ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹಬ್ಬದ ಸಲುವಾಗಿ ಶುಚಿರ್ಭೂತರಾಗಿ ಸಮುದಾಯದ ಮುಖಂಡರೊಂದಿಗೆ ಮಹಿಳೆಯರು ಗಂಗೇನಹಳ್ಳಿ ಕೆರೆಯ ತಟದ ತೋಪಿಗೆ ತೆರಳಿದರು.
ಶ್ರೀವೀರಭದ್ರೇಶ್ವರ ಸ್ವಾಮಿ, ಶ್ರೀಲಕ್ಷ್ಮೀದೇವಿ ಹಾಗೂ ಸ್ವಾಮಿಯ ಭಂಟರ ಗದ್ದುಗೆ ನಿರ್ಮಿಸಿದರು. ಸೇವಂತಿಗೆ ಮತ್ತಿತರ ಪುಷ್ಪಗಳಿಂದ ಶೃಂಗರಿಸಿದರು. ಕುಂಕುಮ, ಅರಿಶಿನದಿಂದ ಗದ್ದುಗೆಯನ್ನು ವರ್ಣಮಯಗೊಳಿಸಿದರು. ಧೂಪದಾರತಿ ಬೆಳಗಿದರು. ಬೆಲ್ಲದನ್ನ, ಹಣ್ಣು, ಕಾಯಿ, ರಸಾಯನದ ನೈವೇದ್ಯವನ್ನು ದೇವರಿಗೆ ಸಮರ್ಪಿಸಿದರು. ಕುಟುಂಬಕ್ಕೊಂದರಂತೆ ವಿಶೇಷವಾಗಿ ದೇವರಿಗೆ ಎಡೆ ಇಟ್ಟರು.ನಂತರ ಶ್ರೀವೀರಭದ್ರಸ್ವಾಮಿಯ ಭಂಟರಿಗೆಕುರಿ, ಕೋಳಿ ಬಲಿ ನೀಡಿದರು. ಮಹಿಳೆಯರು ಹೊಸ ಉಡುಗೆ ತೊಟ್ಟು ಅಡುಗೆ ಒಲೆ ನಿರ್ಮಿಸಿಕೊಂಡು ಅಗ್ನಿದೇವನಿಗೆ ನಮಿಸಿದರು. ಹೊಸ ಪಾತ್ರೆಗಳಲ್ಲಿ ಶ್ರದ್ಧಾ-ಭಕ್ತಿಯಿಂದ ದೇವರಿಗೆ, ಭಂಟರಿಗೆ ನೈವೇದ್ಯ ತಯಾರಿಸಿದರು. ಬಂದ ಭಕ್ತಾದಿಗಳಿಗೆ ಪ್ರಸಾದ ನೈವೇದ್ಯ ನೀಡಿದರು.
ದೂರದಿಂದ ನೆಂಟರಿಷ್ಟರು ಆಗಮಿಸಿ ಸಮುದಾಯದವರ ಭೋಜನ ಆತಿಥ್ಯವನ್ನು ಸ್ವೀಕಾರ ಮಾಡಿದರು. ಸಮಾಜದ ಮುಖಂಡರಾದ ಕೆ.ಜಿ.ಪುಟ್ಟರಾಜು, ಕೆ.ಎನ್. ಚಂದ್ರಶೇಖರಯ್ಯ, ನಾಗಣ್ಣ, ಜಯಪಾಲ್, ಕೆ.ಜಿ.ಪಾಪಣ್ಣ, ಇಂದ್ರೇಶ್, ಅಣ್ಣಯ್ಯ, ಕೆ.ಜಿ.ತಮ್ಮಣ್ಣ, ರೈಲ್ವೆರವಿ, ಬೋರೆಮಂಜು, ದಿನೇಶ್, ಸುರೇಶ್ ಭಾಗವಹಿಸಿದ್ದರು.ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧನೆ ಮಾಡಬೇಕು: ದರ್ಶನ್ ಪುಟ್ಟಣ್ಣಯ್ಯ
ಕನ್ನಡಪ್ರಭ ವಾರ್ತೆ ಪಾಂಡವಪುರವಿದ್ಯಾರ್ಥಿಗಳು ಇಂದಿನ ಆಧುನಿಕ ತಂತ್ರಜ್ಞಾನದ ಉಪಯೋಗ ಪಡೆದುಕೊಂಡು ಜೀವನದಲ್ಲಿ ಗುರಿ ಸಾಧನೆ ಮಾಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಮಾನವಿಕ ವಿಭಾಗಗಳ ವತಿಯಿಂದ ಉದ್ಯಮಶೀಲತೆ ಮತ್ತು ಕೌಶಲ್ಯ ನಿರ್ವಹಣೆ: ಉದಯೋನ್ಮುಖ ತಂತ್ರಜ್ಞಾನ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿ, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಡಾ.ಪಿ.ಆಶಾ ಉದ್ಯೋಗಾವಕಾಶಗಳು ಮತ್ತು ಜೀವನ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಬನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎನ್.ಕೆ.ಭಾಗ್ಯ ಉದ್ಯಮ ಶೀಲತೆ: ಯಶಸ್ವಿ ವೃತ್ತಿಯ ಪ್ರಮುಖ ಕೀಲಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಉದ್ಯಮ ಶೀಲತೆ ಬಗ್ಗೆ ಸಾಕಷ್ಟು ಉದಾಹರಣೆಯೊಂದಿಗೆ ಅವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ಮಧುಸೂದನ್, ಸಹ ಪ್ರಾಧ್ಯಾಪಕರಾದ ಡಾ.ಎಂ.ಬಿ.ಪ್ರಮೀಳಾ, ಪ್ರೊ.ರಶ್ಮಿ, ಡಾ.ಎಂ.ಸಿ.ರಮೇಶ್, ಪ್ರೊ.ಬೀಬೀ ಅಮೀನಾ, ಎಸ್.ಚೈತ್ರಾ, ಡಾ.ಎಚ್.ಡಿ.ಕವಿತಾ, ಡಾ.ಟಿ.ಆರ್.ತ್ರಿಣೇಶ್, ನೇತ್ರಾಶ್ರೀ, ಎಲ್.ಎಸ್.ಎನ್.ಕುಮಾರ, ಡಾ.ಶಂಕರ್, ಎಸ್.ಎಲ್.ಉದಯಕುಮಾರ್, ವಿ.ಆಶಾರಾಣಿ, ಸೈಯದ್ ತಾಜುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.