ಜೀವವಿಮಾ ಪ್ರತಿನಿಧಿಗಳು ಸವಲತ್ತಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ

KannadaprabhaNewsNetwork |  
Published : Jul 02, 2025, 12:19 AM ISTUpdated : Jul 02, 2025, 12:20 AM IST
62 | Kannada Prabha

ಸಾರಾಂಶ

ಪ್ರತಿನಿಧಿಗಳ ಗ್ರಾಚುಟಿ , ಗ್ರೂಪ್ ಇನ್ಸೂರೆನ್ಸ್ , ಪ್ರತಿನಿಧಿಗಳ ಕುಟುಂಬವರ್ಗದ ಮೆಡಿಕಲ್ ಇನ್ಸೂರೆನ್ಸ್ ಭೀಮಸುಗಮ್ ನಿಲುಗಡೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಜೀವವಿಮಾ ಪ್ರತಿನಿಧಿಗಳು ತಮ್ಮ ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಜೀವವಿಮಾ ಪ್ರತಿನಿಧಿಗಳ ಮೈಸೂರು ವಿಭಾಗೀಯ ಮಂಡಳಿ ಅಧ್ಯಕ್ಷ ಕೆಂಪೇಗೌಡ ಹೇಳಿದರು.

ಪಟ್ಟಣದ ಕೌಸಲ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಜೀವವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿನಿಧಿಗಳ ಗ್ರಾಚುಟಿ , ಗ್ರೂಪ್ ಇನ್ಸೂರೆನ್ಸ್ , ಪ್ರತಿನಿಧಿಗಳ ಕುಟುಂಬವರ್ಗದ ಮೆಡಿಕಲ್ ಇನ್ಸೂರೆನ್ಸ್ ಭೀಮಸುಗಮ್ ನಿಲುಗಡೆ ಮಾಡಲಾಗಿದೆ, ಹಿಂದೆ ಪಾಲಿಸಿಯ ಅವಧಿ ಮುಗಿಯುವವರೆಗೂ ಕಮಿಷನ್ ನೀಡಲಾಗುತ್ತಿತ್ತು, ಈಗ ಏಳು ವರ್ಷಕ್ಕೆ ಕಮಿಷನ್ ನಿಲ್ಲಿಸುವ ತೀರ್ಮಾನವನ್ನು ಆಡಳಿತ ಮಂಡಳಿ ಕೈಗೊಂಡಿದ್ದು, ಪ್ರತಿನಿಧಿಗಳ ಒಕ್ಕೂಟ ನಡೆಸಿದ ಹೋರಾಟದ ಫಲವಾಗಿ ರದ್ದುಗೊಂಡಿದೆ, ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಘಟನೆಗೆ ಮಾನ್ಯತೆ ಸಿಕ್ಕಿದೆ, ನಿಗಮದಿಂದ ಪ್ರತಿನಿಧಿಗಳಿಗೆ ಅನ್ಯಾಯವಾದಾಗಲೆಲ್ಲ ಸಂಘಟನೆ ಹೋರಾಟ ಮಾಡಿ ನ್ಯಾಯ ದೊರಕಿಸಿದೆ, ನಾವು ಪ್ರತಿನಿಧಿಗಳು ಹೋರಾಟದ ಜೊತೆಗೆ ಆರ್ಥಿಕವಾಗಿ ಸದೃಢರಾಗಬೇಕು, ಪ್ರತಿನಿಧಿಗಳು ಚಳಿ ಗಾಳಿಯನ್ನೆದೆ ನಿಗಮಕ್ಕೆ ವ್ಯವಹಾರ ತಂದು ಜೀವವಿಮಾ ನಿಗಮವನ್ನು ಸಧೃಡಗೊಳಿಸಿದ್ದೇವೆ, ಆದರೂ ಪ್ರತಿನಿಧಿಗಳ ಬೆಲೆ ಏರಿಕೆಯ ಈ ದಿನಗಳಲ್ಲಿ ಜೀವನ ಸಾಗಿಸಲು ಕಷ್ಟಪಡಬೇಕಿದೆ ಎಂದು ಹೇಳಿದರು.

ನಗರ ಜೀವವಿಮಾ ಘಟಕದ ಹಿರಿಯ ಶಾಖಾಧಿಕಾರಿ ಬಲರಾಮಸ್ವಾಮಿ, ಉಪ ಶಾಖಾಧಿಕಾರಿ ಕೃಷ್ಣ ಭಟ್, ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಜಿ.ಎನ್. ಮಹೇಶ್, ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಚಿನ್ನಪ್ಪ, ಆತ್ವಿಕ್, ಬಿ.ಆರ್. ಮಹೇಶ್, ಗೌರವಾಧ್ಯಕ್ಷ ಎಚ್.ಆರ್.ಶಿ ವಕುಮಾರ್, ಗುಂಡ್ಲುಪೇಟೆ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಜಿ. ಮಾಧು, ಶಶಿಕಲಾ, ರಂಗಸ್ವಾಮಿ, ಕೆ. ಇಂದಿರಾ, ಗುರುಸಿದ್ದಾಚಾರಿ, ಬಿ.ಆರ್. ಚಿಕ್ಕಣ್ಣ, ಶ್ರೀಧರ್ ರಾವ್, ವೆಂಕಟೇಶ್, ರಂಗಸ್ವಾಮಿ, ಮಹದೇವಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ