-ಬಸವಮಾರ್ಗ ಪ್ರತಿಷ್ಠಾನ, ಜಾಗತಿಕ ಲಿಂಗಾಯತ ಸಭೆಯಿಂದ ಬಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಹಾಪುರ
ಬಸವಣ್ಣನವರು ತಳ ಸಮುದಾಯದವರ ಬದುಕು ಗಟ್ಟಿ ಮಾಡಿಕೊಳ್ಳಲು ಅಡಿಪಾಯ ಹಾಕಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿ ಅಂತರ್ಜಾತಿ ವಿವಾಹ ಮಾಡುವ ಮೂಲಕ ಎಲ್ಲರೂ ಸರಿಸಮಾನರು ಎಂದು ತೋರಿಸಿಕೊಟ್ಟರು. ವೈದಿಕ ವ್ಯವಸ್ಥೆ ರೂಪಿಸಿದ್ದ ಎಲ್ಲ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಸಮಾನತೆಯ ಅನುಭವ ಮಂಟಪ ಕಟ್ಟಿದವರು ಬಸವಣ್ಣನವರು ಎಂದು ಕಲಬುರಗಿಯ ಬಸವ ತತ್ವ ಪ್ರಸಾರಕ ಸಿದ್ಧರಾಮ ಯಳವಂತಗಿ ಹೇಳಿದರು.ನಗರದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯಿಂದ ಸಿದ್ಧಾರೂಡ ಮತ್ತು ಶ್ರವಣ ಆನೇಗುಂದಿಯವರ ಸ್ಮರಣೆಯ ನಿಮಿತ್ತ ನಡೆದ ತಿಂಗಳ ಬಸವ ಬೆಳಕು 119ರ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರು, ಶರಣರ ಸಾಹಿತ್ಯದ ಓದು ಮಾತ್ರ ನಮ್ಮ ಅಧಃಪತನವನ್ನು ತಪ್ಪಿಸಬಲ್ಲವು. ಇಂದಿನ ಸಾಮಾಜಿಕರಣ, ಜಾಗತಿಕರಣದ ಸಂದರ್ಭದಲ್ಲಿ ಬಸವ ತತ್ವವೊಂದೆ ನಮ್ಮೆಲ್ಲರ ಆಶಾ ಕಿರಣ ಎಂದರು.
ಶೋಭಾ ಬಸವರಾಜ ಆನೇಗುಂದಿ, ಶರಣಮ್ಮ ಸಿದ್ಧಾರೂಢ ಆನೇಗುಂದಿ, ಬಸವ ತತ್ವಾಭಿಮಾನಿ ಅಯ್ಯಣ್ಣ ನಂದಿ ಮೊದಲಾದವರು ವೇದಿಕೆಯಲ್ಲಿದ್ದರು.
ಶಿವಯೋಗಪ್ಪ ಮುಡಬೂಳ, ಷಣ್ಮುಖ ಅಣಬಿ, ಆರ್. ಎಂ. ಹೊನ್ನಾರೆಡ್ಡಿ ವಕೀಲರು, ಶಂಭುಲಿಂಗ ದೇಸಾಯಿ, ತಿಪ್ಪಣ್ಣ ಜಮಾದಾರ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಲಕ್ಷ್ಮಣ ಲಾಳಸೇರಿ, ಕವಿತಾ ಗುಡಗುಂಟಿ, ಜ್ಯೋತಿ ವಾಗಾ, ಕವಿತಾ ಗುಡಗುಂಟಿ, ಪಂಪಣ್ಣಗೌಡ ಮಳಗ, ಮಲ್ಲು ಗುಡಿ, ಶಂಕ್ರಪ್ಪ ಪೋಸ್ಟ ಮಾಸ್ಟರ್, ಕಾಮಣ್ಣ, ಹಣಮಂತ ಕೊಂಗಂಡಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದು ಕೇರವಂಟಿಗಿ, ಭೀಮನಗೌಡ, ಬಸವರಾಜ ಹುಣಸಗಿ, ಭೀಮಣ್ಣ ಪಾಡಮುಖಿ, ರಾಜು ಕುಂಬಾರ, ಶಿವರುದ್ರ ಉಳ್ಳಿ, ಗುಂಡಪ್ಪ ಕೋರಿ, ಉಮೇಶ ಗೋಗಿ ಇದ್ದರು.
26ವೈಡಿಆರ್7: ಶಹಾಪುರ ನಗರದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ನಡೆದ ತಿಂಗಳ ಬಸವ ಬೆಳಕು 119 ರ ಕಾರ್ಯಕ್ರಮ ನಡೆಯಿತು.