ಕನ್ನಡಪ್ರಭ ವಾರ್ತೆ ಯಾದಗಿರಿ
2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ರಾಜಾ ವೆಂಕಟಪ್ಪ ನಾಯಕ್ (ಆರ್‌ವಿಎನ್)ರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಈ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌ವಿಎನ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ, ಮಾಜಿ ಸಚಿವ ಬಿಜೆಪಿ ನರಸಿಂಹ ನಾಯಕ (ರಾಜೂಗೌಡ) ವಿರುದ್ಧ ಸುಮಾರು 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಸುರಪುರ ಕಾಂಗ್ರೆಸ್ ಪಾಳೆಯದಲ್ಲಿ ಹರ್ಷ ಮೂಡಿದ್ದು, ವಿಜಯೋತ್ಸಾಹ ಮುಗಿಲು ಮುಟ್ಟಿದೆ. ಗೆಲುವು ಕಂಡ ರಾಜಾ ವೇಣು ಗೋಪಾಲ ನಾಯಕ ಅವರು ಖುಷಿಯ ಮಧ್ಯೆಯೂ ತಂದೆ ಆರ್‌ವಿಎನ್ ನೆನೆದು ಭಾವುಕರಾದರು. ಸುರಪುರ ನಾಯಕರ ಜಿದ್ದಾಜಿದ್ದಿ ಈ ಚುನಾವಣೆಯ ಭಾರಿ ಕುತೂಹಲ ಕೆರಳಿಸಿತ್ತು.2023ರ ಚುನಾವಣೆಯಲ್ಲಿ ದಿ.ರಾಜಾ ವೆಂಕಟಪ್ಪ ನಾಯಕ ವಿರುದ್ಧ ಸುಮಾರು 25 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದ ಬಿಜೆಪಿ ರಾಜೂಗೌಡರು, ಇದೀಗ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ವಿರುದ್ಧವೂ ಸೋಲು ಕಂಡಿದ್ದಾರೆ. ಈ ಹಿಂದೆ ನಡೆದಿದ್ದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜಾ ವೇಣುಗೋಪಾಲ ನಾಯಕ, ಈಗ ಶಾಸಕ ಸ್ಥಾನಕ್ಕೆ ಭಾರಿ ಮತಗಳ ಅಂತರದಲ್ಲಿ ಆಯ್ಕೆಯಾಗಿರುವುದು ವಿಶೇಷ.
ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮತ ಎಣಿಕೆ ವೇಳೆ ಮೊದಲ ಸುತ್ತಿನಲ್ಲಿ ಕೇವಲ 14 ಮತಗಳ ಅಂತರದಿಂದ ಬಿಜೆಪಿ ರಾಜೂಗೌಡರು ಮುಂದಿದ್ದರೂ, ನಂತರ ಉಳಿದ 22 ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತ ಸಾಗಿತ್ತು. ಪ್ರತಿ ಸುತ್ತಿನಲ್ಲೂ ಸಾವಿರ, 2 ಸಾವಿರ, ಮೂರು ಸಾವಿರ, ನಾಲ್ಕು ಸಾವಿರ.. ಐದು. ಆರು... ಏಳು.. ಹೀಗೆ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ನಾಗಾಲೋಟ ಮುಂದುವರೆದಿತ್ತು.
ಹಲವು ಸುತ್ತುಗಳ ನಂತರ ಕಾಂಗ್ರೆಸ್ ಗೆಲುವಿನತ್ತ ನಾಗಾಲೋಟ ಮುಂದುವರೆದಂತೆ, ರಾಜೂಗೌಡರು ಮತ ಎಣಿಕೆ ಕೇಂದ್ರದಿಂದ ಹೊರನಡೆದರು.
ರಾಜಾ ವೇಣುಗೋಪಾಲ ನಾಯಕ, ವಿಜೇತ ಕಾಂಗ್ರೆಸ್ ಅಭ್ಯರ್ಥಿ, ಸುರಪುರ ವಿಧಾನಸಭೆ ಉಪ ಚುನಾವಣೆ.
ನರಸಿಂಹ ನಾಯಕ (ರಾಜೂಗೌಡ), ಪರಾಜಿತ ಬಿಜೆಪಿ ಅಭ್ಯರ್ಥಿ, ಸುರಪುರ ವಿಧಾನಸಭೆ ಉಪ ಚುನಾವಣೆ.
1ನೇ ಸುತ್ತು : 14 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ
3ನೇ ಸುತ್ತು : 2,255 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
4ನೇ ಸುತ್ತು : 3,628 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ5ನೇ ಸುತ್ತು : 5,743 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
6ನೇ ಸುತ್ತು : 6,833 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ7ನೇ ಸುತ್ತು : 9,142 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
8ನೇ ಸುತ್ತು : 12,272 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ9ನೇ ಸುತ್ತು : 13,659 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
10ನೇ ಸುತ್ತು : 14,407 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ11ನೇ ಸುತ್ತು : 14,770 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
12ನೇ ಸುತ್ತು : 15,946 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ13ನೇ ಸುತ್ತು : 16,651 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
14ನೇ ಸುತ್ತು : 16,989 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ15ನೇ ಸುತ್ತು : 17,905 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
16ನೇ ಸುತ್ತು : 19,291 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ17ನೇ ಸುತ್ತು : 19,144 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
18ನೇ ಸುತ್ತು : 21,255 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ19ನೇ ಸುತ್ತು : 20,482 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
20ನೇ ಸುತ್ತು : 18,550 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ21ನೇ ಸುತ್ತು : 17,955 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
22ನೇ ಸುತ್ತು : 17,417 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ23ನೇ ಸುತ್ತು : 18,238 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
ಅಂಚೆ ಮತಗಳು : 82 ಕಾಂಗ್ರೆಸ್‌ಗೆ ಲೀಡ್