ಅಂಶಿ ಪ್ರಸನ್ನಕುಮಾರ್
ಹುಣಸೂರು ತಾಲೂಕು ಹನಗೋಡು ಹೋಬಳಿ ವಡ್ಡಂಬಾಳು ಗ್ರಾಮದ ದೇವರಾಜನಾಯಕ ಅವರ ಪತ್ನಿಯಾದ ವಿ.ಡಿ. ಕುಮಾರಿ ಅವರ ವಾರ್ಷಿಕ ಮೂರರಿಂದ ನಾಲ್ಕು ಲಕ್ಷ ರು.ವರೆಗೆ ನಿವ್ವಳ ಆದಾಯ ಗಳಿಸುತ್ತಿದ್ದಾರೆ.
ಇವರಿಗೆ ನಾಲ್ಕು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದರು. ಒಂದು ವಿಫಲವಾದರೆ ಮತ್ತೊಂದರಲ್ಲಿ ಉತ್ತಮವಾಗಿ ನೀರು ಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದಲೂ ಪತಿಯೊಂದಿಗೆ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.ಭತ್ತ, ಜೋಳ, ತೊಗರಿ, ರಾಗಿ, ಶುಂಠಿ, ಮೆಣಸಿನಕಾಯಿ ಬೆಳೆಯುತ್ತಾರೆ. ಇವರ ಜಮೀನಿಗೆ ಬಂದು ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ.
ಇವರು ಆಗಾಗ್ಗೆ ನಾಗನಹಳ್ಳಿಯಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಘಟಕಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಅಣಬೆ ಬೇಸಾಯ. ಸಿರಿಧಾನ್ಯ ನವಣೆಯಲ್ಲಿ ಚಕ್ಕಲಿ, ನಿಪ್ಪಟ್ಟು ಮಾಡುವ ಬಗ್ಗೆ ತರಬೇತಿ ಪಡೆದಿದ್ದಾರೆ. ಜೇನು ಸಾಕಾಣಿಕೆ ಬಗ್ಗೆ ಕೂಡ ತಿಳಿದುಕೊಂಡಿದ್ದಾರೆ. ಮಣ್ಣು ಪರೀಕ್ಷೆಯನ್ನು ಸಹ ಮಾಡಿಸಿ, ಮಣ್ಣಿನ ಫಲವತ್ತತೆ ಕಾಪಾಡುತ್ತಿದ್ದಾರೆ. ಇವರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸಿಲ್ಲ., ಕೊಟ್ಟಿಗೆ ಗೊಬ್ಬರವನ್ನೇ ಜಮೀನಿಗೆ ಹಾಕುತ್ತಾರೆ.
ಸಂಪರ್ಕ ವಿಳಾಸಃ
ವಡ್ಡಂಬಾಳು. ಹೊನ್ನೇನಹಳ್ಳಿ ಅಂಚೆ
ಹುಣಸೂರು ತಾಲೂಕು.
ಮೊ. 81977 93540ವ್ಯವಸಾಯ ಕಷ್ಟ ಏನಲ್ಲ. ಮನಸ್ಸಿಟ್ಟು ಮಾಡಬೇಕು ಅಷ್ಟೇ. ಖಂಡಿತ ಅನುಕೂಲವಾಗುತ್ತದೆ.