ಮೈಸೂರು ಅಥ್ಲೆಟಿಕ್ ಕ್ಲಬ್‌ನ ವಾರ್ಷಿಕ ಕ್ರೀಡಾ ಪ್ರಶಸ್ತಿ ಪ್ರಕಟ

KannadaprabhaNewsNetwork |  
Published : Jan 14, 2025, 01:01 AM IST
41 | Kannada Prabha

ಸಾರಾಂಶ

ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ 2022-24ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯ ಹಾಗೂ ಮೈಸೂರು ವಿವಿ ಪ್ರತಿನಿಧಿಸಿರುವ ಮೈಸೂರು ಜಿಲ್ಲಾ ಅಥ್ಲೀಟ್ ಗಳು ಮತ್ತು ಕ್ರೀಡಾ ಪ್ರೋತ್ಸಾಹಕ ಪತ್ರಕರ್ತರು, ಕ್ರೀಡಾ ಪತ್ರಕರ್ತರು ಹಾಗೂ ಕ್ರೀಡಾ ಛಾಯಾಗ್ರಾಹಕರನ್ನು ಜ.18 ರಂದು ಸಂಜೆ 5ಕ್ಕೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸನ್ಮಾನಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ 2022-24ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯ ಹಾಗೂ ಮೈಸೂರು ವಿವಿ ಪ್ರತಿನಿಧಿಸಿರುವ ಮೈಸೂರು ಜಿಲ್ಲಾ ಅಥ್ಲೀಟ್ ಗಳು ಮತ್ತು ಕ್ರೀಡಾ ಪ್ರೋತ್ಸಾಹಕ ಪತ್ರಕರ್ತರು, ಕ್ರೀಡಾ ಪತ್ರಕರ್ತರು ಹಾಗೂ ಕ್ರೀಡಾ ಛಾಯಾಗ್ರಾಹಕರನ್ನು ಜ.18 ರಂದು ಸಂಜೆ 5ಕ್ಕೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸನ್ಮಾನಿಸಲಾಗುತ್ತಿದೆ.

ಕಾರ್ಯಕ್ರಮವನ್ನು ಹಿರಿಯ ಕ್ರೀಡಾ ವರದಿಗಾರ ಗಿರೀಶ್ ದೊಡ್ಡಮನಿ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಅಗ್ನಿಶಾಮಕ ಹಾಗೂ ತುರ್ತುಸೇವೆಗಳು ನಿರ್ದೇಶಕ ಟಿ.ಎನ್.ಶಿವಶಂಕರ್ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಮಾಜಿ ಅಥ್ಲೆಟ್ ಕೆ.ಸಿ. ಪ್ರತಾಪ ಸಿಂಗ್ರಾಜ್ ಪುರೋಹಿತ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಕ್ಲಬ್‌ನ ಹಂಗಾಮಿ ಅಧ್ಯಕ್ಷ ಡಾ.ಸಿ.ಕೃಷ್ಣ ಅಧ್ಯಕ್ಷತೆ ವಹಿಸುವರು.

2022-23ನೇ ಸಾಲಿನ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಯನ್ನು ವಿ.ಅಂಬಿಕಾ, 2023-24ನೇ ಸಾಲಿನ ಪ್ರಶಸ್ತಿಗೆ ಕಶ್ವ ಅಗ್ರಹಾರ ಸತ್ಯಜಿತ್ ಮತ್ತು ಲಕ್ಷ್ಯ. 2022-23ನೇ ಸಾಲಿನ ಅತ್ಯುತ್ತಮ ಕ್ರೀಡಾ ಪ್ರೋತ್ಸಾಹಕ ಪತ್ರಕರ್ತ ಪ್ರಶಸ್ತಿಗೆ ‘ಕನ್ನಡಪ್ರಭ’ದ ಅಂಶಿ ಪ್ರಸನ್ನಕುಮಾರ್, 2022-23ನೇ ಸಾಲಿನ ಅತ್ಯುತ್ತಮ ಕ್ರೀಡಾ ವರದಿಗಾರಿಕೆ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಸಿ. ಮೋಹನ್ ಕುಮಾರ್, 2023-24ನೇ ಸಾಲಿಗೆ ‘ಆಂದೋಲನ’ದ ಎಚ್.ಎಸ್.ದಿನೇಶ್ ಕುಮಾರ್, 2022-23ನೇ ಸಾಲಿಗೆ ಅತ್ಯುತ್ತಮ ಕ್ರೀಡಾ ಛಾಯಾಗ್ರಾಹಕ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಹಂಪಾ ನಾಗರಾಜ, 2023-24ನೇ ಸಾಲಿನ ಪ್ರಶಸ್ತಿಗೆ

‘ವಿಜಯವಾಣಿ’ಯ ಕೆ.ಎಚ್.ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ.

ಜತೆಗೆ ಅಥ್ಲೀಟ್ ಗಳಾದ ಎಂ.ಎ.ವರ್ಷಾ, ಪಿ.ಚಿರಂತ್, ಎಸ್.ಕೆ.ರಿಯಾ, ರಾಹುಲ್ ನಾಯಕ್, ಎಂ.ಕೆ. ಚಿಕ್ಕಮ್ಮ, ಎಂ. ಸಂಜನಾರೆಡ್ಡಿ, ತೇಜಸ್ವಿನಿ, ವಿಶೇಷಚೇತನ ಕ್ರೀಡಾಪಟು ಹರ್ಷಿತಾಗೌಡ ಅವರಿಗೆ ಪ್ರಶಸ್ತಿ ಪಾರಿತೋಷಕ, 1 ಸಾವಿರ ರು. ನಗದು ಬಹುಮಾನ ನೀಡಿ ಸನ್ಮಾನಿಸುವುದಾಗಿ ಕ್ಲಬ್ ಕಾರ್ಯದರ್ಶಿ ಎಂ.ಯೋಗೇಂದ್ರ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ