ಮೋದಿಯಿಂದ ಕಾರ್ಮಿಕ, ಧರ್ಮ ವಿರೋಧಿ ಕಾನೂನು ಜಾರಿ

KannadaprabhaNewsNetwork |  
Published : Aug 12, 2025, 12:30 AM IST
12ುಲು5 | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಕಾರ್ಮಿಕ ಹಾಗೂ ಧರ್ಮ ವಿರೋಧಿ ಕಾನೂನು ಜಾರಿಗೊಳಿಸಲು ಹೊರಟಿದೆ. ಸದ್ಯ ವಕ್ಫ್ ವಸೂದೆ ತಿದ್ದುಪಡಿ ಮಾಡುವ ಮೂಲಕ ಮುಸ್ಲಿಂರನ್ನು ಬದುಕಿದ್ದು ಸತ್ತಂತೆ ಮಾಡುತ್ತಿದೆ. ವಕ್ಫ್ ತಿದ್ದುಪಡೆಯಾದರೆ ಮುಸ್ಲಿಂರಿಗೆ ಯಾವುದೇ ಹಕ್ಕು ಇರುವುದಿಲ್ಲ.

ಗಂಗಾವತಿ:

ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕ ಹಾಗೂ ಧರ್ಮ ವಿರೋಧಿ ಕಾನೂನು ಜಾರಿಗೆ ತರಲು ಹೊರಟಿದ್ದಾರೆಂದು ಚಿಂತಕ ಶಿವಸುಂದರ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಅಖಿಲ ಭಾರತ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಸೋಮವಾರ ಹಮ್ಮಿಕೊಂಡ ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಕಾರ್ಮಿಕ ಹಾಗೂ ಧರ್ಮ ವಿರೋಧಿ ಕಾನೂನು ಜಾರಿಗೊಳಿಸಲು ಹೊರಟಿದೆ. ಸದ್ಯ ವಕ್ಫ್ ವಸೂದೆ ತಿದ್ದುಪಡಿ ಮಾಡುವ ಮೂಲಕ ಮುಸ್ಲಿಂರನ್ನು ಬದುಕಿದ್ದು ಸತ್ತಂತೆ ಮಾಡುತ್ತಿದೆ. ವಕ್ಫ್ ತಿದ್ದುಪಡೆಯಾದರೆ ಮುಸ್ಲಿಂರಿಗೆ ಯಾವುದೇ ಹಕ್ಕು ಇರುವುದಿಲ್ಲ. ಅವರು ದೇಶದ 2ನೇ ದರ್ಜೆಯ ಪ್ರಜಾಗಳಾಗುತ್ತಾರೆಂದು ಕಳವಳ ವ್ಯಕ್ತಪಡಿಸಿದ ಅವರು, ಮೋದಿ ಸಾವರ್ಕರ ಸಿದ್ಧಾಂತ ಹೊಂದಿದ್ದಾರೆ. ಮುಸ್ಲಿಂರನ್ನು ಕಡೆಗಣಿಸಿ ಮುಸ್ಲಿಂರ ಸಂಖ್ಯೆ ಕ್ಷಿಣಿಸುವುದೇ ಅವರ ಕೆಲಸವಾಗಿದೆ. ಇದಕ್ಕಾಗಿ ಸಂಘ ಪರಿವಾರದೊಂದಿಗೆ ಜತೆಗೂಡಿ ಅಲ್ಪಸಂಖ್ಯಾತರ ಹಾಗೂ ಹಿಂದೂಗಳ ನಡುವೆ ಗಲಾಟೆ ನಡೆಸಿ ಸಮಾಜದಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಂರನ್ನು ಮುಂದಿಟ್ಟುಕೊಂಡು ದಲಿತರು, ಕ್ರಿಶ್ಚಿಯನಯರನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಜನರು ಮೋದಿಗೆ ಬುದ್ಧಿ ಕಲಿಸಿದರು ಎರಡು ಪಕ್ಷಗಳ ಜತೆಗೆ ಅಧಿಕಾರ ಹಿಡಿದು ಮತ್ತೆ ಮುಸ್ಲಿಂ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ವಕ್ಫ್ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಈ ವೇಳೆ ಪ್ರಮುಖರಾದ ಸೈಯದ್ ಸರ್ವರ್‌ ಚಿಪ್ತಿ, ಸೈಯದ್ ಬದ್ರುದ್ದೀನ್ ಖಾದ್ರಿ, ಸೈಯದ್ ತನ್ವೀರ್ ಹಾಷ್ಮಿ, ಅಬೂತಾಲಿಬ್ ರಹ್ಮಾನಿ, ಇಫ್ತೆಖಾರ ಅಹ್ಮದ್ ಖಾಸ್ಮಿ, ಜನಾಬ್‌ ಅಬ್ದುಲ್ ಮಜೀದ್, ಮುಹ್ಮದ್ ಅಲಿ ಹಾಗೂ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ