ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘದ ಕಾರ್ಯಕರ್ತರು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರಿನ ಅಜ್ಜಿಪುರ ಸರ್ಕಲ್‌ನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯೂ ಮಳವಳ್ಳಿಗೆ ಆಗಮಿಸಿದಾಗ ತಾಲೂಕು ಘಟಕದಿಂದ ಪ್ರತಿಭಟನಾಕಾರರನ್ನು ಸ್ವಾಗತಿಸಿ ಮಾತನಾಡಿದರು.
ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುವುದನ್ನು ಬಿಟ್ಟು ರೈತರ ಸಮಸ್ಯೆ ಬಗೆಹರಿಸಬೇಕು, ಚಾಮರಾಜನಗರ ಜಿಲ್ಲೆಯ ಗೋಪಿನಾಥ್ ಪಂಚಾಯ್ತಿ ವ್ಯಾಪ್ತಿಯ ಅರಣ್ಯದಲ್ಲಿ ವಾಸ ಮಾಡುವ ಹಳ್ಳಿಗಳಿಗೆ ಮೂಲ ಸೌಲಭ್ಯ ಹೊದಗಿಸಬೇಕೆಂದು ಆಗ್ರಹಿಸಿದರು.ಹನೂರು ತಾಲೂಕಿನ ಉಡುತೊರೆಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ 1.31 ಟಿಎಂಸಿ ನೀರೋದಗಿಸಲು 2020-21ರ ಸಾಲಿನಲ್ಲಿ ಡಿಆರ್‌ಪಿಗೆ ಅನುಮತಿ ದೊರಕಿದೆ. ಕಾಮಗಾರಿಗೆ ಅನುಮೋದನೆ ದೊರಕಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಹಣಕಾಸು ಒದಗಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಚಾಮರಾಜನಗರ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಅಂಜಾದ್ ಖಾನ್, ಉಪಾಧ್ಯಕ್ಷ ಪಳಿನಿಸ್ವಾಮಿ, ಕಾರ್ಯಾಧ್ಯಕ್ಷೆ ಪ್ರಭಾಮಣಿ, ಮುಖಂಡರಾದ ಕೃಷ್ಣಪ್ಪ, ನಟರಾಜು, ದೇವರಾಜು, ಬಸವರಾಜು, ಬೀರಪ್ಪ, ವೆಂಕಟಚಲ ರತ್ನವೇಲು ಸೇರಿದಂತೆ ಇತರರು ಇದ್ದರು.