ನಾಗಮಂಗಲ:
ತಬಸಮ್ (44) ಶವ ದೊರೆತಿದ್ದು, ಕಳೆದ ಮೂರು ದಿನಗಳಿಂದೀಚೆಗೆ ಐವರು ಮೃತದೇಹಗಳು ಪತ್ತೆಯಾಗಿವೆ. ಮಗುವಿನ ಶವಕ್ಕೆ ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ.
ಬುಧವಾರ ಶೋಧ ಕಾರ್ಯ ನಡೆದು ಬಾಲಕ ಸೇರಿ ಇಬ್ಬರ ಶವಗಳು ಪತ್ತೆಯಾಗಿದ್ದವು. ಗುರುವಾರ ಬೆಳಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದಾಗ 6 ಮಂದಿ ಕೊಚ್ಚಿ ಹೋದ ಜಾಗದಿಂದ ಸುಮಾರು 6 ಕಿ.ಮೀ ದೂರದಲ್ಲಿ ತಬಸಮ್ (44) ಶವ ಪತ್ತೆಯಾಯಿತು. ತಬಸಮ್ ಸೇರಿ ಶಾಬಿಯಾ, ಅರ್ಬಿನ್, ಮಿಫ್ರಾ, ಶಬಾನಾ ಐವರ ಮೃತದೇಹ ಪತ್ತೆಯಾಗಿವೆ. 1 ವರ್ಷದ ಮಹಿಬ್ ಎಂಬ ಮಗುವಿಗಾಗಿ ಹುಡುಕಾಟ ನಡೆದಿದೆ.ಮಂಡ್ಯ, ತುಮಕೂರು ಜಿಲ್ಲೆಯ 29 ಮಂದಿ ಅಗ್ನಿಶಾಮಕದಳದ ಅಧಿಕಾರಿ, ಸಿಬ್ಬಂದಿಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೊಂದು ಬಾಲಕನ ಮೃತದೇಹಕ್ಕಾಗಿ ಶುಕ್ರವಾರ ಶೋಧ ಕಾರ್ಯ ಮುಂದುವರೆಯಲಿದೆ.