ಭಟ್ಕಳ: ಇಲ್ಲಿನ ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಅಂಜುಮನ್ ಕೋಡ್‌ಫೆಸ್ಟ್ 2025 ಹ್ಯಾಕಥಾನ್, ನಾವೀನ್ಯತೆ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯದ ಅದ್ಭುತ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ತೀರ್ಪುಗಾರರಾಗಿ ನೀವಿಯಸ್ ಸೊಲ್ಯೂಷನ್ಸ್ ಸಂಸ್ಥಾಪಕ ಮೊಹ್ಸಿನ್ ಖಾನ್, ಎಮರ್ಟೆಕ್ಸ್ ಇನ್ಫಾರ್ಮೇಷನ್ ಟೆಕ್ನಾಲಜೀಸ್‌ನ ತಂತ್ರಜ್ಞಾನ ಮುಖ್ಯಸ್ಥ ಮುಬೀನ್ ಜುಕಾಕು, ವಿನ್‌ಟೀಮ್ ಗ್ಲೋಬಲ್ ಸಂಸ್ಥಾಪಕ ವಸೀಮ್ ಅಹ್ಮದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಜೆ.ಅನ್ವರ್ ಶಾಥಿಕ್ ಮತ್ತು ಪ್ರಾಧ್ಯಾಪಕ ಡಾ. ಡೇನಿಯಲ್ ಫ್ರಾನ್ಸಿಸ್ ಕಾರ್ಯನಿರ್ವಹಿಸಿದರು. ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಸ್ವಾಗತಿಸಿದರು. ಕಾರ್ಯದರ್ಶಿ ಮೊಹಿದ್ದೀನ್ ರುಕ್ನದ್ದೀನ್ ಕಾರ್ಯಕ್ರಮದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿ, ಸಂಘಟಕರ ಪ್ರಯತ್ನವನ್ನು ಶ್ಲಾಘಿಸಿದರು. ಸಂಯೋಜಕ ಫಾರ್ಖಲಿತ್ ರಿದಾ ಮಾನ್ವಿ ವಂದಿಸಿದರು. ಕೋಡ್‌ಫೆಸ್ಟ್ 2025 ಯುವ ತಂತ್ರಜ್ಞರಿಗೆ ಕೌಶಲ್ಯ ಪ್ರದರ್ಶನ, ಉದ್ಯಮ ತಜ್ಞರಿಂದ ಮಾರ್ಗದರ್ಶನ ಮತ್ತು ಸಹಕಾರದ ನಾವೀನ್ಯತೆಗೆ ಒಂದು ಅತ್ಯುತ್ತಮ ವೇದಿಕೆಯಾಗಿ ಗುರುತಿಸಲ್ಪಟ್ಟಿತು.ಶೀರ್ಷಿಕೆ ಪಾಲುದಾರರಾಗಿ ನಿವಿಯಸ್ ಸೊಲ್ಯೂಷನ್ಸ್, ಸಂಘಟನಾ ಪಾಲುದಾರರಾಗಿ ಡಿಜಿಸ್ಕ್ರಿಪ್ಟ್ ಟೆಕ್ನಾಲಜೀಸ್, ಸಹ ಪಾಲುದಾರರಾಗಿ ಮೊಹ್ತಿಶಮ್ ಬಿಲ್ಡರ್ಸ್, ಸ್ಪ್ರೌಟ್‌ಎಕ್ಸ್‌ಪಿ, ಐಟೆಕ್ಸ್ ಸೊಲ್ಯೂಷನ್ಸ್, ಎಮರ್ಟ್‌ಕ್ಸ್ ಟೆಕ್ನಾಲಜೀಸ್, ತಹೂರ ಮತ್ತು ವಿನ್‌ಟೀಮ್ ಗ್ಲೋಬಲ್ ಕಾರ್ಯಕ್ರಮಕ್ಕೆ ಬೆಂಬಲ ನೀಡಿದವು.
ಭಟ್ಕಳ ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಅಂಜುಮನ್ ಕೋಡ್‌ಫೆಸ್ಟ್ 2025 ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.