ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯನ್ನು ಜೂ.19ರಂದು ಆಚರಿಸಲು ನಿರ್ಧರಿಸಲಾಯಿತು.
ಕಂಪ್ಲಿ: ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಹಶೀಲ್ದಾರ ಶಿವರಾಜ ಶಿವಪುರ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳೊಂದಿಗೆ ಬಾಲಕಾರ್ಮಿಕ ಪದ್ಧತಿ ವಿರೋದಿ ದಿನಾಚರಣೆಯನ್ನು ಆಚರಣೆ ಮಾಡುವ ಪೂರ್ವಭಾವಿ ಸಭೆ ಶನಿವಾರ ಜರುಗಿತು.
ತಹಶೀಲ್ದಾರ ಶಿವರಾಜ ಶಿವಪುರ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದದರು. ಬಳಿಕ ಮಾತನಾಡಿ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯನ್ನು ಜೂ.19ರಂದು ಆಚರಿಸಲು ನಿರ್ಧರಿಸಲಾಯಿತು. ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಪದ್ಧತಿ ವಿರೋದಿ ದಿನಾಚರಣೆ ಜಾಥಾವನ್ನು ಪುರಸಭೆ ಮುಂಭಾಗದ ಬಿ.ಎಸ್.ವಿ ಶಾಲೆಯಿಂದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಜಾಗೃತಿ ಜಾಥಾ ಮಾಡಲಾಗುವುದು ಬಿ.ಎಸ್.ವಿ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಮಾಡಲಾಗುವುದು ಎಂದರು.ತಾಲೂಕು ಮಟ್ಟದ ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಷಣ್ಮುಕಪ್ಪ, ಉಪತಹಶೀಲ್ದಾರ ರವಿಂದ್ರಕುಮಾರ, ಶಿರಸ್ತೆದಾರ ಪಂಪಾಪತಿ, ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ, ಕಾರ್ಮಿಕ ನೀರಿಕ್ಷಕ ಆಶೋಕ, ಕೆಸಿಆರ್ ಡಿ ಹೆಚ್.ಸಿ.ರಾಘವೇಂದ್ರ, ಬಾಲಕಾರ್ಮಿಕ ಯೋಜನೆ ಕ್ಷೇತ್ರ ಅಧಿಕಾರಿ ಈಶ್ವರ, ತಾಪಂ ವ್ಯವಸ್ಥಾಪಕಿ ಅಪರಂಜಿ, ಆರೋಗ್ಯ ಇಲಾಖೆಯ ಪಿ.ಬಸವರಾಜ
ಪುರಸಭೆ ಆರೋಗ್ಯ ನೀರಿಕ್ಷಕ ಪ್ರಕಾಶಬಾಬು, ನೀರಾವರಿ ಇಲಾಖೆಯ ಸಿಬ್ಬಂದಿ ಶಭುಲಿಂಗಯ್ಯಸ್ವಾಮಿ, ಅರಣ್ಯ ಇಲಾಖೆ ರಾಘವೇಂದ್ರ, ಮೇಲ್ವಿಚಾರಕಿ ಉಷಾ, ಎಎಸ್ ಐ ಎಚ್.ಗಂಗಣ್ಣ, ಕೃಷಿ ಇಲಾಖೆಯ ಜ್ಯೋತಿ, ಉಪನ್ಯಾಸಕ ವಾಮದೇವ, ತಾಲೂಕು ಕಚೇರಿಯ ಎಫ್.ಡಿಎಗಳಾದ ಶ್ರೀನಿವಾಸ, ಮಾಲತೇಶ ದೇಶಪಾಂಡೆ, ನವಜೀವನ ಇಐಡಬ್ಲು ಹುಲಿಗೆಮ್ಮ ಸೇರಿದಂತೆ ಅನೇಕರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.