ಭಕ್ತಿಯ ಶ್ರಾವಣ ಮಾಸದ ಆರಂಭದಲ್ಲೇ ಧಾರ್ಮಿಕ ವಲಯ ತಲೆತಗ್ಗಿಸುವಂತಹ ಕೆಲಸವೊಂದು ಜಿಲ್ಲೆಯ ಮಾಶಾಳದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮೀಜಿ ಅವರ ಮಠದಲ್ಲಿ ನಡೆದಿದೆ.ಮರುಳಾರಾಧ್ಯ ಸ್ವಾಮೀಜಿ ತಾವೇ ಪಾನಮತ್ತರಾಗಿ ಸಿನಿಮಾ ಗೀತೆ ಹಾಡುತ್ತ ಮೋಜು, ಮಸ್ತಿ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
-ಮಠದಲ್ಲಿಯೇ ಮದ್ಯದ ಬಾಟಲಿ ಇಟ್ಟು ''''''''''''''''ಯಾರಿವಳು ಯಾರಿವಳು'''''''''''''''' ಸಿನಿಮಾ ಹಾಡು ಹಾಡಿದ ಸ್ವಾಮೀಜಿ ವಿಡಿಯೋ ವೈರಲ್!
-ಪಾನ ಮತ್ತ ಮಶಾಳ ಸ್ವಾಮೀಜಿಯಿಂದ ವಿವಾದಗಳ ಮೇಲೆ ವಿದಾದಗಳ ಸರಣಿ
--
ಕನ್ನಡಪ್ರಭ ವಾರ್ತೆ ಕಲಬುರಗಿ, ಕರಜಗಿ
ಭಕ್ತಿಯ ಶ್ರಾವಣ ಮಾಸದ ಆರಂಭದಲ್ಲೇ ಧಾರ್ಮಿಕ ವಲಯ ತಲೆತಗ್ಗಿಸುವಂತಹ ಕೆಲಸವೊಂದು ಜಿಲ್ಲೆಯ ಮಾಶಾಳದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮೀಜಿ ಅವರ ಮಠದಲ್ಲಿ ನಡೆದಿದೆ.ಮರುಳಾರಾಧ್ಯ ಸ್ವಾಮೀಜಿ ತಾವೇ ಪಾನಮತ್ತರಾಗಿ ಸಿನಿಮಾ ಗೀತೆ ಹಾಡುತ್ತ ಮೋಜು, ಮಸ್ತಿ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮರುಳಾರಾಧ್ಯ ಸ್ವಾಮೀಜಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲೇ ಮಠದ ಒಳಗೆ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸ್ವಾಮೀಜಿಯ ಈ ಬಿಂದಾಸ್ ಲೈಫ್‌ಸ್ಟೈಲ್ ವಿಡಿಯೋ ಹೊರಬಂದಿರುವುದು ಭಕ್ತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಮರುಳಾರಾಧ್ಯ ಸ್ವಾಮೀಜಿ ಅವರು ಕೆಲವು ದಿನಗಳ "ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ " ಎಂದು ಭಾಷಣ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದರು.
ಸಮಾಜಕ್ಕೆ ಧರ್ಮ ಮತ್ತು ಸಂಸ್ಕಾರದ ಪಾಠ ಮಾಡಬೇಕಾದ ಹಾಗೂ ಮಕ್ಕಳ ಕೈಗೆ ಮಾರಕಾಸ್ತ್ರ ನೀಡಲು ಪ್ರಚೋದಿಸಿದರು. ಅಲ್ಲದೇ ಅನ್ಯ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿದ್ದು ಸೇರಿದಂತೆ ಈ ಸ್ವಾಮೀಜಿ ವಿರುದ್ಧ ಈಗಾಗಲೇ ಎರಡ್ಮೂರು ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ಈಗ ಸ್ವಾಮೀಜಿಯ ಅಸಲಿ ಮುಖವಾಡ ಈಗ ಅವರದ್ದೇ ಮಠದಲ್ಲಿ ಬಯಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
....ಬಾಕ್ಸ್.....
ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಮರುಳಾರಾಧ್ಯ ಸ್ವಾಮೀಜಿ ಅವರು ಕೈಯಲ್ಲಿ ಮೈಕ್ ಹಿಡಿದು, ಪಕ್ಕದಲ್ಲೇ ಮದ್ಯದ ಬಾಟಲಿ ಇಟ್ಟುಕೊಂಡು ಅತ್ಯಂತ ಗತ್ತಿನಿಂದ ''''''''ರಾಮಾಚಾರಿ'''''''' ಚಿತ್ರದ "ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು... ಪ್ರೇಮಗೀತೆ ಹಾಡುತ್ತಾ ಮೋಜು ಮಸ್ತಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿದೆ. ಮಠದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಪೀಠಾಧಿಪತಿಯೇ ಈ ರೀತಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
--
....ಕೋಟ್....
ಪೂಜ್ಯ ಭಾವನೆಯಿಂದ ನೋಡುವ ಮಠದಲ್ಲೇ ಸ್ವಾಮೀಜಿ ಈ ರೀತಿ ಮದ್ಯದ ಬಾಟಲಿ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಬೇಕಾದರೆ ಮಠ ಬಿಟ್ಟು ಮೊದಲು ಹೊರಗೆ ಹೋಗಲಿ, ಅವರ ಮನೆಗೆ ಮರಳಲಿ. ಇಂತಹ ಸ್ವಾಮೀಜಿಗಳಿಂದ ಮಠ ಮಂದಿರಗಳ ಮೇಲೆ ಭಕ್ತಿ ಭಾವದಿಂದ ಕಾಣುವ ನಮ್ಮಂತಹ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಬರುತ್ತಿದೆ. ಈ ಕೂಡಲೇ ಈ ಸ್ವಾಮೀಜಿಯನ್ನು ಮಠದಿಂದ ತೆಗೆದು ಹಾಕಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.