ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಾಣಿಗಳನ್ನು ರಕ್ಷಿಸುವ ಭಿತ್ತಿಪತ್ರಗಳನ್ನು ಸಾಲಾಗಿ ಹಿಡಿದು ಪ್ರತಿಭಟನಾಕಾರರು ಪ್ರತಿಭಟಿಸಿದರು. ಬೀದಿ ನಾಯಿಗಳ ಮೇಲೆ ದೌರ್ಜನ್ಯಕ್ಕೆ ಕಾರಣವಾಗುವಂಥ ಕ್ರಮಗಳನ್ನು ಕೈಗೊಳ್ಳದಂತೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಆನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶಕ್ಕೆ ತಡೆ ನೀಡಬೇಕು. ಬೀದಿ ನಾಯಿಗಳಿಗೆ ಆಶ್ರಯ ತಾಣ ವ್ಯವಸ್ಥೆ ಮಾಡುವುದು ಅವೈಜ್ಞಾನಿಕ. ಅದು ಈ ಮೂಕ ಪ್ರಾಣಿಗಳಿಗೆ ಸೆಂಟ್ರಲ್ ಜೈಲಿನಂತಾಗಲಿದೆ. ಅದರ ಬದಲು ಲಸಿಕೆ ಮತ್ತು ಸಂತಾನ ಹರಣ ಕೇಂದ್ರಗಳನ್ನು ವೃದ್ಧಿಸಬೇಕು ಎಂದು ಆಗ್ರಹಿಸಿದರು.ಜ.7ರಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಪ್ರಾಣಿಪ್ರಿಯರ ಅಹವಾಲುಗಳನ್ನು ಆಲಿಸಬೇಕು ಎಂದೂ ಸುಮಾ ನಾಯಕ್ ಒತ್ತಾಯಿಸಿದರು.
ಪ್ರಾಣಿ ಪ್ರಿಯರು ಹಾಗೂ ಪ್ರಾಣಿ ರಕ್ಷಕರಾದ ರಜನಿ ಶೆಟ್ಟಿ, ಉಷಾ ಸುವರ್ಣ, ಸಾಕ್ಷಿ, ತೌಶಫ್ ವಿಜಯ ಕೆ. ರಾವ್ ಮತ್ತಿತರರು ಇದ್ದರು.----------
ಫೋಟೊ4ಡಾಗ್