ಕುಕನೂರು: ಮನುಷ್ಯ ಅನ್ನಕ್ಕಾಗಿ ಮನೆ ಮನೆಗೆ ಅಲೆದಾಡುತ್ತಿದ್ದ. ಭಿಕ್ಷಕರು ಹಳಸಿದ ಅನ್ನ ನೀಡಿಸಿಕೊಂಡು ಅದನ್ನೆ ಸೇವನೆ ಮಾಡುವ ಕಾಲ ಇತ್ತು. ಇಂತಹ ಮನಕಲುಕುವ ಭಿಕ್ಷಾಟನೆ ಕಾರ್ಯ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿದ್ದರಿಂದ ನಿರ್ಮೂಲನೆ ಆಯಿತು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ: ರೈತ ವರ್ಗದವರಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲವನ್ನು ರಾಜ್ಯ ಸರ್ಕಾರ ನೀಡುತ್ತದೆ.ಈ ಹಣವನ್ನು ನಬಾರ್ಡ ಬ್ಯಾಂಕಿನಿಂದ ಸಾಲ ಪಡೆದು ಅದಕ್ಕೆ ರಾಜ್ಯ ಸರ್ಕಾರ 6.5% ಪ್ರತಿಶತ ಬಡ್ಡಿ ಕಟ್ಟಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತದೆ ಎಂದರು.
ಮತ್ತೊಂದು ಕೌಶಲ್ಯ ಕೇಂದ್ರ ಮಂಜೂರು: ತಳಕಲ್ಲ ಗ್ರಾಮದಲ್ಲಿ ಈಗಾಗಲೇ ಒಂದು ಕೌಶಲ್ಯ ಕೇಂದ್ರ ಇದ್ದು, ಭಾನಾಪೂರದ ಗೊಂಬೆ ಫ್ಯಾಕ್ಟರಿ ಬಳಿ ಇನ್ನೊಂದು ಕೌಶಲ್ಯ ಕೇಂದ್ರ ಮಂಜೂರಾಗಿದೆ. ಅದಕ್ಕೆ ಕ್ಯಾಬಿನೆಟ್ ಅಪ್ರೋವಲ್ ಸಹ ಸಿಕ್ಕಿದ ಎಂದರು.2000 ಮಕ್ಕಳಿಗೆ ವಸತಿ ನಿಲಯ ಮಂಜೂರು: ತಳಕಲ್ಲಿನ ಇಂಜಿನಿಯರ್ ಕಾಲೇಜಿನಲ್ಲಿ 800 ವಿದ್ಯಾರ್ಥಿ, ತಳಬಾಳಿನ ಡಿಗ್ರಿ ಕಾಲೇಜಿಗೆ 450 ವಿದ್ಯಾರ್ಥಿ, ಯಲಬುರ್ಗಾದ ಪಿಜಿ ಸೆಂಟರಿಗೆ 450 ವಿದ್ಯಾರ್ಥಿಗಳ ಹಾಗೂ ಗುನ್ನಾಳ ಪಾಲಿಟೆಕ್ನಿಕ್ ಕಾಲೇಜಿಗೆ 200 ವಿದ್ಯಾರ್ಥಿಗಳ ಒಟ್ಟು ಎರಡು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಮಂಜೂರು ಮಾಡಿಸಿದ್ದೇನೆ ಎಂದರು.
ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಪಿಡಬ್ಲೂಡಿ ಎಇಇ ಮಲ್ಲಿಕಾರ್ಜುನ, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ರಾಜಶೇಖರ ಮಳಿಮಠ, ಬಿಇಒ ಅಶೋಕಗೌಡ, ಆಹಾರ ಇಲಾಖೆ ತಾಲೂಕಾಧಿಕಾರಿ ಮಂಜುನಾಥ ಮ್ಯಾಗಳಮಠ, ಇಂಜಿನಿಯರ್ ರಾಘವೇಂದ್ರ ಜೋಷಿ, ಯಲಬುರ್ಗಾ ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಕೆಎಂಎಫ್ ನಿರ್ದೇಶಕ ಹಂಪಯ್ಯಸ್ವಾಮಿ, ಕಂದಾಯ ನಿರೀಕ್ಷಕ ರಂಗನಾಥ, ಅಶೋಕ ತೋಟದ, ಹನುಮಂತಗೌಡ ಚಂಡೂರು, ಶಿವನಗೌಡ ದಾನರಡ್ಡಿ, ಗವಿಸಿದ್ದಪ್ಪ ಜಂತ್ಲಿ, ಸಂಗಮೇಶ ಗುತ್ತಿ, ಸಂತೋಷ ಬೆಣಕಲ್ಲ, ಮಲ್ಲು ಜಕ್ಕಲಿ, ವೀರನಗೌಡ ಡಂಬಳ, ತಿಮ್ಮಣ್ಣ ಚೌಡಿ ಇತರರಿದ್ದರು.