡುಗಡೆ ಮಾಡಲಿದ್ದು, ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು, ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ವಿಶೇಷ ಅತಿಥಿಗಳಾಗಿ ಕೆಎಂಎಫ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್, ಪತ್ರಕರ್ತ ಜೋಗಿ, ಮಂಡ್ಯ ಮುಡಾ ಮಾಜಿ ಅಧ್ಯಕ್ಷರಾದ ವಿದ್ಯಾ ನಾಗೇಂದ್ರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಲಿಂಗಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಹಸುಗಳಿಗೆ ಪರಿಪೂರ್ಣ ಪೋಷಕಾಂಶಗಳನ್ನು ಒದಗಿಸಿ, ಉತ್ತಮ ಆರೋಗ್ಯ, ಅಕ ಇಳುವರಿ, ಗುಣಮಟ್ಟದ ಹಾಲು ನಿಯಮಿತ ಸಂತಾನೋತ್ಪತ್ತಿಗೆ ಸಹಾಯ ಮಾಡುವ ಪ್ರೋಟಿನ್ ಹಾಗೂ ಮಿನರಲ್ಸ್‌ಯುಕ್ತ ‘ಕ್ವಾಲಿಟಿ ಮ್ಯಾಕ್ಸ್’ ೪೫ ಕೆ.ಜಿ ಆಹಾರ ಚೀಲದ ಬೆಲೆ ೧,೨೫೦ ರು. ಹಸುಗಳಲ್ಲಿ ಜೀರ್ಣಶಕ್ತಿ ವೃದ್ಧಿಸುವ ಅಕ ಫೈಬರ್ ಮತ್ತು ಮೈಕ್ರೋ ಮಿನರಲ್ಸ್‌ವುಳ್ಳ ‘ಎಸ್‌ಎನ್‌ಎಫ್ ಮ್ಯಾಕ್ಸ್’ ೪೦ ಕೆ.ಜಿ ಚೀಲದ ಬೆಲೆ ೧,೧೦೦ ರು.. ದನಗಳ ಶಕ್ತಿ ಹೆಚ್ಚಿಸುವ, ಪುಷ್ಟಿದಾಯಕ ಪೋಷಕಾಂಶ ಒದಗಿಸಬಲ್ಲ ‘ಸ್ಟಾಮಿನ ಮ್ಯಾಕ್ಸ್’ ೪೫ ಕೆ.ಜಿ ಚೀಲದ ಬೆಲೆ ೧,೨೦೦ ರು., ಕುರಿ ಹಾಗೂ ಮೇಕೆಗಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆ ವೃದ್ಧಿಸುವ ‘ಗ್ರೋ ಮ್ಯಾಕ್ಸ್’ ೨೫ ಕೆ.ಜಿ ಚೀಲದ ಬೆಲೆ ೭೦೦ ರು.ಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಅಜಿತ್ ಕುಮಾರ್ ಗೋಷ್ಠಿಯಲ್ಲಿದ್ದರು.