ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

KannadaprabhaNewsNetwork |  
Published : Dec 03, 2024, 12:34 AM IST
ಕ್ಯಾಪ್ಷನ1ಕೆಡಿವಿಜಿ34 ದಾವಣಗೆರೆಯ ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ  ನೇತ್ರಾವತಿ ತಂಡದ ವಿದ್ಯಾರ್ಥಿಗಳು  | Kannada Prabha

ಸಾರಾಂಶ

ದಾವಣಗೆರೆಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ವಾರ್ಷಿಕ ಕ್ರೀಡಾಕೂಟ ಪಿಪಿಎಸ್ ಪ್ರೋತ್ಸಾಹ-2024 ಕಾರ್ಯಕ್ರಮ ನಡೆದವು. ಶನಿವಾರ ಮುಂಜಾನೆ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಗೋವಿಂದ ಸ್ವಾಮಿ ಕ್ರೀಡಾ ಜ್ಯೋತಿಯನ್ನು ಬೆಳಗಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

- ಪಿಪಿಎಸ್ ಪ್ರೋತ್ಸಾಹ-2024 ಕಾರ್ಯಕ್ರಮಕ್ಕೆ ಪ್ರೊ.ಗೋವಿಂದ ಸ್ವಾಮಿ ಚಾಲನೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ವಾರ್ಷಿಕ ಕ್ರೀಡಾಕೂಟ ಪಿಪಿಎಸ್ ಪ್ರೋತ್ಸಾಹ-2024 ಕಾರ್ಯಕ್ರಮ ನಡೆದವು.

ಶನಿವಾರ ಮುಂಜಾನೆ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಗೋವಿಂದ ಸ್ವಾಮಿ ಕ್ರೀಡಾ ಜ್ಯೋತಿಯನ್ನು ಬೆಳಗಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಬೇಕಾದರೆ ಅವರಿಗೆ ಕಠಿಣ ಪರಿಶ್ರಮ, ಸಂಕಲ್ಪ, ಬಲ ಮತ್ತು ಅರ್ಪಣಾ ಮನೋಭಾವಗಳು ತುಂಬಾ ಮುಖ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದರು.

ಡಿಎಆರ್ ಡಿವೈಎಸ್‌ಪಿ ಪಿ.ಬಿ.ಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ಸೋಲದೇ ಗೆದ್ದವರು ಯಾರೂ ಇಲ್ಲ. ಹಾಗಾಗಿ, ಸೋಲನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಳ್ಳಬೇಕು. ಭಾರತದ ಕ್ರೀಡಾಪಟುಗಳಾದ ಪಿ.ಟಿ.ಉಷಾ ಮತ್ತು ಸಚಿನ್ ತೆಂಡೂಲ್ಕರ್ ಮೂಲಕ ದೇಶವನ್ನು ಗುರುತಿಸುವಂತಾಗಿದೆ. ಅದೇ ರೀತಿ ನಮ್ಮ ಶಾಲಾ ಮಕ್ಕಳು ಕೂಡ ದೇಶದ ಸರ್ವಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ನಿಲ್ಲಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ತಾಳ್ಮೆ, ಛಲ, ಪರಿಶ್ರಮ ತುಂಬಾ ಮುಖ್ಯ. ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗಳು ಮತ್ತು ಆಟಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರ್ಮಾಣ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಪೋಷಕರು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಈ ಕ್ರೀಡಾಕೂಟಗಳು ವಿದ್ಯಾರ್ಥಿಗಳು ಶಾಲಾ ಹಂತದಿಂದ ಅಂತರ ರಾಷ್ಟ್ರೀಯಮಟ್ಟಕ್ಕೆ ಹೋಗಲು ಸಹಾಯ ಮಾಡುತ್ತದೆ ಎಂದರು.

ಈ ಸಂದರ್ಭ ಶಾಲೆ ಪ್ರಾಚಾರ್ಯ ಯತೀಶ ಆಚಾರ್, ದೈಹಿಕ ಶಿಕ್ಷಕ ಹಾಲೇಶ, ಕಾವೇರಿ, ನೇತ್ರಾವತಿ, ಶರಾವತಿ, ಕೃಷ್ಣ ಹೌಸ್‌ನ ಮುಖ್ಯಸ್ಥರಾದ ಕೌಸರ್ ಬಾನು, ದೀಪಾ, ಶಿಲ್ಪ, ಸುಗಾರ್ ಶಾಲೆಯ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲೆಯ ನೇತ್ರಾವತಿ ತಂಡದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಪ್ರಥಮ ಬಹುಮಾನವನ್ನು ಪಡೆದು ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದರು. ಕಾವೇರಿ ತಂಡದ ಮಕ್ಕಳು ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.

- - - -1ಕೆಡಿವಿಜಿ34:

ದಾವಣಗೆರೆಯ ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ನೇತ್ರಾವತಿ ತಂಡದ ವಿದ್ಯಾರ್ಥಿಗಳು.

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ