ಶಿಡ್ಲಘಟ್ಟ ಗಾಂಧಿನಗರ ಡೇರಿ ಅಧ್ಯಕ್ಷರಾಗಿ ಅಂಜನಪ್ಪ

KannadaprabhaNewsNetwork |  
Published : Jun 26, 2026, 01:30 AM IST
ಸುದ್ದಿ ಚಿತ್ರ ೧ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಅವರ ಬೆಂಬಲಿಗರು ಹೂ ಹಾರ ಹಾಕಿ ಅಭಿನಂದಿಸಿರು | Kannada Prabha

ಸಾರಾಂಶ

ನಗರದ ಗಾಂಧಿನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ವಿ. ಅಂಜನಪ್ಪ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ:

ನಗರದ ಗಾಂಧಿನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ವಿ. ಅಂಜನಪ್ಪ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಅಂಜನಪ್ಪ ಹಾಗೂ ಮುನಿರೆಡ್ಡಿ ಎಲ್. ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ನೀಡಲಾಗಿದ್ದರೂ ಇಬ್ಬರೂ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆಯದ ಕಾರಣ, ನಿಯಮಾನುಸಾರ ಮತದಾನ ನಡೆಯಿತು.

ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಗುಪ್ತ ಮತದಾನದಲ್ಲಿ ಎಚ್.ವಿ.ಆಂಜನಪ್ಪ ಅವರಿಗೆ 9 ಮತ ಬಿದ್ದರೆ ಮುನಿರೆಡ್ಡಿ ಎಲ್ ರವರು ಕೇವಲ 3 ಮತಗಳನ್ನು ಪಡೆದಿದ್ದು, ಎಚ್.ವಿ.ಅಂಜನಪ್ಪ ಹೆಚ್ಚು ಮತ ಪಡೆದು ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡರೆಂದು ಚುನಾವಣಾಧಿಕಾರಿ ಎನ್‌ .ವನಿತ ತಿಳಿಸಿದರು.

ಉಪಾಧ್ಯಕ್ಷರ ಅವಿರೋಧ ಆಯ್ಕೆ:

ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದು ವೆಂಕಟೇಶ್ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎನ್.ವನಿತ ಘೋಷಿಸಿದರು. ಈ ವೇಳೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಅವರ ಬೆಂಬಲಿಗರು ಹೂ ಹಾರ ಹಾಕಿ ಅಭಿನಂದಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಬು, ರಾಜಣ್ಣ , ಮುನಿರೆಡ್ಡಿ , ಚಂದ್ರ, ಕ್ಯಾತಪ್ಪ, ವೆಂಕಟೇಶ್, ಗಂಗರೆಡ್ಡಿ ಎ, ವಿಜಯ್ ಕುಮಾರ್, ಆಂಜಿನಪ್ಪ , ಮಮತ , ಆಂಜಿನಪ್ಪ ರಾಮಚಂದ್ರಪ್ಪ, ಮುಖಂಡರಾದ ಶ್ರೀನಿವಾಸ್, ಮುರಳಿ, ದೇವರಾಜ್, ಮುನಿರಾಜ್, ವೆಂಕಟೇಶ್, ಮದನ್, ವರುಣ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.ಸುದ್ದಿ ಚಿತ್ರ ೧ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಅವರ ಬೆಂಬಲಿಗರು ಹೂ ಹಾರ ಹಾಕಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗರಪೇಟೆ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಿಲ್ಲಿಸಿ
ಹಿರೀಕಾಟಿ: ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಖಡಕ್‌ ಆದೇಶ, 7 ದಿನದ ಗಡುವು