ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಾಲ್ಪಾಡಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸೋಮನಾಥ ಕೋಟ್ಯಾನ್, ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು, ಸದಸ್ಯರಾದ ಪ್ರದೀಪ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ದರೆಗುಡ್ಡೆ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಗ್ರಾಮದ ಪ್ರಮುಖರು ಸೇರಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಬಿಜೆಪಿ ಮಂಡಲ ಉಪಾಧ್ಯಕ್ಷ ಸೂರಜ್ ಜೈನ್, ಕರಾವಳಿ ಕೇಸರಿ ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿದರು. ಪ್ರಮುಖರಾದ ಮುನಿರಾಜ ಹೆಗ್ಡೆ, ಸಂತೋಷ್ ಪೂಜಾರಿ ಮತ್ತಿತರರಿದ್ದರು.ಇರುವೈಲು ಪಂಚಾಯಿತಿ: ಇರುವೈಲು ಗ್ರಾಪಂ ಕಾರ್ಯಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಮುಗೇರ, ಸದಸ್ಯರಾದ ನಾಗೇಶ್ ಅಮೀನ್, ನವೀನ್ ಪೂಜಾರಿ ಕಿಟ್ಟುಬೆಟ್ಟು, ರುಕ್ಮಿಣಿ, ಮೋಹಿನಿ, ಕುಸುಮ, ಜಯಶಂಕರ್, ಉಷಾ ಭಾಗವಹಿಸಿದರು.ಪುತ್ತಿಗೆ ಪಂಚಾಯಿತಿ:ಪುತ್ತಿಗೆ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ದ.ಕ. ಜಿಲ್ಲಾ ಸದಸ್ಯರಾದ ನ್ಯಾಯವಾದಿ ಎಂ.ಬಾಹುಬಲಿ ಪ್ರಸಾದ್ ಮಾತನಾಡಿದರು. ಪುತ್ತಿಗೆಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗವರ್ಮ ಜೈನ್, ಮಾಜಿ ಅಧ್ಯಕ್ಷ ಶಶಿಧರ್ ಪಿ. ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್ ಗೌಡ, ಸುಮ ಭಟ್, ಸಾರಿಕಾ ಆಚಾರ್ಯ, ಅಪ್ಪಿ ಹಾಗೂ ಇತರ ಸದಸ್ಯರು ಇದ್ದರು.ಪಾಲಡ್ಕ ಪಂಚಾಯಿತಿ:ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿಯ ಬಗ್ಗೆ ಪಕ್ಷದ ಪ್ರಮುಖ ಹಾಗೂ ಹಿರಿಯ ನ್ಯಾಯವಾದಿ ಕೆ.ಆರ್ ಪಂಡಿತ್ ಮಾತನಾಡಿದರು. ಈ ಸಂದರ್ಭ ಮೂಲ್ಕಿ-ಮೂಡುಬಿದಿರೆ ಮಂಡಲ ಯುವಮೊರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಮಂಡಲ ಕಾರ್ಯಕಾರಣಿ ಸದಸ್ಯ ಮೋಹನ್ ಶೆಟ್ಟಿ, ಕಡಂದಲೆ ಶಕ್ತಿಕೇಂದ್ರ ಪ್ರಮುಖ್ ಸಂತೋಷ್ ಭಂಡಾರಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.