ಬಬಲೇಶ್ವರ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ

KannadaprabhaNewsNetwork |  
Published : Jul 30, 2026, 03:00 AM IST
ಬಬಲೇಶ್ವರಕ್ಕೆ ಮೂಲಭೂತ ಸೌಕರ್ಯಗಳು: ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಬಲೇಶ್ವರ ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಬಬಲೇಶ್ವರ ಪಟ್ಟಣದಲ್ಲಿ‌ ₹2 ಕೋಟಿ ವೆಚ್ಚದ ತಾಲೂಕು ಕ್ರೀಡಾಂಗಣ, ₹ 3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆ, ₹ 5.75 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಬಲೇಶ್ವರ ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಬಲೇಶ್ವರ ಪಟ್ಟಣದಲ್ಲಿ‌ ₹2 ಕೋಟಿ ವೆಚ್ಚದ ತಾಲೂಕು ಕ್ರೀಡಾಂಗಣ, ₹ 3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆ, ₹ 5.75 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬಬಲೇಶ್ವರದ ಅಭಿವೃದ್ಧಿಗೆ ಮತ್ತೊಂದು ಐತಿಹಾಸಿಕ ಹೆಜ್ಜೆ ಇದಾಗಿದೆ. ಯುವ ಪ್ರತಿಭೆಗಳ ಕನಸುಗಳಿಗೆ ವೇದಿಕೆಯಾಗುವ ಕ್ರೀಡಾಂಗಣ, ಜನರ ಜೀವ-ಆಸ್ತಿಯ ರಕ್ಷಣೆಗೆ ಇನ್ನಷ್ಟು ಶಕ್ತಿ ತುಂಬುವ ಅಗ್ನಿಶಾಮಕ ಠಾಣೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಸುಸಜ್ಜಿತ ಆರೋಗ್ಯ ಕೇಂದ್ರಕ್ಕೆ ಭೂಮಿಪೂಜೆ ಮಾಡಲಾಗಿದೆ. ಇವು ಕೇವಲ ಕಟ್ಟಡಗಳಲ್ಲ, ಜನರ ಬದುಕಿನ ಗುಣಮಟ್ಟವನ್ನು ಬದಲಾಯಿಸುವ ಅಭಿವೃದ್ಧಿಯ ಬುನಾದಿಗಳಾಗಿವೆ. ಜನರ ಆಶೀರ್ವಾದವೇ ನಮ್ಮ ಶಕ್ತಿ, ಅಭಿವೃದ್ಧಿಯೇ ನಮ್ಮ ಆದ್ಯತೆ. ಬಬಲೇಶ್ವರದ ಪ್ರಗತಿಯ ಪಯಣ ನಿರಂತರವಾಗಿರಲಿದೆ ಎಂದು ಹೇಳಿದರು.ಹಿಂದೆ ಬಬಲೇಶ್ವರ ತಾಲೂಕಿಗಾಗಿ ಹೋರಾಟ ನಡೆದಾಗ ನಾನು ಶಾಸಕನಾಗಿರದಿದ್ದರೂ ಹೋರಾಟಗಾರರ ಮನವಿ ಮೇರೆಗೆ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ತಾಲೂಕು ಕೇಂದ್ರ ಘೋಷಣೆ ಮಾಡಿಸಿದ್ದೆ. ಮುಂದೆ ಶತ ಪ್ರಯತ್ನ ಮಾಡಿ ಮುಳವಾಡ ಏತ ನೀರಾವರಿಯಲ್ಲೂ ಕ್ಷೇತ್ರವನ್ನು ಸೇರಿಸಿ ಸಿದ್ಧೇಶ್ವರ ಶ್ರೀಗಳ ಆಶಯದಂತೆ ನೀರು ಹರಿಸಿದ್ದೇನೆ. ಬಬಲೇಶ್ವರ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಯುವಕರಿಗಾಗಿ ಇಲ್ಲಿ ಶೀಘ್ರದಲ್ಲಿ ಅತ್ಯಾಧುನಿಕ ಜಿಮ್ ಆರಂಭಿಸಲಾಗುವುದು. ಎಲ್ಲ ಶಾಲೆಗಳಿಗೆ ಸಲಕರಣೆಗಳನ್ನು ನೀಡಲಾಗಿದೆ. 8 ರಿಂದ 10ನೇ ತರಗತಿ ಈಗ ಸ್ಮಾರ್ಟಕ್ಲಾಸ್ ಸೌಲಭ್ಯ ಒದಗಿಸಲಾಗಿದ್ದು, ಮುಂಬರುವ ದಿನಗಳಲ್ಲಿ 5ನೇ ತರಗತಿಯಿಂದ 7ನೇ ತರಗತಿಗಳಿಗೂ ಸ್ಮಾರ್ಟ್ ಕ್ಲಾಸ್‌ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಕೆರೆ ತುಂಬಿಸುವ ಯೋಜನೆ ಸಫಲವಾಗಿದ್ದು, ಈಗ ಹಳ್ಳಗಳನ್ನು ತುಂಬುವ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಸಲ ದ್ರಾಕ್ಷಿ ಬೆಳೆದು ಹಲವಾರು ರೈತರು ಕೋಟಿಗಟ್ಡಲೇ ಆದಾಯ ಗಳಿಸಿದ್ದಾರೆ. ಹೀಗಾಗಿ, ಯಾರೂ ತಮ್ಮ ಭೂಮಿಗಳನ್ನು ಮಾರಬೇಡಿ. ಈ ಭೂಮಿ ನಿಮಗಷ್ಟೇ ಅಲ್ಲ, ನಿಮ್ಮ ಮುಂದಿನ ಪೀಳಿಗೆಗೂ ಬದುಕು ಕಟ್ಟಿಕೊಳ್ಳಲು ಅಗತ್ಯವಾಗಿದೆ. ಈ ಭೂಮಿಗೆ ಬಂಗಾರದ ನನ್ನ ಬೆಲೆ ತರುವ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿರುವ ತೃಪ್ತಿ ನನಗಿದೆ. ಇಲ್ಲಿನ ಶ್ರೀ ಗುರುಪಾದೇಶ್ವರು, ಶಾಂತವೀರ ಅಪ್ಪಗಳ ಆಶೀರ್ವಾದ ಸದಾ ನನ್ನ ಮೇಲಿದೆ ಇದೆ ಎಂದು ಸಚಿವರು ಹೇಳಿದರು.ಮುಖಂಡ ವಿ.ಎನ್.ಬಿರಾದಾರ ಮಾತನಾಡಿದರು. ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರು, ಮುಖಂಡರಾದ ಈರನಗೌಡ ಬಿರಾದಾರ, ಮಲ್ಲು ದಳವಾಯಿ, ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿ.ಎಸ್.ಪಾಟೀಲ, ವಿದ್ಯಾರಾಣಿ ತುಂಗಳ, ಉಮೇಶ ಮಲ್ಲನ್ನವರ, ಆನಂದ ಬೂದಿಹಾಳ, ಜಿಲ್ಲಾ ಆರೋಗ್ಯಾಧಿಕಾರಿ‌‌ ಡಾ.ಮಲ್ಲನಗೌಡ ಬಿರಾದಾರ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ‌ ರಾಜಶೇಖರ ದೈವಾಡಿ, ಅಗ್ನಿಶಾಮಕ ಸೇವೆ ಇಲಾಖೆ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚತುರ್ಮಾಸ: ಜೈನಮುನಿಗಳ ಅದ್ಧೂರಿ ಪುರಪ್ರವೇಶ
ಅಕ್ಕಮಹಾದೇವಿ ವಿವಿ ಮಹಿಳಾ ಶಿಕ್ಷಣದಲ್ಲಿ ರಾಜ್ಯಕ್ಕೆ ಮಾದರಿ