ಗೌರಿಬಿದನೂರಿಗಿಂದು ಎಸ್ಐಆರ್‌ ವಿರೋಧಿ ಜನಜಾಗೃತಿ ಜಾಥಾ

KannadaprabhaNewsNetwork |  
Published : Jun 14, 2026, 02:00 AM IST
ಎಸ್‌ಐಆರ್ ವಿರುದ್ಧ ಜನಜಾಗೃತಿ ಜಾಥಾ: ಮತದಾರರ ಹಕ್ಕು ರಕ್ಷಣೆಗೆ ಕರೆ | Kannada Prabha

ಸಾರಾಂಶ

ಎಸ್ಐಆರ್ ವಿರುದ್ಧ ಜನಜಾಗೃತಿ ಮೂಡಿಸಲು ತುಮಕೂರಿನಿಂದ ಆರಂಭಗೊಂಡಿರುವ ಜನಜಾಗೃತಿ ಜಾಥಾ ಜೂ.14ರಂದು ಗೌರಿಬಿದನೂರಿಗೆ ಆಗಮಿಸಲಿದೆ ಎಂದು ಎದ್ದೇಳು ಕರ್ನಾಟಕ ಸಂಯೋಜಕ ಜಿ. ಸೋಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಗೌರಿಬಿದನೂರುಎಸ್ಐಆರ್ ವಿರುದ್ಧ ಜನಜಾಗೃತಿ ಮೂಡಿಸಲು ತುಮಕೂರಿನಿಂದ ಆರಂಭಗೊಂಡಿರುವ ಜನಜಾಗೃತಿ ಜಾಥಾ ಜೂ.14ರಂದು ಗೌರಿಬಿದನೂರಿಗೆ ಆಗಮಿಸಲಿದೆ ಎಂದು ಎದ್ದೇಳು ಕರ್ನಾಟಕ ಸಂಯೋಜಕ ಜಿ. ಸೋಮಯ್ಯ ತಿಳಿಸಿದರು.

ನಗರದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಪಕ್ಷಗಳು, ಪ್ರಗತಿಪರ ಸಂಘಟನೆಗಳು ಸೇರಿ ಸಂವಿಧಾನದ ಸಂರಕ್ಷಣೆಯ ಕುರಿತು ಕಾಳಜಿ ಇರುವ ಮನಸ್ಸುಗಳು ಈ ಜಾಥಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಎಸ್ಐಆರ್ ಎಂಬುದು ಸಂವಿಧಾನದಲ್ಲಿ ಇಲ್ಲದ, ಚುನಾವಣಾ ಆಯೋಗದ ನಿಯಮ ಉಲ್ಲಂಘಿಸುವ, ಜನಸಾಮಾನ್ಯರನ್ನು ಎಸ್ಐಆರ್ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ ಮತಪಟ್ಟಿ ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿರುವ ಪರಿಷ್ಕರಣೆ ಪದ್ಧತಿಯಾಗಿದೆ. ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕು ನಿರಾಕರಿಸುವುದು ಪ್ರಜಾತಂತ್ರ ವ್ಯವಸ್ಥೆ ದುರಂತ ಎಂದು ಎಸ್ಐಆ‌ರ್ ವಿರೋಧಿ ಜಾತ್ಯತೀತ ಪಕ್ಷಗಳ ಒಕ್ಕೂಟ ಆರೋಪಿಸಿದೆ.ರಾಜ್ಯ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿ ಖಜಾಂಚಿ ಶ್ರೀರಂಗಾಚಾರಿ ಮಾತನಾಡಿ, ಆಯೋಗ ಎಸ್ಐಆರ್ ಮೂಲಕ ನುಸುಳುಕೋರರನ್ನು ಪತ್ತೆ ಹಚ್ಚುತ್ತಿಲ್ಲ, ಬದಲಿಗೆ ಬಿಜೆಪಿ ತನ್ನ ವಿರೋಧ ಪಕ್ಷಗಳ ಹಿಡಿತ ಹೆಚ್ಚಾಗಿರುವ ಮತ್ತು ವಿರೋಧ ಪಕ್ಷಕ್ಕೆ ಹೆಚ್ಚಾಗಿ ಓಟು ಹಾಕುವ ಸಮುದಾಯಗಳ ಮತಗಳನ್ನು ಕತ್ತರಿಸಿ ಅವರು ಗೆಲ್ಲಲಾಗದ ತಳಪಾಯವನ್ನು ಸೃಷ್ಟಿ ಮಾಡುವುದಾಗಿದೆ. ಜೊತೆಗೆ, ಮತದಾನದ ಹಕ್ಕು ಇಲ್ಲದ ಎರಡನೇ ದರ್ಜೆಯ ಜನ ವರ್ಗವನ್ನು ಸೃಷ್ಟಿಸುವ ಅಜೆಂಡಾ ಎಸ್ಐಆರ್ ನಲ್ಲಿ ಆಡಗಿದೆ. ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಶಾಮೀರ್, ಕಾಂಗ್ರೆಸ್‌ ವಕ್ತಾರರಾದ ತಾರನಾಥ್‌, ನಾರಾಯಣಪ್ಪ. ನರಸಿಂಹಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಫೆರಲ್ ರಿಂಗ್ ರೋಡ್‌ಗೆಎಸ್‌ಎನ್‌ಸಿ ಅಧಿಕೃತ ಒಪ್ಪಿಗೆ
2.3 ಲಕ್ಷ ಸ್ಟಾರ್ಟಪ್‌ಗಳಿಂದ 25 ಲಕ್ಷ ಉದ್ಯೋಗ ಸೃಷ್ಟಿ: ಸಿಂಗ್