ಕನ್ನಡಪ್ರಭವಾರ್ತೆ ಮೂಲ್ಕಿ
ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದ ಸಭಾ ವೇದಿಕೆಯಲ್ಲಿ ನಡೆದ ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯದ 27ನೇ ವಾರ್ಷಿಕ ಮಹಾಸಭೆ ಹಾಗೂ 25ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ, ಪ್ರತಿಭಾ ಪುರಸ್ಕಾರ ನಡೆಯಿತು. ಖ್ಯಾತ ಜ್ಯೋತಿಷಿ ಎಸ್. ಕೆ. ನಾಗೇಂದ್ರ, ಉದ್ಯಮಿ ವಿಶ್ವೇಶ್ವರ ಬದವಿದೆ, ಅಗರಿ ರಾಘವೇಂದ್ರರಾವ್, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಪಿ. ಪುರುಷೋತ್ತಮರಾವ್, ಕಾರ್ಯಾಧ್ಯಕ್ಷ ಎಂ ವಿ ಸುಬ್ರಮಣ್ಯ, ಕೋಶಾಧಿಕಾರಿ ಸದಾಶಿವ ಕಾರಂತ, ಕಾರ್ಯದರ್ಶಿ ಕಲಾವತಿ ಮತ್ತಿತರರು ಉಪಸ್ಥಿತರಿದ್ದರು. ಯಮುನಾ ರಾವ್ ನಿರೂಪಿಸಿದರು.