ಬಸವಕಲ್ಯಾಣ: ಪ್ರತಿವರ್ಷ ಅನುಭವ ಮಂಟಪ ಉತ್ಸವದಲ್ಲಿ ಕೊಡ ಮಾಡುವ 3 ಪ್ರಶಸ್ತಿಗಳಿಗೆ ಈ ಕೆಳಕಂಡ ಗಣ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು ಹಾಗೂ ಕಾರ್ಯದರ್ಶಿ ಡಾ.ಎಸ್.ಬಿ ದುರ್ಗೆ ತಿಳಿಸಿದ್ದಾರೆ.
ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇದಕ್ಕೆ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಅನುಭವ ಮಂಟಪ ರಾಷ್ಟ್ರೀಯ ಪುರಸ್ಕಾರ ಇದೇ ವರ್ಷದಿಂದ ಪ್ರಾರಂಭಿಸಲಾಗಿದ್ದು, ಇದು ಸಹ ಒಂದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇದಕ್ಕೆ ಇಸ್ರೋ ವಿಜ್ಞಾನಿ ಎಸ್.ಸೋಮನಾಥ ಅವರನ್ನು ಆಯ್ಕೆ ಮಾಡಲಾಗಿದೆ.ಎಂ.ಎಂ ಕಲಬುರಗಿ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿಯು 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಈ ಪ್ರಶಸ್ತಿಗೆ ಧಾರವಾಡ ವಿವಿಯ ಪ್ರಾಧ್ಯಾಪಕ ಡಾ. ಬಿ.ವಿ.ಶಿರೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಬಸವಲಿಂಗ ಪಟ್ಟದೇವರು ತಿಳಿಸಿದ್ದಾರೆ.