ಕನ್ನಡಪ್ರಭ ವಾರ್ತೆ ಯಳಂದೂರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಯಳಂದೂರು ವತಿಯಿಂದ ಪಟ್ಟಣದ ಜೆಎಸ್ಎಸ್ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಎ ಎಸ್ ಐ ಮಹಾದೇವಪ್ಪ ಮಾತನಾಡಿ,ವ್ಯಕ್ತಿಯ ಜೀವನವಿಡೀ ಮಾದಕ ವಸ್ತುವಿನ ಸುತ್ತವೇ ತಿರುಗಲಾರಂಭಿಸುತ್ತದೆ. ಸಮಯ ಕಳೆದಂತೆ ವ್ಯಕ್ತಿಯ ದಿನಚರಿ ಕೇವಲ ಮಾದಕ ವಸ್ತುವಿನಲ್ಲಿಯೇ ಮುಳುಗಿರುತ್ತದೆಯಲ್ಲದೆ. ಆತನ ಎಲ್ಲ ಚಟುವಟಿಕೆಗಳು ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಮಾರ್ಪಾಟಾಗುತ್ತವೆ. ಆತನ ಆಲೋಚನೆಗಳೆಲ್ಲವುಗಳೂ ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ ಇರುತ್ತವೆ. ಮಾದಕ ವಸ್ತುವಿನಿಂದ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆಯೆಂದು ಗೊತ್ತಿದ್ದರೂ ಆ ಹಾನಿಯನ್ನು ಅನುಭವಿಸುತ್ತಿದ್ದರೂ ಅದರ ಬಳಕೆ ಮುಂದುವರಿಸುತ್ತಾರೆ. ಮದ್ಯಪಾನದಿಂದ ಲಿವರ್ ಹಾಳಾಗಿ ಜಾಂಡೀಸ್ (ಕಾಮಾಲೆ ರೋಗ) ಆಗಿದ್ದರೂ ಮದ್ಯಪಾನವನ್ನು ಮುಂದುವರಿಸುವುದು, ಒಂದು ಸಲ ಗಾಂಜಾ ಸೇವನೆಯಿಂದ ಚಿತ್ತಭ್ರಮೆಯಾಗಿ ಏನೇನೋ ವಿಚಿತ್ರ ಅನುಭವಗಳಾಗಿ ಚಿಕಿತ್ಸೆಗಾಗಿ ವಾರಗಟ್ಟಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅನಂತರವೂ ಪುನಃ ಗಾಂಜಾ ಸೇದುವುದು, ಸಿಗರೇಟ್ ಸೇದುವುದರಿಂದ ಹಾರ್ಟ್ ಅಟ್ಯಾಕ್ (ಹೃದಯಾಘಾತ) ಆಗಿದ್ದರೂ ಸಿಗರೇಟ್ ಸೇದುವುದನ್ನು ನಿಲ್ಲಿಸಬೇಕೆಂದು ಕಾಲೇಜು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕಿನ ಯೋಜನಾಧಿಕಾರಿ ಆನಂದ ಗೌಡ ಮದ್ಯಪಾನ, ಧೂಮಪಾನದಂತಹ ದುಷ್ಟಗಳಿಗೆಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಹಿಸಿಕೊಂಡಿದ್ದರು. ವಲಯ ಮೇಲ್ವಿಚಾರಕರಾದ ಶಿವಶಂಕರ್ ,ಕೃಷಿ ಮೇಲ್ವಿಚಾರಕರಾದ ಶಿವಕುಮಾರ ಕಾಲೇಜಿನ ಉಪನ್ಯಾಸಕರು ,ಸೇವಾ ಪ್ರತಿನಿಧಿಗಳಾದ ರಜನಿ, ಪದ್ಮ ,ಕಾಲೇಜು ವಿದ್ಯಾರ್ಥಿನಿಯರು, ಸಂಘದ ಸದಸ್ಯರು ಹಾಜರಿದ್ದರು.ನ