ರಾಮನಗರ: ತಾಲೂಕಿನ ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅನುಸೂಯಮ್ಮ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಮಳವಳ್ಳಿ ರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಬಾಳ್ವೆ, ಸಮನ್ವಯತೆ ಇದ್ದಾಗ ಮಾತ್ರ ಪಿಎಸಿಎಂಎಸ್ ಸಂಘಗಳು ಉಳಿಯಲು ಮತ್ತು ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯ. ಅಂತಹ ಒಂದು ವಾತಾವರಣ ಹಳ್ಳಿಮಾಳ ಪಿಎಸಿಎಂಎಸ್ ನಲ್ಲಿ ಮೂಡಿ ಮಹಿಳೆ ಅನುಸೂಯಮ್ಮ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಅಧ್ಯಕ್ಷೆ ಅನುಸೂಯಮ್ಮ ಅವರನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಮಳವಳ್ಳಿ ರಾಜು, ಕೆ.ಬಿ.ರಾಜಣ್ಣ, ನರಸಿಂಹ ಮೂರ್ತಿ, ಸಂಘದ ಉಪಾಧ್ಯಕ್ಷ ಮಾದಯ್ಯ ನಿರ್ದೇಶಕರಾದ ರವಿ, ಸಂದೀಪ್, ಚೈತ್ರಾ, ನಾಗಯ್ಯ ಮತ್ತಿತರರು ಅಭಿನಂದಿಸಿದರು.24ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಹಳ್ಳಿಮಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆ ಅನುಸೂಯಮ್ಮ ಅವರನ್ನು ಮುಖಂಡರು ಅಭಿನಂದಿಸಿದರು.