ಶರಣಬಸವ ವಿಶ್ವವಿದ್ಯಾಲಯದಿಂದ ಮತ್ತೊಂದು ಮೈಲುಗಲ್ಲು

KannadaprabhaNewsNetwork |  
Published : Jul 14, 2024, 01:35 AM IST
ಶರಣಬಸವ ವಿಶ್ವವಿದ್ಯಾಲಯ | Kannada Prabha

ಸಾರಾಂಶ

ಆನ್‍ಲೈನ್ ಮೋಡ್‍ನಲ್ಲಿ 6ಜಿ ಕಮ್ಯುನಿಕೇಷನ್ಸ್ ನೆಟ್‍ವಕಿರ್ಂಗ್ ಮತ್ತು ಸಿಗ್ನಲ್ ಪ್ರೊಸೆಸಿಂಗ್-2024 (SGCNSP-2024) ಕುರಿತು 2ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯವು ತನ್ನ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿದೆ, ಇದರಲ್ಲಿ ವಿವಿಧ ದೇಶಗಳ ತಜ್ಞರು ತಮ್ಮ ಕ್ಷೇತ್ರದಲ್ಲಿ ಉದಯೋನ್ಮುಖ ತಂತ್ರಜ್ಞಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಆನ್‍ಲೈನ್ ಮೋಡ್‍ನಲ್ಲಿ 6ಜಿ ಕಮ್ಯುನಿಕೇಷನ್ಸ್ ನೆಟ್‍ವಕಿರ್ಂಗ್ ಮತ್ತು ಸಿಗ್ನಲ್ ಪ್ರೊಸೆಸಿಂಗ್-2024 (SGCNSP-2024) ಕುರಿತು 2ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯವು ತನ್ನ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿದೆ, ಇದರಲ್ಲಿ ವಿವಿಧ ದೇಶಗಳ ತಜ್ಞರು ತಮ್ಮ ಕ್ಷೇತ್ರದಲ್ಲಿ ಉದಯೋನ್ಮುಖ ತಂತ್ರಜ್ಞಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮೊದಲ SGCMSP-2023 ಅನ್ನು ಸಿಂಗಾಪುರದ ಪ್ರಸಿದ್ಧ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ (NTU) ಆಯೋಜಿಸಿತ್ತು ಮತ್ತು ಉತ್ತರ ಕರ್ನಾಟಕದಿಂದ ವಿಶ್ವವಿದ್ಯಾಲಯವು ಮೊದಲ ಬಾರಿಗೆ ನಡೆಸುತ್ತಿರುವ ಈ ಸಮ್ಮೇಳನವನ್ನು ವಿವಿಧ ದೇಶಗಳ ಖ್ಯಾತ ತಜ್ಞರ ಪ್ರತಿಷ್ಠಿತ ಸಭೆ ಎಂದು ಪರಿಗಣಿಸಲಾಗಿದೆ. ಸಮ್ಮೇಳನಗಳು ಕಂಪ್ಯೂಟಿಂಗ್, ಸಂವಹನ ಮತ್ತು ಭದ್ರತಾ ಅಂಶಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಶೋಧಕರು ಮತ್ತು ಅಭ್ಯಾಸಕಾರರನ್ನು ಒಟ್ಟುಗೂಡಿಸುತ್ತದೆ ಹಾಗೂ ಈ ಅತ್ಯಂತ ಸವಾಲಿನ ಸಂಶೋಧನಾ ಕ್ಷೇತ್ರದಲ್ಲಿ ಉದಯೋನ್ಮುಖ ಆಲೋಚನೆಗಳು ಮತ್ತು ಪ್ರವೃತ್ತಿಗಳನ್ನು ಪ್ರಸ್ತುತಪಡಿಸಲು ಮತ್ತು ಚರ್ಚಿಸಲು ವೇದಿಕೆಯನ್ನು ಒದಗಿಸುತ್ತದೆ.

ಅಮೇರಿಕದ ಡಿಯರ್‍ಹಾರ್ನ್‍ನ ಮಿಚಿಗನ್ ವಿಶ್ವವಿದ್ಯಾಲಯದ ಪ್ರೊಫೆಸರ್ ವೀಡಾಂಗ್ ಜಿಯಾಂಗ್, ಚೀನಾದ ನಾನ್‍ಜಿಂಗ್ ಮತ್ತು ದೂರಸಂಪರ್ಕ ವಿಶ್ವವಿದ್ಯಾಲಯದ ಪ್ರೊ. ಗುಆನ್ ಗುಯಿಸ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಪ್ರೊ. ಉದಯ್ ಪಾರಂಪಳ್ಳಿ ಮತ್ತು ಸೈಪ್ರಸ್ ವಿಶ್ವವಿದ್ಯಾಲಯದ ಪ್ರೊ. ಲೋಅನಿಸ್ ಕ್ರಿಕಿಡಿಸ್ ಸೇರಿದಂತೆ ಮೈಕ್ರೋಸಾಫ್ಟ್‍ನ ಪ್ರಿನ್ಸಿಪಾಲ್ ಫರ್ಮ್‍ವೇರ್ ಇಂಜಿನಿಯರ್ ಡಾ. ನಾಗಭೂಷಣ ರೆಡ್ಡಿ, ಬೆಂಗಳೂರಿನ ಐಐಎಸ್‍ಸಿಯ ಡಾ. ಸುಧನ್ ಮಾಝಿ, ಐಐಟಿ ಜಮ್ಮುವಿನ ಡಾ. ಅಜಯ್ ಸಿಂಗ್, ಐಐಟಿ ತಿರುಪತಿಯ ಡಾ. ಚಲವಾದಿ ವಿಷ್ಣು ಸೇರಿದಂತೆ ಇತರ ಉನ್ನತ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆಗಳ ಶಿಕ್ಷಣ ತಜ್ಞರು ಸಮ್ಮೇಳನದಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡಿದರು. ಸಂವಹನ ನೆಟ್‍ವಕಿರ್ಂಗ್ ಮತ್ತು ಸಿಗ್ನಲ್ ಪ್ರೊಸೆಸಿಂಗ್‍ನ ಉದಯೋನ್ಮುಖ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಯ ಮೇಲೆ ಹೊಸ ಬೆಳಕು ಚೆಲ್ಲಿದರು.

ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುವಲ್ಲಿ ಪ್ರಮುಖ ಶಕ್ತಿಯಾದ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರ ಪ್ರಕಾರ, ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಆಯ್ದ ಪ್ರಬಂಧಗಳನ್ನು ಪ್ರತಿಷ್ಠಿತ ಜರ್ನಲ್ ಸ್ಪ್ರಿಂಗರ್ ನೇಚರ್ ‘ಲೆಕ್ಚರ್ ನೋಟ್ಸ್ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್’ನಲ್ಲಿ ಪ್ರಕಟಿಸಲಾಗುವುದು. ಸ್ಪ್ರಿಂಗರ್ ಈ ಸಮ್ಮೇಳನದ ಪ್ರಕಾಶನ ಪಾಲುದಾರವಾಗಿದೆ. SGCNSP-24ನಲ್ಲಿ ಸುಮಾರು 187 ಕ್ಕೂ ಹೆಚ್ಚು ವಿದ್ವತ್ಪೂರ್ಣ ಪೇಪರ್‍ಗಳನ್ನು ಆಕರ್ಷಿಸಿದೆ ಮತ್ತು ಈ ವಿದ್ವತ್ಪೂರ್ಣ ಪ್ರಸ್ತುತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ತಜ್ಞರ ಸಮಿತಿಯು 55 ಉತ್ತಮ ಗುಣಮಟ್ಟದ ವಿದ್ವತ್ಪೂರ್ಣ ಸಲ್ಲಿಕೆಯನ್ನು ಪ್ರಮಾಣಿತ ವಿಮರ್ಶೆ ಪ್ರಕ್ರಿಯೆಯ ನಂತರ, ಸಮ್ಮೇಳನದ ಪ್ರಕ್ರಿಯೆಗಳಲ್ಲಿ ಸೇರ್ಪಡೆಗಾಗಿ ಕಠಿಣ ಡಬಲ್-ಬ್ಲೈಂಡ್ ವಿಮರ್ಶೆಯನ್ನು ಅನುಸರಿಸಿ ಆಯ್ಕೆ ಮಾಡಿದೆ ಎಂದು ಡಾ. ಮಾಕಾ ಹೇಳಿದರು.

ಆಯ್ದ ಪೇಪರ್‌ಗಳನ್ನು ನಿರ್ದಿಷ್ಟ ಟ್ರ್ಯಾಕ್‍ಗಳಾಗಿ ವರ್ಗೀಕರಿಸಲಾಗಿದೆ ಮತ್ತು ಅವುಗಳನ್ನು ಏಳು ಸಮಾನಾಂತರ ಅವಧಿಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಪ್ರತಿ ಟ್ರ್ಯಾಕ್‍ನಲ್ಲಿ ಉತ್ತಮ ಪ್ರಸ್ತುತಿಯನ್ನು ಪ್ರಮಾಣಪತ್ರದ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲಾ ಏಳು ಸೆಷನ್‍ಗಳಲ್ಲಿ ಪ್ರಸ್ತುತಿಯನ್ನು ನಿರ್ಣಯಿಸಲು ಮತ್ತು ವಿದ್ವಾಂಸರಿಗೆ ಫಲಪ್ರದ ಸಲಹೆಗಳನ್ನು ನೀಡಲು ವಿವಿಧ ವಿಶ್ವವಿದ್ಯಾಲಯಗಳ ಡೊಮೇನ್ ತಜ್ಞರು ಮತ್ತು ಐಟಿ ಉದ್ಯಮಗಳ ತಜ್ಞರನ್ನು ನ್ಯಾಯಾಧೀಶರನ್ನಾಗಿ ಮಾಡಲಾಗಿದೆ. ಎಲ್ಲಾ ಆಯ್ದ 55 ಪೇಪರ್‌ಗಳನ್ನು ಸ್ಪ್ರಿಂಗರ್ ತನ್ನ ಜರ್ನಲ್‍ನಲ್ಲಿ ಪ್ರಕಟಿಸುತ್ತದೆ ಎಂದರು.

ಡಾ. ಮಾಕಾ ಸಮ್ಮೇಳನದ ಪ್ರಾಮುಖ್ಯತೆಯ ಕುರಿತು ಮಾತನಾಡಿದರು ಮತ್ತು ವಿದ್ಯಾರ್ಥಿಗಳು ಹಾಗೂ ಆಯಾ ವಿಭಾಗದ ಪ್ರಾಧ್ಯಾಪಕರಿಗೆ ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳ ಬಗ್ಗೆ ತಮ್ಮ ಜ್ಞಾನವನ್ನು ಉತ್ಕøಷ್ಟಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ