ಇಮ್ಯಾನ್‌ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ

KannadaprabhaNewsNetwork |  
Published : Nov 02, 2026, 04:00 AM IST
ಚಿತ್ರ.3:ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೆಲ್ ದೇವಾಲಯದಲ್ಲಿ  ವಾರ್ಷಿಕ ಬೆಳೆ ಹಬ್ಬ ಶೃದ್ಧಾ ಭಕ್ತಿ ಪ್ರಾರ್ಥನೆಯನ್ನು ಮಂಗಳೂರು ಕೃಷ್ಣಾಪುರದ, ಸಿಎಸ್‌ಐ ಕಾರುಣ್ಯ ದೇವಾಲಯದ  ಘನ.ಸ್ಟೀವನ್ ಸರ್ವೋತ್ತಮ್ ಹಾಗೂ  ಸುಂಟಿಕೊಪ್ಪ ಸಭಾಪಾಲಕರಾದ ಘನ.ಜೈಸನ್‌ಗೌಡರ್ ದೇವಾಲಯದ ಭಕ್ತಾಧಿಗಳೊಂದಿಗೆ. | Kannada Prabha

ಸಾರಾಂಶ

ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಶೃದ್ಧಾ ಭಕ್ತಿಗಳಿಂದ ಭಾನುವಾರದಂದು ನೆರವೇರಿತು.

ಸುಂಟಿಕೊಪ್ಪ: ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಶೃದ್ಧಾ ಭಕ್ತಿಗಳಿಂದ ಭಾನುವಾರದಂದು ನೆರವೇರಿತು.

ಭಾನುವಾರದಂದು ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಪುಷ್ಪಾಗಳಿಂದ ಇನ್ನಿತರ ಫಲ ವಸ್ತುಗಳಿಂದ ಸಿಂಗಾರಿಸಲಾಗಿತ್ತು. ಕಾರ್ಯಕ್ರಮಕ್ಕೆ ಹಾಗೂ ಸುಂಟಿಕೊಪ್ಪ ಸಭಾಪಾಲಕರಾದ ಘನ.ಜೈಸನ್‌ಗೌಡರ್, ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆ ಆರ್ಶಿವಚನ ನೀಡಿದರು. ಈ ಸಂದರ್ಭ ಮಂಗಳೂರು ಕೃಷ್ಣಾಪುರದ ಸಿಎಸ್‌ಐ ಕಾರುಣ್ಯ ದೇವಾಲಯದ ಸ್ಟೀವನ್ ಸರ್ವೋತ್ತಮ್ ಮಾತನಾಡಿ ನಮ್ಮ ದೇವಾಲಯಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದ್ದು, ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪಾನ ಮತ್ತು ಬೆಳೆದ ಫಲವಸ್ತುಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸರ್ಮಪಿಸುವುದು ಒಂದು ಪದ್ಧತಿ ಮತ್ತು ನಂಬಿಕೆಯ ನಡವಳಿಕೆಯಾಗಿದೆ. ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನಾರವರ್ತಿ ಕಾಣಿಕೆಯಾಗಿ ಸರ್ಮಪಿಸಿಕೊಳ್ಳುವದಾಗಿದೆ. ಇದರಿಂದ ನಮ್ಮ ಜೀವನದಲ್ಲಿ ಯೇಸುಸ್ವಾಮಿಯ ಕೃಪೆಮತ್ತು ಆರ್ಶಿವಾದಗಳಿಗೆ ಪಾತ್ರರಾಗಿ ಜೀವನವನ್ನು ಮುನ್ನಡೆಸುವುದಾಗಿದೆ ಎಂದು ಅವರು ಹೇಳಿದರು.

ಭಾನುವಾರದ ಬೆಳೆಹಬ್ಬವು ಪ್ರಾತಕಾಲದ ಪ್ರಾರ್ಥನೆ ಮತ್ತು ಪೂಜಾ ವಿಧಿ ವಿಧಾನಗಳನ್ನು ಸ್ಟೀವನ್‌ಸರ್ವೋತ್ತಮ್ ಮತ್ತು ಸುಂಟಿಕೊಪ್ಪ ಇಮ್ಯಾನುವೆಲ್ ದೇವಾಲಯದ ಸಭಾಪಾಲಕರಾದ ಘನ.ಜೈಸನ್‌ಗೌಡರ್ ನೇರವೇರಿಸಿದರು. ಆನಂತರ ಭಕ್ತಾಧಿಗಳು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ ವಿವಿಧ ಫಲ ವಸ್ತುಗಳ ಹರಾಜು ಪ್ರಕ್ರಿಯೆ ನಡೆದ ನಂತರ ಸಾಮೂಹಿಕ ಭೋಜನದೊಂದಿಗೆ ಸಂಜೆಯವರೆಗೂ ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿದ್ದಿತ್ತು.

ಕಾರ್ಯಕ್ರಮವು ಸುಂಟಿಕೊಪ್ಪ ಸಭಾಪಾಲಕರಾದ ಮಧುಕಿರಣ್ ಅವರ ಉಸ್ತುವಾರಿಯಲ್ಲಿ ದೇವಾಲಯದ ಭಕ್ತರ ಸಹಕಾರದೊಂದಿಗೆ ನೇರವೇರಿತು.ಕಾರ್ಯಕ್ರಮದಲ್ಲಿ ಸಭಾಪಾಲನ ಸಮಿತಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಭೆಯ ಭಾಂದವರು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಸನ್ಮಾನ
ಕನ್ನಡಾಂಬೆಯ ಭಾವಚಿತ್ರದ ಅದ್ಧೂರಿ ಮೆರವಣಿಗೆ