ಕನ್ನಡಪ್ರಭ ವಾರ್ತೆ ದಾಂಡೇಲಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆಯ ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಗೌಡ, ಮನುಷ್ಯ ನಿರ್ಮಿತ ವ್ಯವಸ್ಥೆಯೊಂದಿಗೆ ಮನುಷ್ಯನ ಬದುಕು ಬೆಸೆದು ಅದರ ಆತಂಕ, ತಳಮಳ ಹಾಗೂ ಜೀವಸಲೆ ಪ್ರತಿ ಕಾದಂಬರಿಯ ವಿಷಯ ವಸ್ತುವಾಗಿದೆ. ಜಾತಿ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಬಿಂಬಿಸಿ ಕಾದಂಬರಿಯ ಕಟ್ಟಿಕೊಟ್ಟು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಸ್ಥಾನಮಾನ ಪಡೆದವರಲ್ಲಿ ಎಸ್.ಎಲ್. ಭೈರಪ್ಪ ಪ್ರಮುಖರು ಎಂದು ಹೇಳಿದರು.
ಸಾಹಿತ್ಯ ಚಿಂತಕ ಎಂ.ಆರ್. ನಾಯಕ್ ಮಾತನಾಡಿ, ಒಂದು ಕಾದಂಬರಿಯನ್ನು ಇಡಿಯಾಗಿ ಕುಳಿತು ಓದುವುದಕ್ಕೂ ಅದನ್ನು ಉಪನ್ಯಾಸ ರೂಪದಲ್ಲಿ ಕೇಳುವುದಕ್ಕೂ ವ್ಯತ್ಯಾಸಗಳಿವೆ. ಕಾದಂಬರಿಯ ವಿಷಯ ವಸ್ತು ಒಂದೇ ಆಗಿದ್ದರೂ ಗ್ರಹಿಕೆಯ ಮೊದಲುಗಳು ಹಲವಾರು ಆಗಿರುತ್ತವೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೋಶಾಧ್ಯಕ್ಷ ಮುರ್ತಜಾ ಆನೆಹೊಸೂರು, ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ, ಕವಯಿತ್ರಿ ವೆಂಕಮ್ಮ ಗಾಂವಕರ ಮಾತನಾಡಿದರು.
ಕಸಾಪ ದಾಂಡೇಲಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಗುರುಶಾಂತ ಜಡೆ ಹಿರೇಮಠ ಮತ್ತು ಪ್ರವೀಣ ನಾಯ್ಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಸಾಪ ತಾಲೂಕು ಘಟಕದ ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ಸ್ವಾಗತಿಸಿದರು. ಕಸಾಪ ಅಜೀವ ಸದಸ್ಯೆ ಜಲಜಾ ವಾಸರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ದಾಸೋಹಿ ವೆಂಕಮ್ಮ ಗಾಂವಕರ ಕುಟುಂಬದವರನ್ನು ಸನ್ಮಾನಿಸಲಾಯಿತು.